Advertisement

ವಿದ್ಯುತ್‌ ಉತ್ಪಾದನೆಗೆ ತೊಡಕಾದ ಹಸಿ ಕಲ್ಲಿದ್ದಿಲು

11:25 PM Aug 02, 2023 | Team Udayavani |

ರಾಯಚೂರು: ಗಣಿ ಪ್ರದೇಶಗಳಲ್ಲಿ ಸುರಿದ ಸತತ ಮಳೆಯ ಪರಿಣಾಮ ಶಾಖೋತ್ಪನ್ನ ಕೇಂದ್ರಗಳಿಗೆ ಹಸಿ ಕಲ್ಲಿದ್ದಿಲು ಸರಬರಾಜಾಗುತ್ತಿದ್ದು, ವಿದ್ಯುತ್‌ ಉತ್ಪಾದನೆಗೆ ಅಡಚಣೆಯಾಗುತ್ತಿದೆ.

Advertisement

ರಾಜ್ಯದಲ್ಲೂ ಮಳೆ ಹೆಚ್ಚಾಗಿರುವ ಕಾರಣ ಜಲಮೂಲಗಳಿಂದ ವಿದ್ಯುತ್‌ ಹೆಚ್ಚಾಗಿ ಮಾಡಲಾಗುತ್ತಿದೆ. ಬೇಡಿಕೆ ಇಲ್ಲದಿದ್ದರೂ ನಿರಂತರ ಉತ್ಪಾದನೆಯಲ್ಲಿ ತೊಡಗಿರುತ್ತಿದ್ದ ಶಾಖೋತ್ಪನ್ನ ಕೇಂದ್ರಗಳಿಗೆ ಈಗ ವಿರಾಮ ನೀಡಲಾಗಿದೆ. ಇದರಿಂದ ಆರ್‌ಟಿಪಿಎಸ್‌, ವೈಟಿಪಿಎಸ್‌ ಮತ್ತು ಬಿಟಿಪಿಎಸ್‌ ಕೇಂದ್ರಗಳಲ್ಲಿ ಉತ್ಪಾದನೆ ಪ್ರಮಾಣ ಕುಗ್ಗಿದೆ.

ರಾಯಚೂರು ಶಾಖೋತ್ಪನ್ನ ಕೇಂದ್ರದಲ್ಲಿ ಮೂರು ಘಟಕಗಳು ಮಾತ್ರ ಕಾರ್ಯಾಚರಿಸುತ್ತಿದ್ದು, 382 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಒಂದನೇ ಘಟಕ ಸಂಪೂರ್ಣ ಕೆಟ್ಟು ಹೋಗಿ ಸ್ಥಗಿತಗೊಂಡು ವರ್ಷವೇ ಕಳೆದಿದೆ. ವೈಟಿಪಿಎಸ್‌ ಒಂದನೇ ಘಟಕ ಮಾತ್ರ ಸಕ್ರಿಯವಾಗಿದ್ದು, 367 ಮೆಗಾವ್ಯಾಟ್‌ ಉತ್ಪಾದಿಸಲಾಗುತ್ತಿದೆ. ಬಿಟಿಪಿಎಸ್‌ನ ಮೂರು ಘಟಕಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 285 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ.

ರಾಜ್ಯದ ಜಲವಿದ್ಯುತ್‌ ಮೂಲಗಳು ವಿದ್ಯುತ್‌ ಉತ್ಪಾದನೆಯಲ್ಲಿ ತೊಡಗಿದ್ದು, ಆಲಮಟ್ಟಿ 210 ಮೆಗಾವ್ಯಾಟ್‌, ಶರಾವತಿ 196 ಮೆಗಾವ್ಯಾಟ್‌, ನಾಗ್ಝರಿ 184 ಮೆಗಾವ್ಯಾಟ್‌, ವಾರಾಹಿ 42 ಮೆಗಾವ್ಯಾಟ್‌, ಕೊಡ್ಸಲ್ಲಿ 49 ಮೆಗಾವ್ಯಾಟ್‌, ಜೋಗ್‌ 30 ಮೆಗಾವ್ಯಾಟ್‌, ಶಿವನಸಮುದ್ರ 26 ಮೆಗಾವ್ಯಾಟ್‌ ಸೇರಿ ವಿವಿಧ ಜಲವಿದ್ಯುತ್‌ ಘಟಕಗಳು ಸಕ್ರಿಯವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next