Advertisement
ಮಲ್ಲೇಶ್ವರಂ 13ನೇ ಕ್ರಾಸ್ ನಲ್ಲಿರುವ, ಬೆಂಗಳೂರು ನಗರ ವಿ.ವಿ.ಗೆ ಸೇರಿದ ಮಹಿಳಾ ಬಹುಶಿಸ್ತೀಯ ಘಟಕ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಪದವಿ ಕಾಲೇಜಿನ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗಗಳ ನೂತನ ಪ್ರಯೋಗಾಲಯಗಳನ್ನು ಉದ್ಘಾಟಿಸಿದರು.
Related Articles
Advertisement
ಕಲಿಕೆ ಎಂಬುದು ಮೊದಲಿಗೆ ನಮ್ಮೊಳಗೆ ಆರಂಭ ಆರಂಭವಾಗಬೇಕು. ಹೀಗಾಗಿ, ವಿದ್ಯಾರ್ಥಿಗಳು ಸ್ವಯಂ ಕಲಿಕೆಗೆ ಒತ್ತುಕೊಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಆಧುನಿಕ ಕಾಲಘಟ್ಟದಲ್ಲಿ ಕಲಿಕೆಗೆ ಬಹಳ ಮಹತ್ವವಿದೆ. ಮೊದಲಿಗೆ ಸ್ವಯಂ ಕಲಿಕೆಗೆ ಒತ್ತುಕೊಟ್ಟು ನಂತರ ಸಹಪಾಠಿಗಳೊಂದಿಗಿ ಕಲಿಕೆ ಹಾಗೂ ಗುರುಗಳ ಮುಖೇನ ಕಲಿಕೆಗೆ ಆದ್ಯತೆ ಕೊಡಬೇಕು ಎಂದು ಅವರು ವಿವರಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆಯ ಬಗ್ಗೆ ಪ್ರಸ್ತಾಪಿಸಿದ ಅವರು, ನಾಡುನುಡಿಯ ವಿಷಯ ಬಂದಾಗ ಗೋಕಾಕ್ ಚಳುವಳಿ ಎಂದೆಂದೂ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ನಗರ ವಿವಿ ಕುಲಪತಿ ಲಿಂಗರಾಜ ಗಾಂಧಿ, ಪ್ರಾಂಶುಪಾಲರಾದ ಜ್ಯೋತಿ ವೆಂಕಟೇಶ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರವಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಗೋಕಾಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.