Advertisement
ಯಾರೀತ ಮಿಸ್ಟರ್ ಬೀನ್?
Related Articles
Advertisement
ಚಿಕ್ಕವಯಸ್ಸಿನಲ್ಲಿಯೇ ಜೇಮ್ಸ್ ಬಾಂಡ್ ಸಿನಿಮಾದ ನಾಯಕನಾಗಬೇಕೆಂಬ ಕನಸು ಕಂಡಿದ್ದ ರೋವನ್ ತನ್ನ ಅದಮ್ಯ ಆಸೆಯ ನಡುವೆಯೇ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಆಕ್ಸ್ ಫರ್ಡ್ ವಿವಿಯಲ್ಲಿ ಪದವಿ ಗಳಿಸಿದ ನಂತರ ರೋವನ್ ಅವರ ಮುಂದಿದ್ದ ಆಯ್ಕೆ ಎಡರೇ..ಒಂದು ಇಂಜಿನಿಯರ್ ಆಗುವುದು ಇಲ್ಲವೇ ಹಾಸ್ಯ ನಟನಾಗುವುದು. ಕೊನೆಗೆ ನಟನಾಗುವ ನಿರ್ಧಾರ ಕೈಗೊಂಡಾಗ ತಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಆದರೆ ಕೆಲವೇ ವರ್ಷಗಳಲ್ಲಿ ಮಿ.ಬೀನ್ ಅವೆಲ್ಲವನ್ನೂ ಮೀರಿ ಬೆಳೆದ ನಂತರ ಪೋಷಕರಿಗೆ, ಸಹೋದರರಿಗೂ ರೋವನ್ ಸಾಧನೆ ಹೆಮ್ಮೆ ಪಡುವಂತೆ ಮಾಡಿತ್ತು!
1979ರಲ್ಲಿ ಅಟ್ಕಿನ್ ಸನ್ ಬಿಬಿಸಿ ರೇಡಿಯೋದಲ್ಲಿ “ದ ಅಟ್ಕಿನ್ ಸನ್ ಪೀಪಲ್” ಎಂಬ ಕಾಮಿಡಿ ಶೋನ ಸೀರೀಸ್ ಆರಂಭಗೊಂಡಿತ್ತು. ಅದರ ಜತೆ, ಜತೆಗೆ ಟೆಲಿವಿಷನ್ ನಲ್ಲಿ “Not the Nine O’clock News” ಎಂಬ ಕಾಮಿಡಿ ಶೋ ಪ್ರಾರಂಭವಾಗಿತ್ತು. ಟಿವಿ ಕಾರ್ಯಕ್ರಮದ ಯಶಸ್ಸಿನ ಪರಿಣಾಮ ಅಟ್ಕಿನ್ ಸನ್ ಕಾಮಿಡಿ ಸಿನಿಮಾದಲ್ಲಿ ನಟಿಸುವಂತೆ ಮಾಡಿತ್ತು. The Black Adder” ಎಂಬ ಸಿನಿಮಾ ಇಂಗ್ಲೆಂಡ್ ನಾದ್ಯಂತ ಅತೀ ಜನಪ್ರಿಯತೆ ಪಡೆದುಬಿಟ್ಟಿತ್ತು. ನಂತರ ಕಿರು ಹಾಸ್ಯ ಚಿತ್ರಗಳಾದ The Appointments of Dennis Jennings ಮತ್ತು The Tall Guy ಸ್ಥಳೀಯವಾಗಿ ಮತ್ತಷ್ಟು ಜನಮನ್ನಣೆ ಪಡೆದಿತ್ತು.
ಬದುಕಿನ ದಿಕ್ಕು ಬದಲಾಯಿಸಿದ್ದು “ಬಫೂನ್ ಬೀನ್”!
ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅಟ್ಕಿನ್ ಸನ್ ಕನ್ನಡಿ ಮುಂದೆ ನಿಂತು ವಿವಿಧ ಭಂಗಿಯನ್ನು ಪ್ರದರ್ಶಿಸುತ್ತಿದ್ದಾಗ ಹುಟ್ಟಿಕೊಂಡ ಪಾತ್ರವೇ “ಮಿಸ್ಟರ್ ಬೀನ್”!ಇದರಲ್ಲಿ ಕುತೂಹಲಕಾರಿ ವಿಷಯ ಏನೆಂದರೆ ಕಾಮಿಡಿ ಶೋನ ಮೊದಲ ಕಂತು ನಿರ್ಮಾಣಗೊಂಡಿದ್ದರು ಕೂಡಾ ಹೆಸರು ಮಾತ್ರ ಆಯ್ಕೆಯಾಗಿರಲಿಲ್ಲವಾಗಿತ್ತಂತೆ. ಕಾಮಿಡಿ ಶೋನ ಹೆಸರಿಗಾಗಿ ಹಲವಾರು ತರಕಾರಿ ಹೆಸರುಗಳು ಪ್ರಭಾವ ಬೀರಿದ್ದವಂತೆ. ಅದರಲ್ಲಿ ಮಿ.ಕಾಲಿಫ್ಲವರ್ ಕೂಡಾ ಒಂದು! ಅಂತೂ ಕೊನೆಗೂ ಮಿ.ಬೀನ್ ಎಂಬ ಹೆಸರನ್ನು ಅಂತಿಮಗೊಳಿಸಲಾಗಿತ್ತು! 1990ರಲ್ಲಿ ಮಿ.ಬೀನ್ ಕಾಮಿಡಿ ಸೀರಿಯಲ್ ಪ್ರಸಾರವಾದ ನಂತರ ಯುನೈಟೆಡ್ ಕಿಂಗ್ ಡಮ್ ನಲ್ಲಿ ಅಪಾರ ಜನಪ್ರಿಯತೆ ಪಡೆಯಿತು. ನಂತರ ಮಿಸ್ಟರ್ ಬೀನ್ ಜಾಗತಿಕವಾಗಿ ಗಳಿಸಿದ ಜನಮನ್ನಣೆ ಇತಿಹಾಸವಾಗಿದೆ.
ಐದು ವರ್ಷಗಳ ಕಾಲ ಪ್ರಸಾರಗೊಂಡ ಮಿ.ಬೀನ್ ಟೆಲಿವಿಷನ್ ಸರಣಿ ಶೋ ಸುಮಾರು 18ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದರು. ಅಷ್ಟೇ ಅಲ್ಲ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಅಟ್ಕಿನ್ ಸನ್ ಅವರ ಮುಡಿಗೇರಿದ್ದವು. ಜಗತ್ತಿನ 245 ದೇಶಗಳಿಗೆ ಮಿ.ಬೀನ್ ಪ್ರಸಾರದ ಹಕ್ಕು ಮಾರಾಟ ಮಾಡಲಾಗಿತ್ತು.
ಮಿಸ್ಟರ್ ಬೀನ್ ಏಕವ್ಯಕ್ತಿಯ ಅಭಿನಯ, ಕಡಿಮೆ ಮಾತಿನ, ತನ್ನ ವಿಶಿಷ್ಟ ಶೈಲಿಯ ಪೆದ್ದುತನದ ಕೆಲಸದಿಂದ ತಾನೇ ತೊಂದರೆಗೆ ಸಿಲುಕಿಕೊಳ್ಳುವುದು…ಹೀಗೆ ಹೊಸ, ಹೊಸ ಐಡಿಯಾಗಳೊಂದಿಗೆ ಸೀರೀಸ್ ಪ್ರಸಾರವಾಗುವ ಮೂಲಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಮಿ.ಬೀನ್ ಅಚ್ಚುಮೆಚ್ಚು. ಅಟ್ಕಿನ್ ಸನ್ ಅವರ ಸೀರೀಸ್ ನಲ್ಲಿ ಪೋಷಕ ಪಾತ್ರಗಳಲ್ಲಿ ಹಲವಾರು ಸಿನಿಮಾ ಹಾಗೂ ಸೀರಿಯಲ್ ಗಳ ಖ್ಯಾತ ನಟರು ಪಾತ್ರಗಳನ್ನು ನಿರ್ವಹಿಸುತ್ತಾರೆ.
