Advertisement

ರೂ1 ನಾಣ್ಯಕ್ಕೆ 1.11 ರೂ. ವೆಚ್ಚ!

06:00 AM Dec 07, 2018 | Team Udayavani |

ಹೊಸದಿಲ್ಲಿ: ಒಂದು ರೂಪಾಯಿ ನಾಣ್ಯವನ್ನು ಟಂಕಿಸಲು ತಗುಲುವ ಖರ್ಚು ಅದರ ಮೌಲ್ಯವನ್ನೂ ಮೀರುತ್ತಿದೆ ಎಂದು ಖುದ್ದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ. ಮಾಹಿತಿ ಹಕ್ಕಿನಡಿ ಖಾಸಗಿ ಮಾಧ್ಯಮ ವೊಂದು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ವಿಚಾರ ತಿಳಿಸಿದ್ದು, ಪ್ರತಿ ಒಂದು ರೂಪಾಯಿ ನಾಣ್ಯವನ್ನು ಟಂಕಿಸಲು 1.11 ರೂ. ಖರ್ಚಾಗುತ್ತದೆ ಎಂದಿದೆ. 

Advertisement

ಇನ್ನು, ಪ್ರತಿ 2 ರೂ. ನಾಣ್ಯಕ್ಕೆ 1.28 ರೂ., 5 ರೂ.ಗೆ 3.69 ರೂ. ಹಾಗೂ 10 ರೂ.ಗೆ 5.54 ರೂ. ಖರ್ಚಾಗುತ್ತದೆ. ಹೀಗಾಗಿ, ಕಳೆ ದೈದು ವರ್ಷಗಳಲ್ಲಿ ಅತಿ ಹೆಚ್ಚು ನಾಣ್ಯಗಳನ್ನು 2016-17ನೇ ಸಾಲಿ ನಲ್ಲಿ (220.1 ಕೋಟಿ) ಹಾಗೂ 2015-16ರಲ್ಲಿ (215.1 ಕೋಟಿ) ಟಂಕಿಸಲಾಗಿದ್ದು, ಆ ಎರಡೂ ವರ್ಷಗಳಲ್ಲಿ 1 ರೂ. ನಾಣ್ಯವನ್ನು ಅತಿ ಕಡಿಮೆ ಸಂಖ್ಯೆಯಲ್ಲಿ (ಕ್ರಮವಾಗಿ 90.3 ಕೋಟಿ ಮತ್ತು 60 ಕೋಟಿ) ಟಂಕಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next