Advertisement
ಅಸ್ಗರ್ ಆಲಿ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 3 ಕೊಲೆ ಪ್ರಕರಣ ಸಹಿತ ಕೊಲೆ ಬೆದರಿಕೆ, ಸುಲಿಗೆ, ದರೋಡೆ ಸಹಿತ 9 ಪ್ರಕರಣಗಳಿವೆ. ಆರೋಪಿ 2007ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ದುಬಾೖಗೆ ಪರಾರಿಯಾಗಿದ್ದ.
ಟಾರ್ಗೆಟ್ ಇಲ್ಯಾಸ್, ಅನಂತು ಕೊಲೆ ಪ್ರಕರಣದ ಆರೋಪಿ ಅಸ್ಗರ್ ಆಲಿ ಮೇಲೆ ಉಳ್ಳಾಲ ಯುವತಿ ಶಕಿನಾ ಕೊಲೆ ಪ್ರಕರಣದ ಆರೋಪವೂ ಇದೆ. ಯುವತಿಯ ಬಗ್ಗೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಪಾತಕಿ ಮಾಡೂರು ಇಸುಬು ಬಂಧನ ವೇಳೆ ಯುವತಿ ಶಕಿನಾ ಕೊಲೆಯಾಗಿರುವ ಬಗ್ಗೆ ಮತ್ತು ಇದರಲ್ಲಿ ಅಸ್ಗರ್ ಆಲಿ ಶಾಮೀಲಾಗಿರುವ ಬಗ್ಗೆ ಬಾಯ್ಬಿಟ್ಟಿದ್ದ. ಹಾಗಾಗಿ ನಗರದಲ್ಲಿ ಅಸ್ಗರ್ ಮೇಲೆ 3 ಕೊಲೆ ಪ್ರಕರಣಗಳಿವೆ.
Related Articles
ಈತ ನಕಲಿ ಪಾಸ್‌ಪೋರ್ಟ್ ಹೊಂದಿದ್ದು, ಅಶ್ರಫ್ ಆಲಿ ಎಂದು ಹೆಸರು ಕೊಟ್ಟಿದ್ದ. ಇದಕ್ಕೆ ನವಾಝ್ ಮತ್ತು ರಶೀದ್ ಸಹಕಾರ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಕೂಡ ಬಂಧಿಸಲಾಗಿದೆ. ಅವರಿಂದ ಸುಮಾರು 35 ಪಾಸ್‌ಪೋರ್ಟ್ ಗಳನ್ನು ವಶಪಡಿಸಿ ಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅಸಲಿಯೆಷ್ಟು, ನಕಲಿಯೆಷ್ಟು ಎಂದು ಪತ್ತೆಹಚ್ಚಲಾಗುವುದು. ನಕಲಿ ಪಾಸ್‌ಪೋರ್ಟ್ ಜಾಲದ ಹಿಂದೆ ಇನ್ನಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ದುಬಾೖಯಲ್ಲಿದ್ದು ಟಾರ್ಗೆಟ್ಮಾಡೂರು ಇಸುಬು, ರಶೀದ್ ಮಲಬಾರಿಯ ನಿಕಟವರ್ತಿಯಾಗಿರುವ ಅಸYರ್ ಆಲಿ ಮತ್ತು ಟಾರ್ಗೆಟ್ ಗ್ಯಾಂಗ್‌ನ ಇಲ್ಯಾಸ್ ಮಧ್ಯೆ ವೈಮನಸ್ಸಿದ್ದು, ಇಲ್ಯಾಸ್ ಕೊಲೆಗೆ ದುಬಾೖಯಲ್ಲಿದ್ದೇ ಸ್ಕೆಚ್ ಹಾಕಿ ಸುಪಾರಿ ನೀಡಿದ್ದ. ಇಲ್ಯಾಸ್ ಕೊಲೆಯಾದ ಬಳಿಕ ಪ್ರಕರಣದ ಆರೋಪಿಗಳನ್ನು ಮುಂಬಯಿಗೆ ಕರೆಸಿ ಔತಣ ಕೂಟವನ್ನೂ ಏರ್ಪಡಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ದುಬಾೖಯಲ್ಲಿ ದಾವೂದ್ ಮತ್ತು ಇತರರ ಜತೆಗಿದ್ದು, ಕೊಲೆ ಸಂಚು ರೂಪಿಸುತ್ತಿದ್ದ. ಕೊಲೆ ಆರೋಪಿಗಳಿಗೆ ಮುಂಬಯಿಯಲ್ಲಿ ಅಡಗುದಾಣ ವ್ಯವಸ್ಥೆ ಮಾಡುತ್ತಿದ್ದ. ಅಲ್ಲದೆ ಹಫ್ತಾ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ ನಡೆದ ಶೂಟೌಟ್ ಪ್ರಕರಣವೊಂದರಲ್ಲಿಯೂ ಭಾಗಿಯಾದ ಆರೋಪ ಇವನ ಮೇಲಿದೆ.