Advertisement

ಬೈಯಪ್ಪನಹಳ್ಳಿ ಸಂಪರ್ಕಕ್ಕೆ ರೋಟರಿ ಮೇಲ್ಸೇತುವೆ

10:57 AM Feb 27, 2023 | Team Udayavani |

ಬೆಂಗಳೂರು: ಬೈಯಪ್ಪನಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ಬರುವ ವಾಹನಗಳಿಗೆ ಎದುರಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಇದೇ ಮೊದಲ ಬಾರಿ ನಗರದಲ್ಲಿ ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ.

Advertisement

ನಗರದಲ್ಲಿ 47 ಮೇಲ್ಸೇತುವೆಗಳಿದ್ದು, ಅವುಗಳೆಲ್ಲವೂ ಒಂದೇ ರೀತಿಯಿವೆ. ಆದರೆ, ಇದೇ ಮೊದಲ ಬಾರಿ ರೋಟರಿ ಮೇಲ್ಸೇತುವೆ (ಮಧ್ಯದಲ್ಲಿ ವೃತ್ತಾಕಾರದ ಮೇಲ್ಸೇತುವೆ) ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದೆ. ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್‌ ಸಂಸ್ಥೆಯ ಪ್ರಸ್ತಾವನೆಯಂತೆ ಬೈಯಪ್ಪನಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ವಾಹನಗಳು ಯಾವುದೇ ಸಂಚಾರ ದಟ್ಟಣೆ ಎದುರಿಸದಂತೆ ಸರಾಗವಾಗಿ ಓಡಾಡಲು ಐಒಸಿ ಜಂಕ್ಷನ್‌ ಬಳಿ ರೋಟರಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಅದರ ಜತೆಗೆ ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ನಲ್ಲಿ 2 ಪಥದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.

ನಾಲ್ಕು ದಿನಗಳಿಂದ ಸಂಪರ್ಕ: ಸದ್ಯ ಬಿಬಿಎಂಪಿ ರೂಪಿಸುತ್ತಿರುವ ಯೋಜನೆ ನಾಲ್ಕು ದಿಕ್ಕು ಗಳಿಂದಲೂ ವಾಹನಗಳು ಸಂಚರಿಸುವಂತಹ ಮೇಲ್ಸೇತುವೆಯಾಗಿರಲಿದೆ. ಅದರಂತೆ ಪಶ್ಚಿಮದಿಂದ ಮಾರುತಿ ಸೇವಾನಗರ, ಪೂರ್ವದಲ್ಲಿ ಬಾಣಸವಾಡಿ, ಉತ್ತರದಲ್ಲಿ ಕಮ್ಮನಹಳ್ಳಿ ಮತ್ತು ದಕ್ಷಿಣದಲ್ಲಿ ಬೈಯಪ್ಪನಹಳ್ಳಿಗೆ ಸಂಪರ್ಕಿಸುವಂತೆ ಹಾಗೂ ಆ ಭಾಗದಿಂದ ಬರುವ ವಾಹನಗಳು ಮುಂದಕ್ಕೆ ಸಾಗುವಂತೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ.

ಹಾಲಿ ಮೇಲ್ಸೇತುವೆ ಕೆಡವಲು ನಿರ್ಧಾರ: ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವುದಕ್ಕೆ ಸದ್ಯ ಐಒಸಿ ಜಂಕ್ಷನ್‌ನಲ್ಲಿ 2 ಪಥದ ಮೇಲ್ಸೇತುವೆಯಿದೆ. ಇದರಿಂದ ವಾಹನ ದಟ್ಟಣೆ ನಿವಾರಣೆ ಹಾಗೂ ರೈಲ್ವೆ ನಿಲ್ದಾಣಕ್ಕೆ ಸಮರ್ಪಕವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಾಲಿ ಇರುವ ಮೇಲ್ಸೇತುವೆಯನ್ನು ಕೆಡವಿ, ಹೊಸದಾಗಿ ರೋಟರಿ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಪ್ರಸ್ತಾವನೆ ಸಿದ್ಧಪಡಿಸಿರುವ ಬಿಬಿಎಂಪಿ, ರಾಜ್ಯ ಸರ್ಕಾರಕ್ಕೆ ಅನುದಾನ ಹಾಗೂ ಆಡಳಿತಾತ್ಮಕ ಅನುಮೋದನೆಗೆ ಕೋರಲಾಗಿದೆ.

