Advertisement
ವಿದ್ಯಾರ್ಥಿ ನಿಲಯಕ್ಕೆ ನೂತನ ಕಟ್ಟಡ ನಿರ್ಮಿಸಲು 2.5 ಕೋಟಿ ರೂ. ಮಂಜೂರುಗೊಂಡಿದ್ದು, ಕಾದಿರಿಸಿದ ಜಮೀನಿನಲ್ಲಿ ಕಟ್ಟಡದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಯಿಂದ ನಡೆಸಲ್ಪಡುವ ಈ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಕಡಬದ ಅಂಬೇಡ್ಕರ್ ಭವನದ ಬಳಿ 3 ವರ್ಷಗಳ ಹಿಂದೆಯೇ 25 ಸೆಂಟ್ಸ್ ಜಮೀನು ಕಾದಿರಿಸಲಾಗಿತ್ತು. ಬಳಿಕ 2.5 ಕೋಟಿ ರೂ. ಅನುದಾನ ಮಂಜೂರಾಗಿದ್ದರೂ ಜಮೀನಿನಲ್ಲಿದ್ದ ಮರಗಳನ್ನು ತೆರವುಗೊಳಿಸಲು ತಡವಾದ ಕಾರಣದಿಂದಾಗಿ ಕಾಮಗಾರಿ ಆರಂಭಗೊಳ್ಳಲು ತೊಡಕಾಗಿತ್ತು. ಕೊನೆಗೂ ಜನಪ್ರತಿನಿಧಿಗಳು ಹಾಗೂ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರಂತರ ಪ್ರಯತ್ನದ ಫಲವಾಗಿ ಮರಗಳನ್ನು ತೆರವುಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. . 1.25 ಕೋಟಿ ರೂ. ಅನುದಾನ
ವಿದ್ಯಾರ್ಥಿ ನಿಲಯಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಸಲುವಾಗಿ ಒಟ್ಟು 2.5 ಕೋಟಿ ರೂ. ಅನುದಾನ ಮಂಜೂರುಗೊಂಡಿದ್ದು, ಆ ಪೈಕಿ 1.25 ಕೋಟಿ ರೂ. ಅನುದಾನ ಬಿಡುಗಡೆಯೂ ಆಗಿದೆ. 2.5 ಕೋಟಿ ರೂ. ಅನುದಾನದಲ್ಲಿ 1.98 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡರೆ, ಉಳಿದ 52 ಲಕ್ಷ ರೂ. ಗಳನ್ನು ತಡೆಗೋಡೆ ನಿರ್ಮಾಣ, ಆವರಣ ಗೋಡೆ ನಿರ್ಮಾಣ ಹಾಗೂ ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಕೆಗೆ ವಿಂಗಡಿಸಲಾಗಿದೆ.
Related Articles
Advertisement
50 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದ್ಯಾರ್ಥಿ ನಿಲಯದಲ್ಲಿ ಕಡಬ ಪ್ರದೇಶದ ಒಟ್ಟು 50 ವಿದ್ಯಾರ್ಥಿನಿಯರಿಗೆ ಪ್ರವೇಶಾ ವಕಾಶವಿದೆ. ಆ ಪೈಕಿ ಶೇ. 75 ಸೀಟುಗಳು ಅಲ್ಪಸಂಖ್ಯಾಕ ವಿದ್ಯಾರ್ಥಿನಿಯರಿಗೆ ಹಾಗೂ ಉಳಿದ ಶೇ. 25ರಷ್ಟು ಸೀಟ್‌ಗಳನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿನಿಯರಿಗೆ ಕಾದಿರಿಸಲಾಗಿದೆ. ಶೀಘ್ರ ಬಿಡುಗಡೆ
ಮಂಜೂರಾಗಿರುವ 2.5 ಕೋಟಿ ರೂ. ಅನುದಾನದ ಪೈಕಿ 1.25 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಮಂಗಳೂರಿನ ದ.ಕ.ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಬಿಡುಗಡೆಗೆ ಬಾಕಿ ಇರುವ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು.
-ಎಸ್.ಅಂಗಾರ, ಸಚಿವರು