ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರ ಒಂದೊಂದೇ ದಾಖಲೆಗಳನ್ನು ಮುರಿಯುತ್ತಿದೆ. ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಆರ್ ಆರ್ ಆರ್’ ಸಿನಿಮಾ ಇದೀಗ 1000 ಕೋಟಿ ರೂ ಕ್ಲಬ್ ಸೇರಿದೆ.
‘ಆರ್ ಆರ್ ಆರ್’ ಚಿತ್ರವು ಬಿಡುಗಡೆಯಾಗಿ ಕೇವಲ 16 ದಿನದಲ್ಲಿ ವಿಶ್ವದಾದ್ಯಂತ ಸಹಸ್ರ ಕೋಟಿ ರೂ ಗಳಿಸಿದೆ. ಜಾಗತಿಕವಾಗಿ 1000 ಕೋಟಿ ರೂ. ದಾಟಿದ ಇತರ ಎರಡು ಭಾರತೀಯ ಚಿತ್ರಗಳೆಂದರೆ ದಂಗಲ್ ಮತ್ತು ರಾಜಮೌಳಿ ಅವರ ಬಾಹುಬಲಿ 2.
ಇದರೊಂದಿಗೆ, ‘ಆರ್ ಆರ್ ಆರ್’ ಚಿತ್ರವು ಭಜರಂಗಿ ಭಾಯಿಜಾನ್, ಸೀಕ್ರೆಟ್ ಸೂಪರ್‌ಸ್ಟಾರ್ ಮತ್ತು ಪಿಕೆ ಸಿನಿಮಾಗಳನ್ನು ಹಿಂದಿಕ್ಕಿ ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಭಾರತೀಯ ಚಲನಚಿತ್ರವಾಗಿದೆ.
ಇದನ್ನೂ ಓದಿ:ಕುಕ್ಕೆಗೆ ಸ್ಯಾಂಡಲ್ ವುಡ್ ನಟ ಯಶ್ ಭೇಟಿ
ರಾಮ್ ಚರಣ್, ಜೂ. ಎನ್ ಟಿಆರ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಸಮುದ್ರಖನಿ, ರೇ ಸ್ಟೀವನ್ಸನ್, ಅಲಿಸನ್ ಮುಂತಾದ ಪ್ರಮುಖರು ಚಿತ್ರದಲ್ಲಿ ನಟಿಸಿದ್ದಾರೆ.
ತೆಲುಗು ಭಾಷೆಯ ಆಕ್ಷನ್ ಡ್ರಾಮಾ ಸಿನಿಮಾ ‘ಆರ್ ಆರ್ ಆರ್’ ನ್ನು ಡಿವಿವಿ ಎಂಟರ್ ಟೈನ್‌ಮೆಂಟ್ ನ ಡಿ.ವಿ.ವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರ ಮಾರ್ಚ್ 25ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.