Advertisement

ಐಪಿಎಲ್‌ 2017: ಪಂಜಾಬ್‌ ವಿರುದ್ಧ ಬೆಂಗಳೂರಿಗೆ 19 ರನ್‌ ಸೋಲು

04:10 PM May 06, 2017 | Team Udayavani |

ಬೆಂಗಳೂರು: ಮತ್ತೆ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದೆದುರು 19 ರನ್ನುಗಳಿಂದ ಸೋಲಿಸಿದೆ.

Advertisement

ನಿಖರ ದಾಳಿಯಿಂದ ಪಂಜಾಬ್‌ ಮೊತ್ತವನ್ನು 138 ರನ್ನಿಗೆ ನಿಯಂತ್ರಿಸಿದ್ದ ಆರ್‌ಸಿಬಿ ಮತ್ತೆ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಯಿತು. ಮನ್‌ದೀಪ್‌ ಸಿಂಗ್‌, ಎಬಿ ಡಿ’ವಿಲಿಯರ್ ಮತ್ತು ಪವನ್‌ ನೇಗಿ ಅವರನ್ನು ಹೊರತುಪಡಿಸಿ ಉಳಿದೆಲ್ಲ ಆಟಗಾರರು ಎರಡಂಕೆಯ ಮೊತ್ತ ತಲುಪಲು ವಿಫ‌ಲರಾದರು. ಇದರಿಂದಾಗಿ ಆರ್‌ಸಿಬಿ 19 ಓವರ್‌ಗಳಲ್ಲಿ 119 ರನ್ನಿಗೆ ಆಲೌಟಾಗಿ ಶರಣಾಯಿತು.

ಅಕ್ಷರ್‌ ಪಟೇಲ್‌ ತನ್ನ 3 ಓವರ್‌ಗಳ ದಾಳಿಯಲ್ಲಿ 11 ರನ್ನಿಗೆ 3 ವಿಕೆಟ್‌ ಕಿತ್ತು ಪಂಜಾಬ್‌ ಗೆಲುವಿನ ರೂವಾರಿ ಎನಿಸಿಕೊಂಡರು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಅವರು 17 ಎಸೆತಗಳಿಂದ 38 ರನ್‌ ಸಿಡಿಸಿದ್ದರು. ಸಂದೀಪ್‌ ಶರ್ಮ 22 ರನ್ನಿಗೆ 3, ಮ್ಯಾಕ್ಸ್‌ವೆಲ್‌ 15 ರನ್ನಿಗೆ 2 ಮತ್ತು ಮೋಹಿತ್‌ ಶರ್ಮ 24 ರನ್ನಿಗೆ 2 ವಿಕೆಟ್‌ ಉರುಳಿಸಿದರು. 

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಸಲ್ಪಟ್ಟ ಪಂಜಾಬ್‌ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಎರಡು ರನ್‌ ಗಳಿಸಿದ ವೇಳೆ ಆಮ್ಲ ಅವರ ವಿಕೆಟ್‌ ಕಳೆದುಕೊಂಡು ಒದ್ದಾಡಿತು. ಗಪ್ಟಿಲ್‌ 9 ರನ್‌ ಗಳಿಸಲಷ್ಟೇ ಶಕ್ತರಾದರು. ಮಾರ್ಷ್‌, ವೋಹ್ರ ಮತ್ತು  ಸಾಹ ರನ್‌ ಗಳಿಸಲು ಒದ್ದಾಡಿ ತಂಡದ ಮೊತ್ತ ಏರಿಸಲು ಸಹಕರಿಸಿದರು.

