Advertisement

ನೈಋತ್ಯರೈಲ್ವೆಗೆ 1828 ಕೋಟಿ ರೂ. ಅನುದಾನ ನಿಗದಿ

01:42 AM Feb 02, 2019 | |

ಹುಬ್ಬಳ್ಳಿ: ಕೇಂದ್ರ ಸರಕಾರದ ಪ್ರಸಕ್ತ ಸಾಲಿನ ರೈಲ್ವೆ ಮಧ್ಯಂತರ ಆಯವ್ಯಯದಲ್ಲಿ ನೈಋತ್ಯ ರೈಲ್ವೆಯ ವಿವಿಧ ಕಾಮಗಾರಿಗೆ 1828 ಕೋಟಿ ರೂ. ನಿಗದಿಪಡಿಸಲಾಗಿದೆ.

Advertisement

ಕಳೆದ ಬಜೆಟ್‌ಗೆ ಹೋಲಿಕೆ ಮಾಡಿದರೆ ನೈಋತ್ಯ ರೈಲ್ವೆಗೆ ಈ ಬಾರಿ ಶೇ.20 ಹೆಚ್ಚು ಅನುದಾನ ನೀಡಲಾಗಿದೆ. ಕಳೆದ ವರ್ಷ 1695 ಕೋಟಿ ರೂ. ನೀಡಲಾಗಿತ್ತು. ಈ ಸಾಲಿನಲ್ಲಿ 133 ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಿಸಲಾಗಿದೆ. ಹೊಸ ರೈಲ್ವೆ ಮಾರ್ಗಗಳಿಗೆ 243 ಕೋಟಿ, ರೋಲಿಂಗ್‌ ಸ್ಟಾಕ್‌ಗೆ 38 ಕೋಟಿ, ಲೀಸ್ಡ್ ಅಸೆಟ್ಸ್‌ ಪೇಮೆಂಟ್ ಆಫ್ ಕ್ಯಾಪಿಟಲ್‌ ಕಂಪೋನೆಂಟ್ಸ್‌ಗೆ 399 ಕೋಟಿ, ವರ್ಕ್‌ಶಾಪ್‌ ಹಾಗೂ ಉತ್ಪಾದನಾ ಘಟಕಗಳಿಗೆ 50 ಕೋಟಿ, ಪ್ರಯಾಣಿಕರ ಸೌಲಭ್ಯಕ್ಕಾಗಿ 187 ಕೋಟಿ, ಇತರ ವಿಶೇಷ ಕಾರ್ಯಗಳಿಗೆ 36 ಕೋಟಿ ರೂ. ನೀಡಲಾಗಿದೆ. ರೈಲ್ವೆ ನಿಲ್ದಾಣಗಳ ಮೇಲ್ದರ್ಜೆ, ಪಾದಚಾರಿಗಳ ಮೇಲ್ಸೇತುವೆ ಹಾಗೂ ಪ್ಲಾಟ್ಫಾರ್ಮ್ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಅನುದಾನ ಘೋಷಿಸಲಾಗಿದೆ.

ಹೊಸ ಮಾರ್ಗ: ರಾಯದುರ್ಗ-ತುಮಕೂರು ಮಾರ್ಗ (213 ಕಿಮೀ), ಬಾಗಲಕೋಟೆ-ಕುಡಚಿ (142 ಕಿಮೀ), ತುಮಕೂರು-ಚಿತ್ರದುರ್ಗ-ದಾವಣಗೆರೆ (199 ಕಿಮೀ), ಗದಗ-ವಾಡಿ (250 ಕಿಮೀ).

ಡಬ್ಲಿಂಗ್‌: ಯಶವಂತಪುರ-ಚನ್ನಸಂದ್ರ (21 ಕಿಮೀ), ಬಯ್ಯಪ್ಪನಹಳ್ಳಿ-ಹೊಸೂರ (48 ಕಿಮೀ), ಹೊಸಪೇಟೆ-ಹುಬ್ಬಳ್ಳಿ-ಲೊಂಡಾ-ತಿನೈಘಾಟ್-ವಾಸ್ಕೊಡಿಗಾಮ (352 ಕಿಮೀ), ಹೂಟಗಿ- ಕುಡಗಿ-ಗದಗ (284 ಕಿಮೀ), ಯಲಹಂಕ- ಪೆನಕೊಂಡ (150 ಕಿಮೀ), ಹುಬ್ಬಳ್ಳಿ-ಚಿಕ್ಕಜಾಜೂರ (190 ಕಿ.ಮೀ), ಅರಸಿಕೆರೆ-ತುಮಕೂರು (96 ಕಿ.ಮೀ).

Advertisement

Udayavani is now on Telegram. Click here to join our channel and stay updated with the latest news.

Next