Advertisement

NDA ಮೈತ್ರಿಕೂಟಕ್ಕೆ ನೀಡಿದ ಬೆಂಬಲ ಹಿಂಪಡೆಯಿರಿ: ನಿತೀಶ್ ಗೆ ಅಖಿಲೇಶ್ ಒತ್ತಾಯ

04:39 PM Oct 11, 2024 | Team Udayavani |

ಲಕ್ನೋ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಶುಕ್ರವಾರ(ಅ11) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಎನ್‌ಡಿಎ ನೀಡಿದ ಬೆಂಬಲವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರಕಾರ ಸಮಾಜವಾದಿ ಸಿದ್ಧಾಂತವಾದಿ ಜಯಪ್ರಕಾಶ್ ನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ನಿಲ್ಲಿಸಿದೆ ಎಂದು ಕಿಡಿ ಕಾರಿದ್ದಾರೆ.

Advertisement

ಜೈ ಪ್ರಕಾಶ್ ನಾರಾಯಣ್ ಇಂಟರ್ನ್ಯಾಷನಲ್ ಸೆಂಟರ್ (JPNIC) ಗೆ ‘ಸಮಾಜವಾದಿಗಳು’ ಭೇಟಿ ನೀಡುವುದನ್ನು ಬಿದಿರಿನ ಬ್ಯಾರಿಕೇಡ್‌ಗಳು ತಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಖಿಲೇಶ್ ಆಕ್ರೋಶ ಹೊರ ಹಾಕಿದ್ದಾರೆ.

ಅಖಿಲೇಶ್ ಗುರುವಾರ ರಾತ್ರಿ JPNIC ಗೆ ತೆರಳಿದ್ದು, ಪ್ರವೇಶಿಸದಂತೆ ತಡೆದಿದ್ದಕ್ಕಾಗಿ ಯೋಗಿ ಆದಿತ್ಯನಾಥ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

”ಜೆಪಿ ಅವರ ಚಳವಳಿಯು ನಿತೀಶ್ ಕುಮಾರ್ ಅವರು ರಾಜಕೀಯ ಹೊರಹೊಮ್ಮುವಿಕೆಗೆ ಕಾರಣವಾಗಿದ್ದು ಅದಕ್ಕೆ ಬಿಹಾರ ಸಿಎಂ ಋಣಿಯಾಗಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಹೇಳಿದ್ದಾರೆ.

Advertisement

”ಬಿಜೆಪಿಯವರು ವಿನಾಶಕಾರಿಯಾಗಿದ್ದಾರೆ. ಅವರಿಗೆ ಒಳ್ಳೆಯದನ್ನು ನೀಡಿ ಮತ್ತು ಅವರು ಅದನ್ನು ನಾಶಪಡಿಸುತ್ತಾರೆ. ಹಿಂದೆಯೂ ಸಮಾಜವಾದಿಗಳಾದ ನಮ್ಮನ್ನು ತಡೆದರು. ಇದು ನವರಾತ್ರಿಯ ಒಂಬತ್ತನೇ ದಿನ, ಹಬ್ಬದ ದಿನದಂದು ಅವರು ಯಾವ ರೀತಿಯ ‘ಅಧರ್ಮ’ ಮಾಡುತ್ತಿದ್ದಾರೆ”ಎಂದು ಕಿಡಿ ಕಾರಿದ್ದಾರೆ.

ಭದ್ರತೆಯ ಕಾರಣ ನೀಡಿ ಜೆಪಿ ಇಂಟರ್‌ನ್ಯಾಶನಲ್ ಸೆಂಟರ್‌ಗೆ ಭೇಟಿ ನೀಡುವುದನ್ನು ಅಧಿಕಾರಿಗಳು ತಡೆದ ನಂತರ ನೂರಾರು ಸಮಾಜವಾದಿ ಪಕ್ಷದ ಕಾರ್ಯಕರ್ತರು ಜಮಾಯಿಸಿ ನಿವಾಸದ ಹೊರಗೆ ವಾಹನದ ಮೇಲೆ ಜಯಪ್ರಕಾಶ ನಾರಾಯಣ್ ಅವರ ಪ್ರತಿಮೆಗೆ ಅಖಿಲೇಶ್ ಹಾರ ಹಾಕಿ ಗೌರವ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next