ಮುಂಬಯಿ: ರಾಯನ್ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ-ಆಡಳಿತ ನಿರ್ದೇಶಕಿ, ತುಳು ಕನ್ನಡದ ಮಹಾನ್ ಸಾಧಕಿ ಮೇಡಂ ಗ್ರೇಸ್ ಪಿಂಟೊ ಆಡಳಿತದ ರಾಯನ್ ಶೈಕ್ಷಣಿಕ ಸಂಸ್ಥೆಗಳಿಗೆ ಸೋಮವಾರ ಪ್ರಕಟಗೊಂಡ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.
ರಾಯನ್ ವಿದ್ಯಾಸಂಸ್ಥೆಗಳು ಕಳೆದ ಹಲವು ವರ್ಷಗಳಿಂದ ಸತತವಾಗಿ ಶೇ. 100 ಫಲಿತಾಂಶಗಳನ್ನು ಪಡೆಯುತ್ತಿದ್ದು, ಪ್ರಸ್ತುತ ವರ್ಷವೂ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವುದರ ಮೂಲಕ ಶೇ. 100 ಫಲಿತಾಂಶ ಲಭಿಸಿದೆ. ಡಿಸ್ಟಿಂಕ್ಷನ್ ಮತ್ತು ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ.
ಖಾರ್‌ಘರ್ ಇಲ್ಲಿನ ರಾಯನ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಮಾ| ಋಕೇಶ್ ನಿಖಂ ಐಸಿಎಸ್‌ಇ ಪರೀಕ್ಷೆಯಲ್ಲಿ ಒಟ್ಟು ಶೇ. 98.06 ಅಂಕ ಗಳಿಸಿದ್ದಾರೆ. “”ನನ್ನ ಪರೀûಾ ಸಿದ್ಧತೆಯ ಸಂದರ್ಭ ಶಾಲೆ ಮತ್ತು ಶಾಲೆಯ ಶಿಕ್ಷಕರು ಬಹಳಷ್ಟು ನೆರವು ನೀಡಿದ್ದಾರೆ.
ನಮ್ಮ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಪಿಂಟೋ ನನಗೆ ಸ್ಫೂರ್ತಿಯಾಗಿದ್ದು, ಅವರು ಯಾವಾಗಲೂ ಪ್ರೋತ್ಸಾಹ, ಉತ್ತೇಜನ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ನನ್ನ ಹೆತ್ತವರೂ ನನಗೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದ್ದಾರೆ, ಈ ಸಾಧನೆಯ ಗೌರವ ಸಮಾನವಾಗಿ ಅವರೆಲ್ಲರಿಗೂ ಸಲ್ಲಬೇಕು ಎಂದು ವಿದ್ಯಾರ್ಥಿ ಋಕೇಶ್ ಹೇಳಿದ್ದಾರೆ.
ಕಾಂದಿವಲಿಯ ರಾಯನ್ ಸಂಸ್ಥೆಯ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿ ಕು| ನಂದಿನಿ ನಿಲೊತ್ಪಾಲ್ ಮಜುಂದಾರ್ ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ. 98.2 ಅಂಕಗಳನ್ನು ಗಳಿಸಿದ್ದಾರೆ. ಮಲಾಡ್‌ನ ರಾಯನ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಮಾ| ಧ್ರುವಿನ್ ಡುಂಗ್ರಾಣಿ ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ. 98 ಅಂಕ ಗಳಿಸಿದ್ದಾರೆ. “”ನಮ್ಮ ಶಾಲೆಗೆ ಮೇಡಮ್ ಪಿಂಟೋ ಭೇಟಿ ನೀಡಿದ ಪ್ರತಿ ಕ್ಷಣವೂ ನಾನು ದೊಡ್ಡ ಮೊತ್ತದ ಆತ್ಮವಿಶ್ವಾಸದ ಅನುಭವವನ್ನು ಮೈಗೂಡಿಸಿಕೊಳ್ಳುತ್ತಿದ್ದೆ ಅವರು ನಮಗಾಗಿ ಪ್ರಾರ್ಥಿಸುತ್ತಿದ್ದರು, ಆಶೀರ್ವದಿಸುತ್ತಿದ್ದರು. ಹೆತ್ತವರ ಪೊÅàತ್ಸಾಹ, ಪ್ರೇರಣೆ ಮಾರ್ಗದರ್ಶನ ಅದ್ಭುತ. ನನ್ನ ಈ ಸಾಧನೆ ಗೌರವ ಎಲ್ಲಾ ಅವರಿಗೆ ಸಲ್ಲಿಸುತ್ತೇನೆ” ಎಂದು ಧ್ರವಿನ್ ಹೇಳಿದ್ದಾರೆ. ಕಾಂದಿವಿಲಿ ರಾಯನ್ ಅಂತಾರಾಷ್ಟ್ರೀಯ ಶಾಲೆಯ ಶ್ರೇಷ್ಟ್ ಜೀವಿತ್ ಶೇ. 96.02 ಅಂಕಗಳನ್ನು ಗಳಿಸಿದ್ದಾರೆ. ನ್ಯೂ ಪನ್ವೇಲ್ ಸೈಂಟ್ ಜೋಸೆಫ್ ಹೈಸ್ಕೂಲ್‌ನ ವಿದ್ಯಾರ್ಥಿಗಳಾದ ಆಶಿಲ್ ನಾಯರ್ ಮತ್ತು ರೀತು ನಾರ್ಕರ್ ಉನ್ನತ ಶ್ರೇಣಿಯ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ರಾಯನ್ ಶಾಲೆಗಳು ಎಲ್ಲ ಬೋರ್ಡುಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿವೆ. ಇದು ರಾಯನ್ ಸಂಸ್ಥೆಗಳ ಶೈಕ್ಷಣಿಕ ಸಾಮರ್ಥ್ಯವನ್ನು ಸಮರ್ಥಿಸುತ್ತದೆ ಎಂದು ರಾಯನ್ ಅಂತಾರಾಷ್ಟ್ರೀಯ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಈ ವರ್ಷದ ಫಲಿತಾಂಶದ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. “ಮೊದಲನೆಯದಾಗಿ ನಾನು ಈ ಫಲಿತಾಂಶಕ್ಕೆ ಆಶೀರ್ವಾದವಿತ್ತ ನನ್ನ ಸರ್ವ ಶಕ್ತನಾದ ಜೀಸಸ್ ಕ್ರಿಸ್ತರಿಗೆ ಶಿರಬಾಗಿ ವಂದಿಸುತ್ತೇನೆ. ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಗಲಿರುಳು ಶ್ರಮ ವಹಿಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಶುಭ ಹಾರೈಕೆಗಳು. ಈ ಸಾಧನೆ ರಾಯನ್ ಸಂಸ್ಥೆಯ ಸಾಧನೆಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ’ ಎಂದು ಅವರು ತಿಳಿಸಿದ್ದಾರೆ.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್