ವಾಷಿಂಗ್ಟನ್: ಎಸ್. ಎಸ್. ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ʼಆರ್ ಆರ್ ಆರ್ʼ ಗ್ಲೋಬಲ್ ಮಟ್ಟದಲ್ಲಿ ಮಿಂಚಿರುವುದು ಗೊತ್ತೇ ಇದೆ. ಇತ್ತೀಚೆಗೆ ಸಿನಿಮಾ ಜಪಾನ್ ದೇಶದಲ್ಲಿ ರಿಲೀಸ್ ಆಗಿದ್ದು, ಭರ್ಜರಿ ಸದ್ದು ಮಾಡುತ್ತಿದೆ.
ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದು, ಆಸ್ಕರ್ ರೇಸ್ ಗೆ ನಾಮಿನೇಟ್ ಆಗಿರುವ ಸಿನಿಮಾ, ಇದೀಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ʼ ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ʼ ನ ಎರಡು ವಿಭಾಗದಲ್ಲಿ ‘ಆರ್ ಆರ್ ಆರ್’ ಸಿನಿಮಾ ನಾಮಿನೇಟ್ ಆಗಿದೆ.
ಸೂಪರ್ ಹೀರೋ, ಸೈನ್ಸ್ ಫೀಕ್ಷನ್, ಹಾರಾರ್, ಆ್ಯಕ್ಷನ್ ,ಫ್ಯಾಂಟಸಿ ಸಿನಿಮಾ ಹಾಗೂ ಓಟಿಟಿ ಶೋಗಳಿಗೆ ಪ್ರಶಸ್ತಿ ನೀಡುವ ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ʼ ನ 3ನೇ ವಾರ್ಷಿಕ ಪ್ರಶಸ್ತಿಯಲ್ಲಿ ಅತ್ತುತ್ತಮ ಆ್ಯಕ್ಷನ್ ಮೂವಿ ಹಾಗೂ ಬೆಸ್ಟ್ ಆ್ಯಕ್ಟರ್ ಇನ್ ಆ್ಯಕ್ಷನ್ ಮೂವಿ ಕ್ಯಾಟಗರಿಯಲ್ಲಿ ನಾಮಿನೇಟಾಗಿದೆ.
‘ಬುಲೆಟ್ ಟ್ರೈನ್’, ‘ಟಾಪ್ ಗನ್: ಮೇವರಿಕ್’, ‘ದಿ ಅನ್ ಬೇರೆಬಲ್ ವೇಟ್ ಆಫ್ ಮ್ಯಾಸಿವ್ ಟ್ಯಾಲೆಂಟ್ ,’ದಿ ವುಮನ್ ಕಿಂಗ್’ ಚಿತ್ರಗಳೊಂದಿಗೆ ಬೆಸ್ಟ್ ಆ್ಯಕ್ಷನ್ ಮೂವಿ ವಿಭಾಗದಲ್ಲಿ ʼಆರ್ ಆರ್ ಆರ್ʼ ಸ್ಪರ್ಧಿಸಲಿದೆ.
ಇನ್ನು ಬೆಸ್ಟ್ ಆ್ಯಕ್ಟರ್ ಇನ್ ಆ್ಯಕ್ಷನ್ ಮೂವಿ ವಿಭಾಗದಲ್ಲಿ ರಾಮ್ ಚರಣ್, ಜೂ.ಎನ್.ಟಿ.ಆರ್ ಇಬ್ಬರೂ ನಾಮಿನೇಟ್ ಆಗಿದ್ದಾರೆ. ಟಾಮ್ ಕ್ರೂಸ್, ಬ್ರಾಡ್ ಪಿಟ್ ಮತ್ತು ನಿಕೋಲಸ್ ಕೇಜ್ ಈ ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿರುವ ಇತರ ನಟರು.
ಮಾರ್ಚ್ 16 ರಂದು ಪ್ರಶಸ್ತಿ ವಿಜೇತರ ಪಟ್ಟಿ ಹೊರ ಬೀಳಲಿದೆ.