Advertisement
ಭಾರತದ ಅತ್ಯಂತ ದೊಡ್ಡ ಮೊಬೈಲ್ ಗೇಮಿಂಗ್ ಪ್ಲಾಟ್‌ಫಾರಂ ಮೊಬೈಲ್ ಪ್ರೀಮಿಯರ್ ಲೀಗ್(ಎಂಪಿಎಲ್) ಮುಂಬೈ ಮೂಲದ ಗೇಮ್ ಡೆವಲಪರ್ ಲೈಫ್‌ಲೈಕ್ ಸ್ಟುಡಿಯೋಸ್ ಜೊತೆ ಸಹಯೋಗ ಹೊಂದಿದ್ದು ಭಾರತದ ಪ್ರಥಮ ದೇಶಿ ಮಲ್ಟಿ-ಪ್ಲೇಯರ್ ಆನ್‌ಲೈನ್ ಶೂಟರ್ ಗೇಮ್ ರೋಗ್ ಹೀಸ್ಟ್, ಅನ್ನು ಎಂಪಿಎಲ್ ಆ್ಯಪ್‌ನಲ್ಲಿ ಇತರೆ ಪ್ಲಾಟ್‌ಫಾರಂಗಿಂತಲೂ ಮುಂಚೆ ವಿಶೇಷವಾಗಿ ಬಿಡುಗಡೆ ಮಾಡಿದೆ.
ರೋಗ್ ಹೀಸ್ಟ್, ಎಂಪಿಎಲ್ ಪ್ಲಾಟ್‌ಫಾರಂನಲ್ಲಿ ಮೊದಲ ಮಲ್ಟಿ-ಪ್ಲೇಯರ್ ಇ ಸ್ಪೋರ್ಟ್ಸ್ ನಲ್ಲಿ ಒಂದಾಗಿದ್ದು, ಬಳಕೆದಾರರು ಪರಸ್ಪರ ಮುಖಾಮುಖಿಯಾಗುವುದು ಕಾಣುತ್ತದೆ, ಪ್ರತಿ ಯುದ್ಧ ಹಾಗೂ ಟೂರ್ನಮೆಂಟ್‌ನಲ್ಲಿ ಬಹುಮಾನ ಗೆಲ್ಲುವ ಅವಕಾಶ ನೀಡುತ್ತದೆ. ಎಂಪಿಎಲ್ ಪ್ರಸ್ತುತ ತನ್ನ ಪ್ಲಾಟ್‌ಫಾರಂನಲ್ಲಿ 40ಕ್ಕೂ ಹೆಚ್ಚು ಗೇಮ್ ಗಳನ್ನು ಹೊಂದಿದೆ.
ರೋಗ್ ಹೀಸ್ಟ್ ಸ್ಪರ್ಧಾತ್ಮಕ ರಿಯಲ್-ಟೈಮ್ ಮಲ್ಟಿ-ಪ್ಲೇಯರ್ ಪರಿಸರದಲ್ಲಿದೆ. ಪ್ರತಿ ಗೇಮ್ ಕೂಡಾ ಕೇವಲ 7 ನಿಮಿಷಗಳಿದ್ದು ಅದರಲ್ಲಿ 10 ಆಟಗಾರರು ಪರಸ್ಪರ ಮುಖಾಮುಖಿಯಾಗುತ್ತಾರೆ. ಅವರ ವೈಯಕ್ತಿಕ ಸಾಧನೆ ಆಧರಿಸಿ ಹೆಚ್ಚಿನ ಗಳಿಕೆ ಪಡೆಯುತ್ತಾರೆ.
Related Articles
Advertisement
ಅತ್ಯಂತ ದೊಡ್ಡ ಸವಾಲೆಂದರೆ ಗೇಮ್ ಗಾತ್ರವನ್ನು ಎಂಪಿಎಲ್ ಬಳಕೆದಾರರಿಗೆ 1.5 ಜಿಬಿಯಿಂದ 450ಎಂಬಿಗೆ ಕಡಿಮೆ ಮಾಡುವುದಲ್ಲದೆ ಅವರು ರೋಗ್ ಹೀಸ್ಟ್, ಅನುಭವವನ್ನು ಪಡೆಯಲು ಶಕ್ತವಾಗುವಂತೆ ಮಾಡುವುದಾಗಿತ್ತು. ಇದು ಲೈವ್ ಗೇಮ್ ಆಗಿರುವುದರಿಂದ ನಾವು ಎಂಪಿಎಲ್ ಬಳಕೆದಾರರು ಸಕ್ರಿಯವಾಗಿರುವಂತೆ ಸತತ ಅಪ್‌ಡೇಟ್‌ಗಳನ್ನು ಪೂರೈಸುತ್ತಿರುತ್ತೇವೆ ಎಂದು ಲೈಫ್‌ಲೈಕ್ ಸ್ಟುಡಿಯೋಸ್‌ನ ಸಿಇಒ ಆಶಿಶ್ ಬ್ಯೂರಿಯಾ ಹೇಳಿದ್ದಾರೆ.
‘‘ರೋಗ್ ಹೀಸ್ಟ್ ಭಾರತದಲ್ಲಿ ನಿರ್ಮಾಣವಾಗಿದ್ದು ಗೇಮ್ ಚೇಂಜರ್ ಆಗಿದೆ. ನಮ್ಮ ತಂಡವು ರೋಗ್ ಹೀಸ್ಟ್, ಇ-ಸ್ಪೋರ್ಟ್ ಆವೃತ್ತಿಯನ್ನು ಎಂಪಿಎಲ್‌ನಲ್ಲಿ ಬಿಡುಗಡೆ ಮಾಡಲು ಸಂತೋಷವಾಗಿದೆ. ಅತ್ಯಂತ ಕುತೂಹಲಕರ ಶೂಟಿಂಗ್ ಗೇಮ್ ಅನುಭವವನ್ನು ಎಂಪಿಎಲ್ ಆಟಗಾರರಿಗೆ ನೀಡುತ್ತದೆ’’ ಎಂದು ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಹೇಳಿದ್ದಾರೆ.
ಬನಶಂಕರ ಆರಾಧ್ಯ