Advertisement

ಬಿಜೆಪಿಯೊಂದಿಗೆ ಆರ್‌ಪಿಐ ಮೈತ್ರಿ: ಅಠವಳೆ

06:45 AM Mar 05, 2018 | Team Udayavani |

ಕೋಲಾರ: ಕರ್ನಾಟಕದಲ್ಲೂ ಆರ್‌.ಪಿ.ಐ (ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾ) ಪಕ್ಷವು ಬಿಜೆಪಿಯ ಸಹಭಾಗಿತ್ವದಲ್ಲಿ ಚುನಾವಣೆಯನ್ನು ಎದುರಿಸಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವ ರಾಮದಾಸ್‌ ಅಠವಳೆ ಹೇಳಿದರು. 

Advertisement

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವ ಮೂಲಕ ರಾಜ್ಯದ 224 ಕ್ಷೇತ್ರಗಳ ಪೈಕಿ 35 ಕ್ಷೇತ್ರದಲ್ಲಿ ಆರ್‌.ಪಿ.ಐ.ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಲಾಗುವುದು. ಕನಿಷ್ಠ 5-6 ಸ್ಥಾನಗಳಲ್ಲಿ ಆರ್‌.ಪಿ.ಐ.ಅಭ್ಯರ್ಥಿಗಳು ಆಯ್ಕೆಯಾಗುವ ವಿಶ್ವಾಸವಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next