Advertisement

ಹೆದ್ದಾರಿ ರೌಡಿ ಶೀಟರ್‌ ಬರ್ಬರ ಹತ್ಯೆ

11:19 AM Oct 05, 2021 | Team Udayavani |

ನೆಲಮಂಗಲ: ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಹನುಮಂತಪುರ ಗೇಟ್‌ ಬಳಿ ಮಧ್ಯಾಹ್ನವೇ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿರುವ ಘಟನೆ ನಡೆದಿದೆ.

Advertisement

ತ್ಯಾಮಗೊಂಡ್ಲು ಠಾಣೆ ವ್ಯಾಪ್ತಿಯ ರೌಡಿಶೀಟರ್‌ ಜೈಶ್ರೀರಾಮ್‌(31) ಹತ್ಯೆಗೀಡಾದವ. ಸತೀಶ್‌ (29) ಮೃತನೊಂದಿಗೆ ಗಾಯಗೊಂಡಿದ್ದಾನೆ. ರೌಡಿಶೀಟರ್‌ ಜೈಶ್ರೀರಾಮ್‌ ಮೂಲತಃ ತ್ಯಾಮಗೊಂಡ್ಲು ನಿವಾಸಿಯಾಗಿದ್ದು ಇತ್ತೀಚೆಗೆ ಬೆಂಗಳೂರಿನ ಯಶವಂತಪುರದಲ್ಲಿ ವಾಸವಾಗಿದ್ದ ಎನ್ನಲಾಗಿದೆ.

ಈತ ಸೋಮವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿನಿಂದ ತುಮಕೂರು ಕಡೆಗೆ ಬೈಕ್‌ನಲ್ಲಿ ಸ್ನೇಹಿತ ಸತೀಶನೊಂದಿಗೆ ತುಮಕೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಪ್ಪು ಬಣ್ಣದ ಕಾರಿನಲ್ಲಿದ್ದ ಸುಮಾರು 5ಮಂದಿ ಹಂತಕರು ಹನುಮಂತಪುರ ಗ್ರಾಮದ ಬಳಿ ಬೈಕ್‌ಗೆ ಡಿಕ್ಕಿ ಹೊಡೆಸಿದರು. ಈ ವೇಳೆ ಬೈಕ್‌ನಲ್ಲಿದ್ದ ಇಬ್ಬರೂ ಕೆಳಗೆ ಬಿದ್ದ ಕಾರಣಕ್ಕೆ ಕಾರಿನಲ್ಲಿದ್ದವರು ಏಕಾಏಕಿ ಮನಸೋ ಇಚ್ಚೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು.

ಇದನ್ನೂ ಓದಿ:- ಕಬ್ಬು ಬೆಳೆಗಾರರ ಬಾಕಿ ನೀಡಲು ಕಾರ್ಖಾನೆಗಳಿಗೆ ನೋಟಿಸ್: ಸಚಿವ ಮುನೇನಕೊಪ್ಪ

ಘಟನೆಯಲ್ಲಿ ಜೈ ಶ್ರೀರಾಮ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಯಿಂದ ಗಾಯಗೊಂಡ ಸತೀಶ್‌ ಆತಂಕಗೊಂಡಿದ್ದು ಹೆದ್ದಾರಿ ಹತ್ಯೆ ಪ್ರಕರಣದ ವಿಚಾರ ತಿಳಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೋನಾವಂಶಿಕೃಷ್ಣ ತಂಡ ಸ್ಥಳ ಪರಿಶೀಲನೆ ನಡೆಸಿತು. ತ್ಯಾಮಗೊಂಡ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಸಕ್ರಿಯನಾಗಿದ್ದ

ರೌಡಿಶೀಟರ್‌ ಪ್ರಾರಂಭದಲ್ಲಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದು, ನಂತರ ಆಟೋ ಮತ್ತು ಟ್ರ್ಯಾಕ್ಟರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ತ್ಯಾಮಗೊಂಡ್ಲು ಪಟ್ಟಣಕ್ಕೆ ವ್ಯಾಸಂಗಕ್ಕೆ ಬರುತ್ತಿದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ.

ನಂತರ ಸಣ್ಣಪುಟ್ಟ ಕಳ್ಳತನದ ವಿಚಾರದಲ್ಲಿ ಜೈಲುಪಾಲಾಗಿದ್ದ. ಅಲ್ಲಿ ಪರಿಚಿತರಾಗಿದ್ದ ಕೆಲ ಆರೋಪಿಗಳು ಮತ್ತು ರೌಡಿಗಳ ಸಂಪರ್ಕ ಸಾಧಿಸಿದ್ದರಿಂದ ಆಗಿಂದ್ದಾಗ್ಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಾಲೂಕು ಸೇರಿದಂತೆ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರೀತಿಸಿ ಮದುವೆಯಾದವಳನ್ನೇ ತೊರೆದಿದ್ದ: ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಪರಿಚಯವಾಗಿ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದ್ದರಿಂದ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ತೊರೆದು ಬೆಂಗಳೂರು ಸೇರಿದ್ದ ಎನ್ನಲಾಗಿದೆ. ಈ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿಹತ್ಯೆಯಾಗಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next