2021ಯೋಜನೆ: ರೋಟರಿ ಮೇಲ್ಸೇತುವೆ ಮತ್ತು 2 ಪಥದ ಆರ್‌ಒಬಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ 2021ರ ಸೆಪ್ಟೆಂಬರ್‌ನಲ್ಲಿಯೇ ಯೋಜನೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ವೇಳೆ ಯೋಜನಾ ವೆಚ್ಚವನ್ನು 250 ಕೋಟಿ ರೂ. ನಿಗದಿ ಮಾಡಲಾಗಿತ್ತು. ಆದರೆ, ರೈಲ್ವೆ ಇಲಾಖೆಯಿಂದ ನಿರಾಕ್ಷೇಪಣೆ ಪತ್ರ ನೀಡುವಲ್ಲಿ ವಿಳಂಬವಾದ ಕಾರಣ ಯೋಜನೆ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಇದೀಗ ರೈಲ್ವೆ ಇಲಾಖೆ ನಿರಾಕ್ಷೇಪಣಾ ಪತ್ರ ನೀಡಿದೆ ಮತ್ತು ಯೋಜನೆಗೆ ಸಮ್ಮತಿಯನ್ನು ಸೂಚಿಸಿದೆ. ಹೀಗಾಗಿ ಇದೀಗ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗುತ್ತಿದೆ.

Advertisement

345 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ: ಮೇಲ್ಸೇತುವೆ ಮತ್ತು ಆರ್‌ಒಬಿ ನಿರ್ಮಾಣಕ್ಕೆ 345 ಕೋಟಿ ರೂ. ಯೋಜನಾ ವೆಚ್ಚವನ್ನು ನಿಗದಿ ಮಾಡಲಾಗಿದೆ. ಅದರಲ್ಲಿ ಮೇಲ್ಸೇತುವೆಗಳ ನಿರ್ಮಾಣಕ್ಕೆ 277 ಕೋಟಿ ರೂ. ವ್ಯಯಿಸಲಾಗುತ್ತದೆ. ಉಳಿದ 68 ಕೋಟಿ ರೂ. ಗಳನ್ನು ಕಮ್ಮನಹಳ್ಳಿ ಮುಖ್ಯರಸ್ತೆ, ಮಾರುತಿ ಸೇವಾನಗರ ಮತ್ತು ಬೈಯಪ್ಪನಹಳ್ಳಿ ಮುಖ್ಯರಸ್ತೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಖರ್ಚು ಮಾಡಲಾಗುತ್ತದೆ.

ಪಾದಚಾರಿಗಳಿಗೆ ಕೆಳಸೇತುವೆ : ಮೇಲ್ಸೇತುವೆಗಳ ಜತೆಗೆ ಪಾದಚಾರಿಗಳ ಅನುಕೂಲಕ್ಕಾಗಿ ಕೆಳಸೇತುವೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗುತ್ತಿದೆ. ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್‌ನಿಂದ ಕಮ್ಮನಹಳ್ಳಿ ಕಡೆಗೆ ಪಾದಚಾರಿ ಕೆಳಸೇತುವೆ ನಿರ್ಮಿಸುವುದಕ್ಕೂ ಉದ್ದೇಶಿಸಲಾಗಿದೆ. ಈ ಕೆಳಸೇತುವೆ ರೈಲ್ವೆ ಹಳಿಗಳ ಕೆಳಭಾಗದಲ್ಲಿ ಸಾಗಲಿದ್ದು, ಆ ಬಗ್ಗೆಯೂ ಸಂಬಂಧಪಟ್ಟ ಇಲಾಖೆಗಳ ಜತೆಗೆ ಚರ್ಚಿಸಲಾಗುತ್ತಿದೆ.

ಬೈಯಪ್ಪನಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ರೋಟರಿಮೇಲ್ಸೇತುವೆ ನಿರ್ಮಿಸಲು ಅನುದಾನ ಮತ್ತು ಆಡಳಿತಾತ್ಮಕ ಅನುಮೋದನೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತ ನಂತರ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. – ರವೀಂದ್ರ ಬಿಬಿಎಂಪಿ ವಿಶೇಷ ಆಯುಕ್ತ

-ಗಿರೀಶ್‌ ಗರಗ 

Advertisement

Udayavani is now on Telegram. Click here to join our channel and stay updated with the latest news.

Next