Advertisement

ರೋಟರಿ ಸೇವೆ ಶ್ಲಾಘನೀಯ: ಶಾಸಕ

12:33 PM Jul 15, 2019 | Suhan S |

ರಾಮನಗರ: ರಾಜಕೀಯೇತರ ಸಂಸ್ಥೆ ಯಾಗಿ, ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಲು ರೋಟರಿ ಸಂಸ್ಥೆ ಮೂಲಕ ಸಾಕಷ್ಟು ಅವಕಾಶಗಳಿವೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ತಾಲೂಕಿನ ಬಿಡದಿಯ ಮಂಜುನಾಥ ಕನ್ವೆನ್ಷನ್‌ ಹಾಲ್ನಲ್ಲಿ ನಡೆದ ರೋಟರಿ ಬಿಡದಿ ಸೆಂಟ್ರಲ್ನ ನೂತನ ಪದಾಧಿಕಾ ರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಸೇವೆ ನಡುವೆ ಸದಸ್ಯರ ನಡುವೆ ಪರಸ್ಪರ ವಿಶ್ವಾಸ ವೃದ್ಧಿ, ಸಮಾಜದಲ್ಲಿ ವ್ಯಕ್ತಿಗತ ಗೌರ ವದ ಜೊತೆಗೆ ವ್ಯಾಪಾರ ವೃದ್ಧಿಗೂ ರೋಟರಿ ಸಂಸ್ಥೆ ಉತ್ತಮ ವೇದಿಕೆ ಎಂದರು.

ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡು ಭಾರತ ಪಲ್ಸ್ ಪೋಲಿಯೋ ಮುಕ್ತ ದೇಶವನ್ನಾಗಿಸಲು ರೋಟರಿ ಸಂಸ್ಥೆ ತನ್ನ ಪಾಲಿನ ಕೊಡುಗೆ ನೀಡಿದೆ. ರಾಜಕಾರಣಿಗಳಿಗಿಂತ ರೋಟರಿ ಸಂಸ್ಥೆಯ ಪದಾಧಿಕಾರಿಗಳಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಇದೆ ಎಂದು ಅಭಿಪ್ರಾಯಪಟ್ಟರು.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ಕಾರ್ಖಾನೆಗಳಿವೆ. ಈ ಕಾರ್ಖಾನೆಗಳ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಗೆ(ಸಿಎಸ್‌ಆರ್‌ ಆಕ್ಟಿವಿಟಿ) ಮೀಸಲಿರುವ ನಿಧಿಯಡಿ ಕೈಗೊಳ್ಳಬ ಹುದಾದ ಕಾರ್ಯಕ್ರಮಗಳಲ್ಲಿ ರೋಟರಿ ಸಂಸ್ಥೆಯನ್ನು ತೊಡಗಿಸಿಕೊಂಡು ಸಾಮಾ ಜಿಕ ಸೇವೆ ಇನ್ನಷ್ಟು ವಿಸ್ತರಿಸಬ ಹುದು.ಬಡವರಿಗಾಗಿ ಪರಿಣಾಮಕಾರಿ ಯೋಜನೆ ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆ ಜಿಲ್ಲಾ ಅನುಷ್ಟಾಪನಾ ಅಧಿಕಾರಿ ಆರ್‌.ಕುಮಾರಸ್ವಾಮಿ, ಕೋಟಿ- ನಾಟಿ ಕಾರ್ಯಕ್ರಮ ಹಮ್ಮಿಕೊ ಳ್ಳಲು ರೋಟರಿ ಸಂಸ್ಥೆ ಉದ್ದೇಶಿಸಿದ್ದು, ನೂತನ ಪದಾಧಿಕಾರಿಗಳು ಅನುಷ್ಠಾನಗೊ ಳಿಸಿ ಎಂದು ಹೇಳಿದರು.

Advertisement

ಪದವಿ ಸ್ವೀಕಾರ:ರೋಟರಿ ಬಿಡದಿ ಸೆಂಟ್ರಲ್ 2019- 20ನೇ ಸಾಲಿನ ಅಧ್ಯಕ್ಷರಾಗಿ ಎಂ.ಚಂದ್ರ ಶೇಖರ್‌ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ವಸಂತ ಕುಮಾರ್‌, ಉಪಾಧ್ಯಕ್ಷ ನಾಗರಾಜು, ಖಜಾಂಚಿ ಬಸವರಾಜ ಅರಸು, ಜಂಟಿ ಕಾರ್ಯದರ್ಶಿ ಕೃಷ್ಣ ಹಾಗೂ 7 ಮಂದಿ ನಿರ್ದೇಶಕರು ಪದವಿ ಸ್ವೀಕರಿಸಿದರು.

ಮೀಸೆ ರಾಮಕೃಷ್ಣಯ್ಯ ಮತ್ತು ಅಜ್ಗರ್‌ ಪಾಷಾ ಸ್ಟಾರ್‌ ರೋಟೆರೀಯನ್‌ ಗೌರವಕ್ಕೆ ಪಾತ್ರರಾದರು. ಬೆಂಗಳೂರಿನ ವಿಕ್ಟೋರಿ ಯಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ನಾಗ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಸಂಸ್ಥೆ ಸಹಾಯಕ ಜಿಲ್ಲಾ ಪಾಲಕ ಸಿದ್ಧಪ್ಪಾಜಿ, ನಿಕಟಪೂರ್ವ ಅಧ್ಯಕ್ಷ ಚಿಕ್ಕಣ್ಣಯ್ಯ, ಕಾರ್ಯದರ್ಶಿ ಶಿವರಾಜು, ಪದಾಧಿಕಾರಿಗಳಾದ ಸಿ.ಉಮೇಶ್‌, ಮಲ್ಲೇಶ್‌, ಬಿ.ಎಂ.ರಮೇಶ್‌ಕುಮಾರ್‌, ಶ್ರೀನಿವಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next