Advertisement

ಆಗರ್ಭ ಶ್ರೀಮಂತ ಬಿರ್ಲಾ ಪುತ್ರ ರಾಜಸ್ಥಾನ್‌ ರಾಯಲ್ಸ್‌ಗೆ

06:05 AM Jan 30, 2018 | |

ಜೈಪುರ: ಆದಿತ್ಯ ಬಿರ್ಲಾ ಸಮೂಹದ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಅಂದರೆ ಹೆಚ್ಚಿನವರಿಗೆ ಗೊತ್ತಾಗದು. ಆದರೆ ಬಿರ್ಲಾ ಗ್ರೂಪ್‌ ಎಂದಕೂಡಲೇ ಎಲ್ಲರ ಕಿವಿಯರಳುತ್ತದೆ. ಇವರ ಸದ್ಯದ ಆಸ್ತಿ ಮೌಲ್ಯ 77 ಸಾವಿರ ಕೋಟಿ ರೂ.!

Advertisement

ಇಂಥ ಆಗರ್ಭ ಶ್ರೀಮಂತನ ಪುತ್ರ ಆರ್ಯಮನ್‌ ಬಿರ್ಲಾ ಅಪ್ಪನ ಪ್ರಭಾವದಿಂದ ಹೊರಬಂದು ತನ್ನದೇ ಸಾಧನೆಯಿಂದ ಜೀವನ ಕಟ್ಟಿಕೊಳ್ಳಬೇಕೆಂದು ನಿರ್ಧರಿಸುತ್ತಾರೆ. ಪರಿಣಾಮ, ಕ್ರಿಕೆಟ್‌ ಆಡಲಾರಂಭಿಸುತ್ತಾರೆ. ಈಗ ಆರ್ಯಮನ್‌ ಮಧ್ಯಪ್ರದೇಶ ರಣಜಿ ತಂಡದ ಆಟಗಾರ. ಇದಕ್ಕೂ ಮಿಗಿಲಾದ ಸಂಗತಿಯೆಂದರೆ, ಮೊನ್ನೆಯ ಐಪಿಎಲ್‌ ಹರಾಜಿನಲ್ಲಿ ಆರ್ಯಮನ್‌ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಆಯ್ಕೆಯಾಗಿರುವುದು!

ಐಪಿಎಲ್‌ನಲ್ಲಿ ಬಡವರು ಆಯ್ಕೆಯಾಗಿ ಜೀವನ ಬದಾಲಾಯಿತು ಎಂದು ಖುಷಿ ಪಡುವುದನ್ನು ನೋಡುತ್ತೇವೆ. ಇದು ಅದಕ್ಕೆ ವಿರುದ್ಧ ಕತೆ. ಶ್ರೀಮಂತನೊಬ್ಬ ಹರಾಜಿನಲ್ಲಿ ಪಾಲ್ಗೊಂಡು ಮಾರಾಟವಾಗಿ ಸಂಭ್ರಮಿಸಿದ ಕ್ಷಣ. ಮೊದಲ ಬಾರಿ ಹರಾಜು ನಡೆದಾಗ ಆರ್ಯಮನ್‌ ಮಾರಾಟವೇ ಆಗಿರಲಿಲ್ಲ. ಎರಡನೇ ಸಲ ಮತ್ತೆ ಇವರ ಹೆಸರು ಕೂಗಿದಾಗ ರಾಜಸ್ಥಾನ್‌ 30 ಲಕ್ಷ ರೂ.ಗೆ ಖರೀದಿಸಿತು. ಆರ್ಯಮನ್‌ ಇನ್ನು ಸ್ಟೀವನ್‌ ಸ್ಮಿತ್‌ ನಾಯಕತ್ವದಲ್ಲಿ ಆಡಲಿದ್ದಾರೆ.

ಸಿ.ಕೆ.ನಾಯ್ಡು ಕೂಟದಲ್ಲಿ ಮಧ್ಯಪ್ರದೇಶದ ಪರ ಆಡಿದ ಆರ್ಯಮನ್‌ 11 ಇನಿಂಗ್ಸ್‌ಗಳಲ್ಲಿ 795 ರನ್‌ ಬಾರಿಸಿದ್ದಾರೆ. ಪ್ರಸ್ತುತ ರಣಜಿಯಲ್ಲಿ ಆಡಿದ ಅವರು ಗರಿಷ್ಠ 230 ರನ್‌ ಸೇರಿದಂತೆ 4 ಶತಕ ಬಾರಿಸಿದ್ದಾರೆ. ಅವರ ಪ್ರಭಾವಿ ಪ್ರದರ್ಶನಕ್ಕೆ ಈಗ ಫ‌ಲವೂ ದಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next