ಮಧುರೈ : ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದ್ದು, ಶನಿವಾರ ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಜಾಬ್ ವಿಷಯವು ಉದ್ವಿಗ್ನತೆಗೆ ಕಾರಣವಾಯಿತು.
ಮಧುರೈ ಜಿಲ್ಲೆಯ ಮೇಲೂರು ಪುರಸಭೆಯ ಬೂತ್‌ನಲ್ಲಿ ಮಹಿಳೆಯರು ಮುಖ ಮುಚ್ಚಿಕೊಂಡು ಮತದಾನ ಮಾಡುವುದನ್ನು ಬಿಜೆಪಿ ಪೋಲಿಂಗ್ ಏಜೆಂಟ್ ಆಕ್ಷೇಪಿಸಿದರು.
ನನಗೆ ಮತ ಹಾಕುವ ಮುನ್ನ ಹಿಜಾಬ್ ಧರಿಸಿರುವ ಮಹಿಳೆಯ ಮುಖ ತೋರಿಸಬೇಕು ಎಂದು ಹೇಳಿದ್ದಾರೆ. ಈ ವೇಳೆ ಪೋಲ್ ಅಧಿಕಾರಿಗಳು ನಾವು ಮುಖವನ್ನು ನೋಡಿದ್ದೇವೆ ಮತ್ತು ಪರಿಶೀಲಿಸಿದ್ದೇವೆ ಇಷ್ಟು ಸಾಕು ಎಂದಿದ್ದಾರೆ.
ಗೊಂದಲ ಸೃಷ್ಟಿಯಾದ ಬಳಿಕ ಬಿಜೆಪಿಯ ಬೂತ್ ಏಜೆಂಟರನ್ನು ಹೊರಗೆ ಕಳುಹಿಸಲಾಗಿದ್ದು, ಮಹಿಳೆ ಮತ ಚಲಾವಣೆ ಮಾಡಿದ್ದಾರೆ ಎಂದು ತಿಳಿಸು ಬಂದಿದೆ.
ನಕಲಿ ಮತದಾನವಾಗುವ ಸಾಧ್ಯತೆಯಿಂದ ಮುಖ ತೋರಿಸಲು ಹೇಳಿದ್ದೇನೆ ಹೊರತು ಬೇರೆ ಭಾವನೆ ಇಲ್ಲ ಎಂದು ಬಿಜೆಪಿ ಕಾರ್ಯಕರ್ತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.