Advertisement

ಆಳಂದ ವಿವಾದಿತ ಶಿವಲಿಂಗ ಪೂಜೆ ಕೋರ್ಟ್ ಅನುಮತಿ; ಎಡಿಜಿಪಿ ನೇತೃತ್ವದಲ್ಲಿ ರೂಟ್ ಮಾರ್ಚ್

11:42 AM Feb 16, 2023 | Team Udayavani |

ಕಲಬುರಗಿ: ಶಿವರಾತ್ರಿ ದಿನ ವಿವಾದಿತ ರಾಘವ ಶಿವಲಿಂಗ ಪೂಜೆಗೆ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಆಳಂದದಲ್ಲಿ ಎಡಿಜಿಪಿ ಅಲೋಕ್ ಕುಮಾರ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ.

Advertisement

ಕಳೆದ ವರ್ಷ ಶಿವರಾತ್ರಿ ದಿನ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದಿತ್ತು. ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಡಿಸಿ ವಾಹನದ ಮೇಲೂ ಸಹ ಕಲ್ಲು ತೂರಾಟ ನಡೆದಿತ್ತು. ಈ ಹಿನ್ನೆಲೆ ವಕ್ಫ್ ಟ್ರಿಬುನಲ್ ಕೋರ್ಟ್ ಈ ಬಾರಿ ಎರಡೂ ಕೋಮಿನವರಿಗೆ ಪೂಜೆಗೆ ಅವಕಾಶ ನೀಡಿದೆ.

ಇದನ್ನೂ ಓದಿ:ಕಾರ್ಕಳದಲ್ಲೂ ಮಂಕಿಮ್ಯಾನ್‌ ಖ್ಯಾತಿಯ ಜ್ಯೋತಿರಾಜ್‌ ಬಹುಮಹಡಿ ಕಟ್ಟಡವೇರಿ ಸಾಹಸ

ಆಳಂದ ಪಟ್ಟಣದಾದ್ಯಂತ ಭಾರಿ ಬಂದೋಬಸ್ತ್ ಮಾಡಲಾಗಿದ್ದು, ಆಳಂದದ ಲಾಡ್ಲೆ ಮಶಾಕ್ ದರ್ಗಾ ಸುತ್ತ ಸರ್ಪಗಾವಲು ಹಾಕಲಾಗಿದೆ. ಎಡಿಜಿಪಿ ಅಲೋಕ ಕುಮಾರ ನೇತೃತ್ವದಲ್ಲಿ ಆಳಂದ ಪಟ್ಟಣದಲ್ಲಿ ಬೃಹತ್ ಪೊಲೀಸ್ ರೂಟ್ ಮಾರ್ಚ್ ಮಾಡಲಾಗಿದ್ದು, ಶಾಂತಿ ಸ್ಥಾಪನೆಗಾಗಿ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಪೊಲೀಸ್ ಶಕ್ತಿ ಪ್ರದರ್ಶನ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next