ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಐಪಿಎಲ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 7 ರನ್ ಗಳ ಗೆಲುವು ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು . ಆರ್ ಸಿಬಿ ಪರ ನಾಯಕ ಕೊಹ್ಲಿ ಶೂನ್ಯಕ್ಕೆ ಔಟಾದರು. ಡು ಪ್ಲೆಸಿಸ್ 62 ರನ್ ಗಳಿಸಿದ್ದ ವೇಳೆ ರನ್ ಔಟ್ (ಯಶಸ್ವಿ ಜೈಸ್ವಾಲ್) ಆದರು. ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 77 ರನ್ ಗಳಿಸಿ ಅಬ್ಬರಿಸಿದರು.9 ವಿಕೆಟ್ ನಷ್ಟಕ್ಕೆ 189 ಗಳಿಸಿತು.
ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 182 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.ಯಶಸ್ವಿ ಜೈಸ್ವಾಲ್ 47 ರನ್ ಗಳಿಸಿದ್ದ ವೇಳೆ ಹರ್ಷಲ್ ಪಟೇಲ್ ಎಸೆದ ಚೆಂಡನ್ನು ಕೊಹ್ಲಿಕೈಗಿತ್ತು ನಿರ್ಗಮಿಸಿದರು. ಜೋಸ್ ಬಟ್ಲರ್ ಅವರನ್ನು ಖಾತೆ ತೆರೆಯುವ ಮುನ್ನವೇ ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದರು. ಉತ್ತಮ ಆಟವಾಡಿದ ದೇವದತ್ ಪಡಿಕ್ಕಲ್ 52 ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ 22 ರನ್ ಗಳಿಗೆ ಔಟಾದರು. ರನ್ ಗಳಿಸಲು ಪರದಾಡಿದ ಶಿಮ್ರಾನ್ ಹೆಟ್ಮೆಯರ್ 3 ರನ್ ಗಳಿಸಿದ್ದ ವೇಳೆ ರನ್ ಔಟ್ ಆದರು. ಧ್ರುವ್ ಜುರೆಲ್ ಔಟಾಗದೆ 34 ರನ್ ಗಳಿಸಿದರೂ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ. ಕೊನೆಯ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ 12 ರನ್ ಗಳಿಸಿದ್ದ ವೇಳೆ ಔಟಾದರು. ಹರ್ಷಲ್ ಪಟೇಲ್ 32 ಕ್ಕೆ 3 ವಿಕೆಟ್ ಪಡೆದು ಗಮನ ಸೆಳೆದರು.
ಆರ್ ಸಿಬಿ ಆಡಿದ 7 ಪಂದ್ಯಗಳಲ್ಲಿ4 ಗೆದ್ದಿದ್ದು 3ರಲ್ಲಿ ಸೋಲು ಅನುಭವಿಸಿದೆ. 8 ಅಂಕಗಳೊಂದಿಗೆ (-0.008 ರನ್ ರೇಟ್ )5 ನೇ ಸ್ಥಾನದಲ್ಲಿದೆ.
ಕಿಂಗ್ ಕೊಹ್ಲಿಗೆ ಮತ್ತೊಂದು ಶತಕ ದಾಖಲೆ ಬರೆದಿದ್ದಾರೆ. ಇದು ಐಪಿಎಲ್ 100 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಐಪಿಎಲ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದ ಮೂರನೇ ಆಟಗಾರ ವಿರಾಟ್ ಆಗಿದ್ದಾರೆ.
“ಗೋ ಗ್ರೀನ್’ ಅಭಿ ಯಾನದ ಅಂಗವಾಗಿ ಆರ್‌ಸಿಬಿ ಹಸಿರು ಜೆರ್ಸಿಯಲ್ಲಿ ಆಡಿತು. ಈ ಉಡುಗೆ ತವರಿನಲ್ಲಿ ಕೊಹ್ಲಿ ಬಳಗಕ್ಕೆ ಜಯಸಿರಿಯ ಅದೃಷ್ಟ ತಂದುಕೊಟ್ಟಿತು.