ಸ್ಕೋರ್‌ ಪಟ್ಟಿ
ಕಿಂಗ್ಸ್‌ ಇಲೆವೆನ್‌ ಪಂಜಾಬ್‌

ಹಾಶಿಮ್‌ ಆಮ್ಲ    ಸಿ ಜಾಧವ್‌ ಬಿ ಚೌಧರಿ    1
ಮಾರ್ಟಿನ್‌ ಗಪ್ಟಿಲ್‌    ಸಿ ನೇಗಿ ಬಿ ಅರವಿಂದ್‌    9
ಶಾನ್‌ ಮಾರ್ಷ್‌    ಸಿ ಮನ್‌ದೀಪ್‌ ಬಿ ನೇಗಿ    20
ಮನನ್‌ ವೋಹ್ರ    ಸಿ ಡಿ’ವಿಲಿಯರ್ ಬಿ ಚಾಹಲ್‌    25
ವೃದ್ಧಿಮಾನ್‌ ಸಾಹ    ಬಿ ವಾಟ್ಸನ್‌    21
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಬದ್ರಿ ಬಿ ಚಾಹಲ್‌    6
ಅಕ್ಷರ್‌  ಪಟೇಲ್‌    ಔಟಾಗದೆ    38
ಮೋಹಿತ್‌ ಶರ್ಮ    ಸಿ ಜಾಧವ್‌ ಬಿ ಚೌಧರಿ    6
ವರುನ್‌ ಅರೋನ್‌    ಔಟಾಗದೆ    0
ಇತರ:        12
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    138
ವಿಕೆಟ್‌ ಪತನ: 1-2, 2-18, 3-39, 4-61, 5-78, 6-112, 7-119
ಬೌಲಿಂಗ್‌: ಅನಿಕೀತ್‌ ಚೌಧರಿ    4-1-17-2
ಶ್ರೀನಾಥ್‌ ಅರವಿಂದ್‌        2-0-13-1
ಶೇನ್‌ ವಾಟ್ಸನ್‌        4-0-43-1
ಸಾಮ್ಯುಯೆಲ್‌ ಬದ್ರಿ        3-0-14-0
ಪವನ್‌ ನೇಗಿ        3-0-21-1
ಯಜ್ವೇಂದ್ರ ಚಾಹಲ್‌        4-0-21-2

Advertisement

ರಾಯಲ್‌ ಚಾಲೆಂಜರ್ ಬೆಂಗಳೂರು
ಮನ್‌ದೀಪ್‌ ಸಿಂಗ್‌    ಬಿ ಮ್ಯಾಕ್ಸ್‌ವೆಲ್‌    46
ಕ್ರಿಸ್‌ ಗೇಲ್‌    ಸಿ ಗಪ್ಟಿಲ್‌ ಬಿ ಸಂದೀಪ್‌    0
ವಿರಾಟ್‌ ಕೊಹ್ಲಿ    ಬಿ ಸಂದೀಪ್‌    6
ಎಬಿ ಡಿ’ವಿಲಿಯರ್    ಸಿ ಸಾಹ ಬಿ ಸಂದೀಪ್‌    10
ಕೇದಾರ್‌ ಜಾಧವ್‌    ಸಿ ಪಟೇಲ್‌ ಬಿ ಮೋಹಿತ್‌    6
ಶೇನ್‌ ವಾಟ್ಸನ್‌    ಸಿ ಸಾಹ ಬಿ ಪಟೇಲ್‌    3
ಪವನ್‌ ನೇಗಿ    ಸಿ ಸಾಹ ಬಿ ಪಟೇಲ್‌    21
ಶ್ರೀನಾಥ್‌ ಅರವಿಂದ್‌    ಎಲ್‌ಬಿಡಬ್ಲ್ಯು ಬಿ ಮ್ಯಾಕ್ಸ್‌ವೆಲ್‌    4
ಸಾಮ್ಯುಯೆಲ್‌ ಬದ್ರಿ    ಬಿ ಪಟೇಲ್‌    8
ಅನಿಕೀತ್‌ ಚೌಧರಿ    ಸಿ ಗಪ್ಟಿಲ್‌ ಬಿ ಮೋಹಿತ್‌    4
ಯಜ್ವೇಂದ್ರ ಚಾಹಲ್‌    ಔಟಾಗದೆ    4
ಇತರ:        7
ಒಟ್ಟು  (19 ಓವರ್‌ಗಳಲ್ಲಿ ಆಲೌಟ್‌)    119
ವಿಕೆಟ್‌ ಪತನ: 1-1, 2-23, 3-37, 4-52, 5-71, 6-73, 7-87, 8-111, 9-111
ಬೌಲಿಂಗ್‌: ಸಂದೀಪ್‌ ಶರ್ಮ    4-0-22-3
ಟಿ. ನಟರಾಜನ್‌        1-0-15-0
ವರುಣ್‌ ಅರೋನ್‌        4-0-28-0
ಮೋಹಿತ್‌ ಶರ್ಮ        4-0-24-2
ಅಕ್ಷರ್‌ ಪಟೇಲ್‌        3-0-11-3
ಗ್ಲೆನ್‌ ಮ್ಯಾಕ್ಸ್‌ವೆಲ್‌        3-0-15-2

ಪಂದ್ಯಶ್ರೇಷ್ಠ: ಸಂದೀಪ್‌ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next