Advertisement
ಉದ್ಯಾನವನಗಳ ನಿರ್ವಹಣೆಗಾಗಿ 20 ಲಕ್ಷ ರೂ., ಒಳಚರಂಡಿ ಶುದ್ಧೀಕರಣ ಫಟಕದ ಸುತ್ತಲು ಸಸಿ ಮತ್ತು ಮರಗಳನ್ನು ಬೆಳೆಸಲು 5.54 ಲಕ್ಷ ರೂ., ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ ಮತ್ತು ಟ್ರೀ ಗಾ ರ್ಡ್ ಅಳವಡಿಸಲು ಕೊಂಗಾಡಿಯಪ್ಪ ಹಸಿರು ವೃಕ್ಷ ಕಾರ್ಯಕ್ರಮಕ್ಕಾಗಿ 20 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
Related Articles
Advertisement
ದೊಡ್ಡಬಳ್ಳಾಪುರ ಹಬ್ಬ: ರಾಷ್ಟ್ರೀಯ ಹಬ್ಬ, ಸ್ಥಳೀಯ ಹಬ್ಬಗಳ ಆಚರಣೆಗಾಗಿ 8.30 ಲಕ್ಷ ರೂ., ದೊಡ್ಡಬಳ್ಳಾಪುರ ಹಬ್ಬ ಆಚರಣೆಗಾಗಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕರಗ ಮಹೋತ್ಸವಕ್ಕಾಗಿ 3 ಲಕ್ಷ ರೂ.ಗಳನ್ನು ಈ ಬಾರಿ ವಿಶೇಷವಾಗಿ ಮೀಸಲಿರಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 90.25 ಲಕ್ಷ ರೂ.,ಅಂಗವಿಕಲರ ಕಲ್ಯಾಣಕ್ಕಾಗಿ 18.70 ಲಕ್ಷ ರೂ., ಪೌರ ಕಾರ್ಮಿಕರ ಬಿಸಿಯೂಟಕ್ಕಾಗಿ ಶೇ.24.10ರ ಯೋಜನೆಯಡಿ 10 ಲಕ್ಷ ರೂ.ಮೀಸಲಿರಿಸಲಾಗಿದೆ ಎಂದರು.
ಪೌರಕಾರ್ಮಿಕರಿಗೆ ಸೂರು: ವಸತಿ ರಹಿತ ಪೌರಕಾರ್ಮಿಕರಿಗೆ ಗೃಹ ನಿರ್ಮಾಣಕ್ಕಾಗಿ ಪೌರ ಕಾರ್ಮಿಕರಿಗೆ ಗುಂಪು ಮನೆ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1.50 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದು. ಸರ್ವರಿಗೂ ಸೂರು ಯೋಜನೆಯಡಿ ವಸತಿ ರಹಿತ ಬಡಜನರಿಗಾಗಿ ಗುಂಪು ಮನೆಗಳ ನಿರ್ಮಾಣಕ್ಕಾಗಿ 1 ಕೋಟಿ ರೂ., ಶೇ.7.25ರ ಯೋಜನೆಯಡಿ ಬೀದಿ ಬದಿ ಸಣ್ಣ ವ್ಯಾಪಾರಿಗಳಿಗೆ 25 ಕೈಗಾಡಿಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 3 ಲಕ್ಷ ರೂ. ಕಾಯ್ದಿರಿಸಲಾಗಿದೆ. ವಿದ್ಯುತ್ ಚಿತಾಗಾರ ನಿರ್ಮಾಣಕ್ಕಾಗಿ 2 ಕೋಟಿ ರೂ. ಮೀಸಲಿರಿಸಲಾಗಿದೆ.
ಇದಕ್ಕಾಗಿ ನಗರದ ಹೊರವಲಯದ ತಿಮ್ಮಸಂದ್ರ ಸಮೀಪ 3.15 ಎಕರೆ ಭೂಮಿಯನ್ನು ಸರ್ಕಾರ ನಗರಸಭೆಗೆ ಮಂಜೂರು ಮಾಡಿದೆ. ನೇಕಾರ ಭವನ ನಿರ್ಮಾಣಕ್ಕಾಗಿ ನಗರಸಭೆಯಿಂದ 15 ಲಕ್ಷ ರೂ.ಮೀಸಲಿರಿಸಲಾಗಿದೆ. ನಗರದಲ್ಲಿ ದಿನ ಪತ್ರಿಕೆ ಹಂಚುವ ಬಡ ಯುವಜನರಿಗೆ ಚಿತ ಬೈಸಿಕಲ್ ವಿತರಣೆಗಾಗಿ 1.50 ಲಕ್ಷ ರೂ., ಲಯನ್ಸ್ ಕ್ಲಬ್‌ಗ ಡಯಾಲಿಸಿಸ್ ಯಂತ್ರ ಖರೀದಿಸಲು 5 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
ಬಜೆಟ್ ಸಭೆಯಲ್ಲಿ ನಗರಸಭೆ ಪಾಧ್ಯಕ್ಷೆ ಜಯಲಕ್ಷಿ ನಟರಾಜ, ಪೌರಾಯುಕ್ತ ಆರ್.ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್, ಕಾರ್ಯಪಾಲಕ ಇಂಜಿನಿಯರ್ ಶೇಖ್ ಫಿರೋಜ್ ಇತರರಿದ್ದರು.