Advertisement
ಸೋಮನಾಥ ದೇವಾಲಯವನ್ನು ಪ್ರವೇಶಿಸುವಾಗ ಸಂದರ್ಶಕರು ಸಹಿ ಮಾಡುವ ರಿಜಿಸ್ಟರ್‌ನಲ್ಲಿ ರಾಹುಲ್ ಗಾಂಧಿ ಮಾಡಿರುವ ದಾಖಲಾತಿ ಪುಟದ ಚಿತ್ರವನ್ನು ಕಾಂಗ್ರೆಸ್ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, “ಇದಕ್ಕೆ ಹೊರತಾಗಿ ಈಗ ಚಲಾವಣೆಯಲ್ಲಿರುವ ಬೇರೆ ಯಾವುದೇ ಪ್ರವೇಶ ದಾಖಲಾತಿಗಳು ಕೃತಕವಾಗಿ ಸೃಷ್ಟಿಸಲ್ಪಟ್ಟದ್ದು ‘ ಎಂದು ಸ್ಪಷ್ಟಪಡಿಸಿದೆ.
Related Articles
Advertisement
ರಾಹುಲ್ ಗಾಂಧಿ ಅವರ ಸೋಮನಾಥ ದೇವಸ್ಥಾನ ಭೇಟಿಯ ಬಗ್ಗೆ ಅವರ ಮಾಧ್ಯಮ ಸಂಚಾಲಕ ಮನೋಜ್ ತ್ಯಾಗಿ ಮಾಡಿದ್ದಾರೆ ಎನ್ನಲಾದ ರಿಜಿಸ್ಟರ್ ಎಂಟ್ರಿಯು ವಿವಾದವನ್ನು ಸೃಷ್ಟಿಸಿದೆ.
ರಾಹುಲ್ ಗಾಂಧಿ ಅವರು ಇಂದು ಬುಧವಾರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುವ ಸ,ದರ್ಭದಲ್ಲಿ ರಾಹುಲ್ ಒಳಗೆ ಹೋಗುತ್ತಿದ್ದಂತೆಯೇ ರಿಜಿಸ್ಟರ್ ಎಂಟ್ರಿ ಮಾಡಲಾಯಿತು. ಅದೇ ರೀತಿ ರಿಜಿಸ್ಟರ್‌ನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಹೆಸರನ್ನೂ ಎಂಟ್ರಿ ಮಾಡಲಾಯಿತು.
ವರದಿಗಳ ಪ್ರಕಾರ ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿರುವ ಈ ದೇವಾಲಯಕ್ಕೆ ಹಿಂದುಯೇತರರು ಭೇಟಿ ನೀಡುವಾಗ ರಿಜಿಸ್ಟರ್ ಎಂಟ್ರಿ ಮಾಡುವುದು ಕ್ರಮ ಎಂದು ವರದಿಗಳು ಹೇಳಿವೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್‌ಜೇವಾಲಾ ಅವರು, “ರಾಹುಲ್ ಗಾಂಧಿ ಅವರ ದೇವಳ ಭೇಟಿಯ ಬಗ್ಗೆ ಬಿಜೆಪಿಗೆ ಆದೇಕೋ ಸಮಸ್ಯೆ ಇದೆ. ದೇವರ ಹೆಸರಿನಲ್ಲಿ ಕೊಳಕು ರಾಜಕಾರಣ ಮಾಡಬಾರದೆಂದು ನಾವು ಅವರಲ್ಲಿ ವಿನಂತಿಸುತ್ತೇವೆ’ ಎಂದಿದ್ದಾರೆ.