Advertisement

24 ಗಂಟೆಯಲ್ಲಿ 15.89 ಕೋ. ರೂ. ಮೊತ್ತದ ಅಕ್ರಮ ಸೊತ್ತು ಜಪ್ತಿ

11:35 PM Mar 18, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಗೊಂಡ ಬೆನ್ನಲ್ಲೇ ಚುನಾವಣ ಅಕ್ರಮಗಳಿಗೆ ಕಡಿ ವಾಣ ಹಾಕಲು ಚುನಾವಣ ಆಯೋಗದ ನೀತಿ ಸಂಹಿತೆ ಜಾರಿ ತಂಡಗಳು ಸಕ್ರಿಯವಾಗಿದ್ದು, 2 ದಿನಗಳಲ್ಲಿ 45 ಲಕ್ಷ ರೂ., ಮದ್ಯ, ಮಾದಕ ವಸ್ತು ಸಹಿತ ಒಟ್ಟಾರೆ 15.89 ಕೋ.ರೂ. ಮೊತ್ತದ ಚುನಾ ವಣ ಸೊತ್ತನ್ನು ಜಪ್ತಿ ಮಾಡಿದೆ.

Advertisement

ಕಳೆದ 24 ಗಂಟೆಗಳಲ್ಲಿ 17.73 ಲಕ್ಷ ರೂ. ಒಟ್ಟು 45.76 ಲಕ್ಷ ರೂ., 15.37 ಕೋಟಿ ರೂ. ಮೌಲ್ಯದ 4.94 ಲಕ್ಷ ಲೀಟರ್‌ ಮದ್ಯ, 5.66 ಲಕ್ಷ ರೂ. ಮೌಲ್ಯದ 7 ಕೆಜಿ ಮಾದಕ ವಸ್ತುಗಳು ಸಹಿತ 15.89 ಕೋ. ರೂ. ಮೊತ್ತದಷ್ಟು ಅಕ್ರಮವನ್ನು ಜಪ್ತಿ ಮಾಡಲಾಗಿದೆ.

ವಿಶೇಷವಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ 3.99 ಕೋಟಿ ರೂ. ಮೊತ್ತದ 1.71 ಲಕ್ಷ ಲೀಟರ್‌ ಬಿಯರ್‌ ಹಾಗೂ 3.85 ಕೋಟಿ ರೂ. ಮೊತ್ತದ 1.64 ಲಕ್ಷ ಲೀಟರ್‌ ಬಿಯರ್‌ ಜಪ್ತಿ ಮಾಡಲಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6.23 ಕೋಟಿ ರೂ. ಮೌಲ್ಯದ 1.26 ಲಕ್ಷ ಲೀಟರ್‌ ಮದ್ಯ ಜಪ್ತಿ ಮಾಡಲಾಗಿದ್ದು, ಆದಾಯ ತೆರಿಗೆ ಇಲಾಖೆ 20 ಲಕ್ಷ ರೂ. ಅನ್ನು ಜಪ್ತಿ ಮಾಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಟನೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next