Advertisement

ರಾಯಲ್‌ ಪ್ಲೇ ವಾಲ್‌ ಡಿಸೈನ್‌

09:57 AM Mar 12, 2020 | mahesh |

ಇಂದು ಮನೆ ಎಂದ ಮೇಲೆ ಸುಣ್ಣ ಬಣ್ಣ ಮಾಡುವುದು ಸಾಮಾನ್ಯ. ಇತ್ತೀಚೆಗಂತು ಮನೆಗಳಲ್ಲಿ ವಾಲ್‌ ಡಿಸೈನ್‌ಗೆ ಅಧಿಕ ಬೇಡಿಕೆಯಿದ್ದು ಪೇಂಟರ್‌ಗಳಿಗೆ ಒಳ್ಳೆ ಲಾಭದಾಯಕವಾಗಿ ಪರಿಣಮಿಸಿದೆ.

Advertisement

ಕೆಲವರಿಗೆ ಚಿತ್ರ ರಚನೆ ಮಾಡುವುದು ಅಭ್ಯಾಸವಾಗಿರುತ್ತದೆ. ಅಂತವರು ಗೋಡೆಗಳ ಮೇಲೆ ಕೈಚಳಕ ತೋರಿಸಿದ ಮೇಲೆ ಹಲವು ಮನೆಗಳಲ್ಲಿ ಸಿಂಗಲ್‌ ಗೋಡೆಗಳಿಗೆ ಪೇಟಿಂಗ್‌ ಮಾಡಲು ಆರಂಭಿಸಿದ್ದಾರೆ.

ಇದಕ್ಕೆ ಇಂತಹದ್ದೆ ವಿದ್ಯಾರ್ಹತೆ ಬೇಕು ಎನ್ನುವುದಿಲ್ಲ ಇದು ನಿಮ್ಮ ಕ್ರಿಯಾಶೀಲ ಮತ್ತು ಆಸಕ್ತಿಗೆ ಅನುಗುಣವಾಗಿ ಇರುತ್ತದೆ. ಇತ್ತೀಚೆಗೆ ಇದಕ್ಕೆ ಸಂಬಂಧಪಟ್ಟ ಮತ್ತು ಕೆಲವು ಶಾರ್ಟ್‌ ಟೈಮ್‌ ಕೋರ್ಸ್‌ಗಳಿದ್ದು ನಿಮಗೆ ಬೇಕಾದಲ್ಲಿ ತೆಗೆದುಕೊಳ್ಳಬಹುದು. ಇನ್ನು ಕೆಲವರು ಇದನ್ನು ನೋಡಿ ಕಲಿತಿರುತ್ತಾರೆ.

ಇದಕ್ಕೆ ನಿಮಗೆ ಬಣ್ಣಗಳ ಕಾಂಬಿನೇಶನ್‌ಗಳ ಬಗ್ಗೆ ಸ್ವಲ್ಪ ಮಟ್ಟಿನ ಜ್ಞಾನವಿರಬೇಕು. ಇಲ್ಲವಾದಲ್ಲಿ ನಿಮ್ಮ ವಾಲ್‌ ಡಿಸೈನಿಂಗ್‌ ಅಂದವಾಗಿ ಕಾಣುವುದಿಲ್ಲ. ಯಾವ ರೀತಿಯ ಡಿಸೈನ್‌ ಮಾಡಬೇಕು ಎನ್ನುವ ಸ್ಕೇಚ್‌ ಇರಬೇಕು. ಗೋಡೆಯ ಅಳತೆ ಎಷ್ಟು? ಉದ್ದ-ಅಗಲ ಎಷ್ಟಿದೆ? ಇದೆಲ್ಲವನ್ನು ಮೊದಲೇ ತಿಳಿದು ಅನಂತರ ಸ್ಕೇಚ್‌ ಮಾಡಬೇಕಾಗಿರುವುದರಿಂದ ಪ್ಲಾನಿಂಗ್‌ ಸರಿಯಾದ ರೀತಿಯಲ್ಲಿರಬೇಕಾಗುತ್ತದೆ.

