Advertisement

ಐಟಿ ಇಲಾಖೆಯಿಂದ 1.42 ಲಕ್ಷ ಕೋಟಿ ರೂ. ಮರುಪಾವತಿ

08:18 AM Feb 14, 2017 | Harsha Rao |

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ಫೆ.10ರ ಅವಧಿಯ ವರೆಗೆ 1.42 ಲಕ್ಷ ಕೋಟಿ ರೂ. ಮೊತ್ತವನ್ನು ರಿಟರ್ನ್ಸ್ ಸಲ್ಲಿಕೆ ಮಾಡಿದವರಿಗೆ ಪಾವತಿ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.41.5ರಷ್ಟು ಹೆಚ್ಚಾಗಿದೆ. ಕೇಂದ್ರೀಕೃತ ಪರಿಷ್ಕರಣಾ ಕೇಂದ್ರಗಳು (ಸಿಪಿಸಿ) ಇದು ವರೆಗೆ 4.19 ಕೋಟಿ ಆದಾಯ ತೆರಿಗೆ ರಿಟರ್ನ್ಸ್ಗಳನ್ನು ಪರಿಶೀಲಿಸಿ 1.62 ಕೋಟಿ ರಿಟರ್ನ್ಸ್ ಸಲ್ಲಿಕೆಗಳಿಗೆ ಅನುಮೋದನೆ ನೀಡಿವೆ ಎಂದು ಇಲಾಖೆ ಹೊಸದಿಲ್ಲಿಯಲ್ಲಿ ತಿಳಿಸಿದೆ. 

Advertisement

50 ಸಾವಿರ ರೂ.ಗಳಿಗಿಂತ ಕಡಿಮೆ ಇರುವ ಮೊತ್ತವನ್ನು ನೀಡಲು ಹಾಲಿ ಸಾಲಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರ ಪ್ರಮಾಣ ಶೇ.97ರಷ್ಟು ಇತ್ತು. ಅಂದರೆ ಸಣ್ಣ ತೆರಿಗೆದಾರರಿಗೆ ಈ ಹಣಕಾಸು ವರ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆನ್‌ಲೈನ್‌ನಲ್ಲಿ 60 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್ಗಳನ್ನು ಸಲ್ಲಿಕೆ ಮಾಡಲಾಗಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಶೇ.20ರಷ್ಟು ಹೆಚ್ಚಾಗಿದೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next