ನಟನಾಗದಿದ್ದರೆ ಇಂಜಿನಿಯರ್ ಆಗಿಯೇ ಖುಷಿ ಪಡುತ್ತಿದ್ದ ಎನ್ನುವ ಅಟ್ಕಿನ್ ಸನ್ 1990ರಲ್ಲಿ ಮದುವೆಯಾಗುವ ಮುನ್ನ ಮೇಕಪ್ ಆರ್ಟಿಸ್ಟ್ ಸುನೇತ್ರಾ ಸಸ್ಟ್ರೈ ಜತೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಜತೆಗಿದ್ದರು. ದಂಪತಿಗೆ ಲಿಲೈ ಗ್ರೇಸಿ ಹಾಗೂ ಬೆಂಜಮಿನ್ ಅಲೆಕ್ಸಾಂಡರ್ ಸೆಬಾಸ್ಟಿಯನ್ ಎಂಬ ಪುತ್ರನಿದ್ದಾನೆ. 2014ರಲ್ಲಿ ಸುನೇತ್ರಾ ಹಾಗೂ ಅಟ್ಕಿನ್ ಸನ್ ವಿಚ್ಛೇದನ ಪಡೆಯುವ ಮೂಲಕ ಬೇರಾಗಿದ್ದರು.
ನಂತರ ಅಟ್ಕಿನ್ ಸನ್ ನಟಿ, ಗೆಳತಿ ಲೂಯಿಸ್ ಫೋರ್ಡ್ ಜತೆ ಡೇಟಿಂಗ್ ಆರಂಭಿಸಿದ್ದರು. ಇಬ್ಬರು ವಿವಾಹವಾಗಿರಲಿಲ್ಲವಾಗಿತ್ತು. ಆದರೆ ಜೋಡಿಗೆ ಮಗುವೊಂದು ಜನಿಸಿತ್ತು. ಎರಡು ವರ್ಷದ ಹಿಂದಷ್ಟೇ ಮಿ.ಬೀನ್ ಸಾವನ್ನಪ್ಪಿರುವ ಸುಳ್ಳು ಸುದ್ದಿ ಭರ್ಜರಿಯಾಗಿ ಹರಿದಾಡಿತ್ತು. ಕೊನೆಗೆ ಅದು ಸುಳ್ಳು ಎಂದು ಸ್ವತಃ ಅಟ್ಕಿನ್ ಸನ್ ಸ್ಪಷ್ಟನೆ ನೀಡಿದ್ದರು. ಅಭಿನಯದ ಜತೆಗೆ ರೇಸಿಂಗ್ ಕಾರು ಮತ್ತು ಕಾರು ಸಂಗ್ರಹದ ವಿಪರೀತ ಗೀಳು ಅಟ್ಕಿನ್ ಸನ್ ಗೆ. ಬೆಳ್ಳಿಪರದೆ ಮೇಲೆ ನಕ್ಕು ನಗಿಸುವ ಅಟ್ಕಿನ್ ಸನ್ ವೈಯಕ್ತಿಕ ಬದುಕಿನಲ್ಲಿ ಗಂಭೀರ ಹಾಗೂ ಸಂಕೋಚ ಸ್ವಭಾವದ ವ್ಯಕ್ತಿ. ಅಂದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಅಟ್ಕಿನ್ ಸನ್ ಯಾವುದೇ ಖಾತೆ ಹೊಂದಿಲ್ಲ. ಇನ್ಸ್ ಸ್ಟಾಗ್ರಾಂ ಹಾಗೂ ಟ್ವೀಟರ್ ನಲ್ಲಿ ಕೆಲವು ಅಭಿಮಾನಿಗಳು ಖಾತೆಯನ್ನು ತೆರೆದಿದ್ದಾರೆ.
*ನಾಗೇಂದ್ರ ತ್ರಾಸಿ