ಯಾವ ಯಾವ ರೀತಿಯ ಡಿಸೈನ್ಸ್‌?
ಕೆಲವು ಮನೆಗಳಲ್ಲಿ ನಾಲ್ಕರಲ್ಲಿ ಒಂದು ಗೋಡೆಗೆ ಡಿಸೈನ್‌ ಪೇಟಿಂಗ್‌ ಮಾಡಿಸುತ್ತಾರೆ ಇನ್ನು ಕೆಲವರು ಎರಡು ಗೋಡೆಗಳಿಗೆ, ಕೆಲವು ಮನೆಗಳಲ್ಲಿ ಲಿವಿಂಗ್‌ ರೂಮ್‌ನಲ್ಲಿದ್ದರೆ ಇನ್ನು ಕೆಲವೆಡೆ ಬೆಡ್‌ರೂಮ್‌ ಹೀಗೆ. ಟಿವಿ ಸ್ಯಾಂಡ್‌ಗಳ ಪಕ್ಕದಲ್ಲಿ ಹಕ್ಕಿಗಳ ಚಿತ್ತಾರ ಬಿಡಿಸುವುದು. ಯಾವುದೋ ಸ್ಲೋಗನ್‌ ಅಥವಾ ಪದ್ಯಗಳ ಮೂಲಕ ಚಿತ್ತಾರ ಮಾಡುವುದು. ಇನ್ನು ಕೆಲವರು ಡೋಟ್‌ ಅಥವಾ ಗೋಲ್ಡ್‌ನ ಮಿಶ್ರಿತ ಕಲರ್‌ ಕಾಂಬಿನೇಶನ್‌ಗಳಲ್ಲಿ ಮೀನು, ವಿವಿಧ ರೀತಿಯ ಪ್ರಾಣಿ ಪಕ್ಷಿಗಳ ಚಿತ್ತಾರ ಮಾಡುತ್ತಾರೆ.

Advertisement

ರಾಯಲ್‌ ಪ್ಲೇ ಡಿಸೈನ್‌ ಎಂದರೇನು?
ಇದು ಹೇಳಿದಷ್ಟು ಸುಲಭದ ಮಾತಲ್ಲ. ಇದು ತುಂಬಾ ಸಮಯ ತೆಗೆದುಕೊಳ್ಳುವುರಿಂದ ತಾಳ್ಮೆ ಅತಿ ಮುಖ್ಯವಾಗುತ್ತದೆ. ತಾಳ್ಮೆ ಇಲ್ಲದಿದ್ದರೆ ಈ ಕೆಲಸ ಸುಲಭವಲ್ಲ. ಡಿಸೈನ್‌ ಮಾಡುವ ಮೊದಲು ಬೇಸ್‌ ಪೇಂಟ್‌ ಮಾಡಿ ಮತ್ತೆ ಅದಕ್ಕೆ ಇಲ್ಯೂಯೂಶನ್‌ ಕಲರ್‌ ನೀಡಬೇಕಾಗುತ್ತದೆ ಅನಂತರ ನಿಮಗೆ ಬೇಕಾದ ರೀತಿಯ ವರ್ಣಚಿತ್ರ ರಚಿಸಲು ಸಾಧ್ಯವಾಗುತ್ತದೆ.

ಇದರಲ್ಲಿ ಇತ್ತೀಚೆಗೆ ತುಂಬಾ ಬೇಡಿಕೆ ಇರುವುದರಿಂದ ಪಾರ್ಟ್‌ ಟೈಮ್‌ ಆಗಿ ಕೆಲಸ ಮಾಡಲು ಇಚ್ಛಿಸುವವರು ಇದನ್ನು ಆರಿಸಿಕೊಳ್ಳಬಹುದು. ಓದುತ್ತಲೇ ಬಿಡುವಿದ್ದಾಗ ಡಿಸೈನ್‌ ಮಾಡಿಕೊಟ್ಟು ಬರಬಹುದು ನಿಮ್ಮ ಕೆಲಸದ ಮೇಲೆ ನಿಮಗೆ ಹಣ ನೀಡುವುದರಿಂದ ನಿಮ್ಮ ಕ್ರಿಯಾಶೀಲತೆಗೆ ಇಲ್ಲಿ ವೇದಿಕೆ ದೊರೆತಂತಾಗುತ್ತದೆ.

– ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next