Advertisement
ಈ ಹಿಂದೆ ಸಾಂಪ್ರದಾಯಿಕ ಬಂಡೆಗಳಿದ್ದಲ್ಲಿ ಮೀನುಗಳು ಮೊಟ್ಟಗಳನ್ನಿಟ್ಟು, ಮರಿಗಳನ್ನು ಮಾಡಿ ಸಂತತಿ ವೃದ್ಧಿಸುತ್ತಿತ್ತು. ಆದರೆ ಈಗ ಬಂಡೆಗಳು ಮಾಯವಾದಂತೆ ಮೀನು ಸಂತತಿಯೂ ಕ್ಷೀಣಿಸುತ್ತಾ ಬಂದಿದೆ. ಹೀಗಾಗಿ ಕೃತಕ ಬಂಡೆಗಳನ್ನು ಸಮುದ್ರದ ಆಳದಲ್ಲಿ ಸ್ಥಾಪಿಸಿ ಮೀನು ಸಂತತಿ ವೃದ್ಧಿಸಲು ಮೀನುಗಾರಿಕೆ ಇಲಾಖೆ ಈ ಯೋಜನೆ ಅನುಷ್ಠಾನಗೊಳಿಸಿದೆ.
ಸಿಮೆಂಟ್‌ನಿಂದ ತ್ರಿಕೋನಾಕೃತಿ, ಆಯತಾಕಾರ ಹಾಗೂ ಉರುಟು ಆಕಾರಗಳಲ್ಲಿ ಬಂಡೆಗಳನ್ನು ತಯಾರು ಮಾಡಿ ಸಮುದ್ರದಲ್ಲಿ ಸುಮಾರು ಐದು ನಾಟಿಕಲ್ ಮೈಲು ದೂರ (ಸಮುದ್ರದ 10-15 ಮೀಟರ್ ಆಳ) ಸ್ಥಾಪಿಸುವುದು ಸದ್ಯದ ಯೋಜನೆ. ಮೀನುಗಾರಿಕೆ ಬೋಟ್ ಹಾಗೂ ದೋಣಿಗಳಿಗೂ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಆಳದಲ್ಲಿ ಸ್ಥಾಪಿಸಲಾಗುತ್ತಿದೆ. ಕೃತಕವಾಗಿ ಸ್ಥಾಪಿಸಲಾಗುವ ಈ ಬಂಡೆಗಳನ್ನು ಮುಡೇìಶ್ವರದಲ್ಲಿಯೇ ತಯಾರಿಸ ಲಾಗುತ್ತಿದೆ. ಒಂದೊಂದು ಬಂಡೆಯೂ ಸುಮಾರು 4-5 ಟನ್ ಭಾರ ಇರುತ್ತದೆ ಎನ್ನಲಾಗಿದೆ.
Related Articles
ಭಟ್ಕಳ: ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಶನಿವಾರ ಭಟ್ಕಳ ಸಮೀಪದ ಬೆಳಕೆ ಸಮುದ್ರ ತೀರದಲ್ಲಿ ಈಜಾಡಿ ಗಮನ ಸೆಳೆದರು. ಸಮುದ್ರ ತಳದಲ್ಲಿ ಕೃತಕ ಬಂಡೆಗಳನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪ್ರವಾಸಿ ಬೋಟ್‌ನಲ್ಲಿ ತೆರಳಿದ್ದ ಅವರು, ಸಮುದ್ರಕ್ಕೆ ಧುಮುಕಿ ಶವಾಸನ ಮಾಡುವ ಮೂಲಕ ಗಮನಸೆಳೆದರು.
Advertisement