Advertisement
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೀಡಿಂಗ್ ಸ್ಕೂಲ್ಸ್ ಕಾರ್ಪೋರೇಶನ್‌ನ ರಾಷ್ಟ್ರೀಯ ಮುಖ್ಯಸ್ಥೆ ಸಬೀನಾ ಸೆಗಲ್ ಉಪಸ್ಥಿತರಿದ್ದು ರಾಯನ್ ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್‌ನ ಪ್ರವರ್ತಕಿ ಮೇಡಂ ಗ್ರೇಸ್ ಪಿಂಟೊ, ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ರಾಯನ್ ಎ.ಪಿಂಟೋ ಅವರಿಗೆ ಪ್ರಶಸ್ತಿಯನ್ನು ಪ್ರಧಾನಿಸಿ ಅಭಿನಂದಿಸಿ ಶುಭ ಹಾರೈಸಿದರು.ರಾಯನ್ ಸಂಸ್ಥೆಗಳು ಜಾಗತೀಕರಣದ ಆಧುನಿಕ ಶಿಕ್ಷಣಕ್ಕೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದು, ಮಕ್ಕಳ ಮನೋವಿಕಾಸ ಮತ್ತು ಕ್ರೀಡೆ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿ ಸರ್ವೋತ್ಕೃಷ್ಟ ಶಿಕ್ಷಣಾಲಯವಾಗಿಸಿದೆ. 1976ರಲ್ಲಿ ರಾಯನ್ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹ ಸ್ಥಾಪಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಆಗಸ್ಟಿನ್ ಎಫ್. ಪಿಂಟೋ ಅವರ ಕಂಡ ಕನಸು ನನಸಾಗಿದ್ದು, ಪ್ರಸ್ತುತ 137 ಅಂತಾರಾಷ್ಟ್ರೀಯ ಶಾಲೆಗಳು ಹಾಗೂ ಸುಮಾರು 2,70,000 ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಪಡೆಯುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪರಿಣತರಾಗಿ ಭವಿಷ್ಯತ್ತಿನಲ್ಲಿ ಧುರೀಣ ನಾಯಕರಾಗಲು ಸಂಸ್ಥೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಒಳ್ಳೆಯ ಶಿಕ್ಷಣ ಬರೇ ಪಠ್ಯ ಪುಸ್ತಕದಲ್ಲಿ ಮಾತ್ರವಲ್ಲ ವಿಶ್ವದ ಅರಿವಿನ ಇನ್ನಿತರ ಕ್ರೀಯಾಶೀಲ ಚಟುವಟಿಕೆಗಳಲ್ಲೂ ಸಿಗುತ್ತದೆ ಎಂದು ತಿಳಿದ ಸಂಸ್ಥೆಯು ಶಿಕ್ಷಣಕ್ಕೆ ರಾಷ್ಟ್ರದಲ್ಲೇ ಮೊದಲ ದರ್ಜೆಯ ಮಾನ್ಯತೆಗೆ ಪಾತ್ರವಾಗಿದೆ.