Advertisement

ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ಬಂದ ಬರೋಬ್ಬರಿ ದೇಣಿಗೆ ಎಷ್ಟು ಗೊತ್ತೇ?

12:40 AM Feb 11, 2024 | Team Udayavani |

ನವದೆಹಲಿ: 2022 -23ರಲ್ಲಿ ಆಡಳಿತಾರೂಢ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಬರೋಬ್ಬರಿ 1,300 ಕೋಟಿ ರೂ. ದೇಣಿಗೆ ಪಡೆದಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್‌ ಪಡೆದ ದೇಣಿಗೆಗಿಂತ ಇದು 7 ಪಟ್ಟು ಅಧಿಕ.
2022-23ರಲ್ಲಿ ಬಿಜೆಪಿಯು ಎಲ್ಲ ಮೂಲಗಳಿಂದ ಒಟ್ಟಾರೆಯಾಗಿ 2,120 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿದೆ.

Advertisement

ಈ ಪೈಕಿ ಶೇ.61ರಷ್ಟು ಎಲೆಕ್ಟೋರಲ್‌ ಬಾಂಡ್‌ ಮೂಲಕ ಬಂದಿದೆ ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಾರ್ಷಿಕ ಆಡಿಟ್‌ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2021-22ರಲ್ಲಿ ಬಿಜೆಪಿಗೆ ಒಟ್ಟು 1,775 ಕೋಟಿ ರೂ.ಗಳ ದೇಣಿಗೆ ಹರಿದುಬಂದಿತ್ತು.

ಮತ್ತೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌, 2022-23ರಲ್ಲಿ ಒಟ್ಟು 171 ಕೋಟಿ ರೂ. ದೇಣಿಗೆಯನ್ನು ಚುನಾವಣಾ ಬಾಂಡ್‌ ಮೂಲಕ ಸ್ವೀಕರಿಸಿದೆ. ಅದಕ್ಕೂ ಹಿಂದಿನ ವರ್ಷ ಇದು 236 ಕೋಟಿ ರೂ. ಆಗಿತ್ತು.

ಇತರೆ ಆದಾಯ
ಇನ್ನು, ಬಿಜೆಪಿ 2022-23ರಲ್ಲಿ ಒಟ್ಟು 2,360.8 ಕೋಟಿ ರೂ. ಆದಾಯ ಗಳಿಸಿದ್ದು, 2021-22ರಲ್ಲಿ ಇದು 1,917 ಕೋಟಿ ರೂ.ಗಳಾಗಿದ್ದವು. ಕಳೆದ ವಿತ್ತೀಯ ವರ್ಷದಲ್ಲಿ ಪಕ್ಷವು ಬಡ್ಡಿಯ ರೂಪದಲ್ಲಿ 237 ಕೋಟಿ ರೂ.ಗಳನ್ನು ಗಳಿಸಿದ್ದು, 2021-22ರಲ್ಲಿ ಇದು 135 ಕೋಟಿ ರೂ. ಆಗಿತ್ತು.

ಇದೇ ವೇಳೆ, ಚುನಾವಣೆ ಮತ್ತು ಪ್ರಚಾರದ ಒಟ್ಟಾರೆ ವೆಚ್ಚದ ಪೈಕಿ ಬಿಜೆಪಿ 78.2 ಕೋಟಿ ರೂ.ಗಳನ್ನು ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಗೆ ವ್ಯಯಿಸಿದೆ. 2021-22ರಲ್ಲಿ ಈ ಮೊತ್ತ 117.4 ಕೋಟಿ ರೂ. ಆಗಿತ್ತು. ಅಭ್ಯರ್ಥಿಗಳಿಗೆ ಹಣಕಾಸು ನೆರವಿನ ರೂಪದಲ್ಲಿ ಪಕ್ಷವು 76.5 ಕೋಟಿ ರೂ.ಗಳನ್ನು ಪಾವತಿಸಿದೆ ಎಂದೂ ವರದಿ ತಿಳಿಸಿದೆ.

Advertisement

ಚುನಾವಣಾ ಬಾಂಡ್‌ ಮೂಲಕ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ?
ಬಿಜೆಪಿ – 1,300 ಕೋಟಿ ರೂ.
ಕಾಂಗ್ರೆಸ್‌ – 171 ಕೋಟಿ ರೂ.
ಸಮಾಜವಾದಿ ಪಕ್ಷ – 3.2 ಕೋಟಿ ರೂ.
ಟಿಡಿಪಿ – 34 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next