Advertisement

2.19 ಲಕ್ಷ ರೈತರ 1088.90 ಕೋಟಿ ರೂ. ಸಾಲ ಮನ್ನಾ: ಬಂಡೆಪ್ಪ

12:30 AM Feb 26, 2019 | Team Udayavani |

ಬೆಂಗಳೂರು:ರಾಜ್ಯದಲ್ಲಿ ಸಾಲಮನ್ನಾ ಘೋಷಣೆಯಾದ ಬಳಿಕ ಇದುವರೆಗೆ 2.19 ಲಕ್ಷ ರೈತರಿಗೆ 1088.90 ಕೋಟಿ ರೂ. ಮನ್ನಾ ಆಗಿದ್ದು  ಅಷ್ಟೋ ಮೊತ್ತ ರೈತರ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ತಿಳಿಸಿದ್ದಾರೆ.

Advertisement

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾಗೆ ಸಂಬಂಧಿಸಿದಂತೆ  ಈ ವರ್ಷದ ಜನವರಿವರೆಗೆ 3.87 ಲಕ್ಷ ರೈತರ 1796.76 ಕೋಟಿ ರೂ. ಮನ್ನಾ ಆಗಲಿದೆ.   ಆರ್ಥಿಕ ಇಲಾಖೆಯಿಂದ ಸಾಲ ಮನ್ನಾ ಬಾಬಿ¤ಗೆ 2600 ಕೋಟಿ ರೂ. ಸಹಕಾರ ಇಲಾಖೆಗೆ ಬಂದಿದ್ದು ಇನ್ನು 1500 ಕೋಟಿ ರೂ. ಬರಬೇಕಾಗಿದೆಎಂದು ಹೇಳಿದರು.

ಒಟ್ಟು, 22.38 ಲಕ್ಷ ರೈತರು ಖಾತೆ. 18.71 ಲಕ್ಷ ರೈತರು ಸಾಲ ಮನ್ನಾ ವ್ಯಾಪ್ತಿಗೆ ತಮ್ಮ ಮಾಹಿತಿ ಒದಗಿಸಿದ್ದಾರೆ.  15.5 ಲಕ್ಷ ರೈತರ ಮಾಹಿತಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಂದಿವೆ. ಜನವರಿ 31 ರವರೆಗೆ ಸುಮಾರು 2 ಲಕ್ಷ ರೈತರ 843 ಕೋಟಿ ರೂ. ಸಾಲ ಮನ್ನಾ ಆಗಿದೆ. ಅಲ್ಲದೆ 5 ಲಕ್ಷ ರೈತರ ಮಾಹಿತಿ ಸರಿಯಿದ್ದು ಅವರ ಖಾತೆಗಳಿಗೆ 1300 ಕೋಟಿ ರೂ. ಐದು ದಿನಗಳಲ್ಲಿ ಜಮೆ  ಆಗಲಿದೆ ಎಂದು ತಿಳಿಸಿದರು.

ಬಡವರಬಂಧು ಯೋಜನೆಯಡಿ ಇದುವರೆಗೆ 18,021 ಬೀದಿ ಬದಿ ವ್ಯಾಪಾರಿಗಳಿಗೆ 10.32 ಕೋಟಿ ರೂ.ವಿತರಿಸಲಾಗಿದೆ. ಮಾರ್ಚ್‌ 31 ರವರೆಗೆ 53 ಸಾವಿರ ಬೀದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಅದೇ ರೀತಿ ಕಾಯಕ ಯೋಜನೆಯಡಿ 212 ಸ್ವ ಸಹಾಯ ಸಂಘಗಳಿಗೆ 10 ಲಕ್ಷ ರೂ. ವರೆಗೆ ಶೇ.4 ರ ಬಡ್ಡಿ ದರದಲ್ಲಿ ಸಾಲ ನೀಡಲು 11.36 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next