Advertisement

ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟ, ಆದ್ರೆ ರೈತರಿಗೆ 1 ರೂ. ಪರಿಹಾರ!

12:33 PM Jun 09, 2017 | Team Udayavani |

ಧಾರವಾಡ/ಬಾಗಲಕೋಟೆ: ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಗೊಂಡ ರೈತರಿಗೆ ರಾಜ್ಯ ಸರ್ಕಾರ ಬೆಳೆ ವಿಮೆ ಪರಿಹಾರವಾಗಿ ಕೇವಲ ಒಂದು ರೂಪಾಯಿ ಪರಿಹಾರವನ್ನು ಖಾತೆಗೆ ಜಮಾ ಮಾಡಿರುವುದು ಇದೀಗ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Advertisement

ಧಾರವಾಡದ ಹಾರೋ ಬೆಳವಾಡಿ ಗ್ರಾಮದ ಮೂರು ರೈತರಿಗೆ ಧಾರವಾಡದ ಕಂದಾಯ ಇಲಾಖೆಯಿಂದ 1 ರೂಪಾಯಿ ಪರಿಹಾರ ಜಮೆ ಮಾಡಿದೆ. ಗ್ರಾಮದ ಸಂಗನಗೌಡ, ಮಾನಪ್ಪ ಹಾಗೂ ರುದ್ರಪ್ಪ ಎಂಬ ರೈತರ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಬೆಳೆ ಹಾನಿ ಪಪರಿಹಾರ ಜಮಾ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 ರೂಪಾಯಿ ಬೆಳೆ ಪರಿಹಾರ ಅಲ್ಲ ಎಂದು ಕಂದಾಯ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ಧಾರವಾಡ, ಬಾಗಲಕೋಟೆಯ ಬಹುತೇಕ ರೈತರಿಗೆ 50 ರೂಪಾಯಿ, 30 ರೂಪಾಯಿ, 100 ರೂಪಾಯಿ, 20 ರೂಪಾಯಿ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗಿದೆ. ಹಾಗಾದರೆ 20, 30 ರೂಪಾಯಿಯನ್ನು ಹಾಕಿದ್ದು ಖಾತೆ ಖಚಿತಪಡಿಸಿಕೊಳ್ಳುವುದಕ್ಕಾಗಿಯೇ ಎಂದು ರೈತರು ಪ್ರಶ್ನಿಸಿದ್ದಾರೆ.

ಇದು ರೈತರಿಗೆ ಮಾಡಿದ ಅವಮಾನ: ಕೋಡಿಹಳ್ಳಿ
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ, ರೈತರ ಹೆಸರಿನಲ್ಲಿ ರಾಜಕಾರಣ ನಡೆಸುವ ಜನಪ್ರತಿನಿಧಿಗಳು, ಸರ್ಕಾರಗಳು ರೈತರನ್ನು ಅವಮಾನ ಮಾಡುತ್ತಿರುವುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ. ಲಕ್ಷಾಂತರ ರೂಪಾಯಿ ಬೆಳೆ ನಷ್ಟ ಹೊಂದಿದ ರೈತನ ಖಾತೆಗೆ ಕೇವಲ ಒಂದು ರೂಪಾಯಿ ಜಮಾ ಮಾಡುವುದು ಅವಮಾನ ಮಾಡಿದಂತೆಯೇ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಖಾಸಗಿ ಚಾನೆಲ್ ವೊಂದರ ಜೊತೆ ಮಾತನಾಡುತ್ತಿ ತಿಳಿಸಿದ್ದಾರೆ.

ಖಾತೆ ಖಚಿತಪಡಿಸಿಕೊಳ್ಳಲು 1 ರೂ. ಜಮೆ!
ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಒಂದು ರೂಪಾಯಿಯನ್ನು ಹಾಕಿ ಪರೀಕ್ಷೆ ಮಾಡಿರುವುದಾಗಿ ಧಾರವಾಡ ಉಪ ವಿಭಾಗಾಧಿಕಾರಿ ಮಹೇಶ್ ಕರ್ಜಗಿ ಸಮಜಾಯಿಷಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next