Advertisement

ರಾಸ್‌ ಟೇಲರ್‌ಗೆ ಮೂರನೇ ರಿಚರ್ಡ್‌ ಹ್ಯಾಡ್ಲಿ ಮೆಡಲ್‌

12:37 AM May 02, 2020 | Sriram |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡಿನ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ 3ನೇ ಸಲ “ಸರ್‌ ರಿಚರ್ಡ್‌ ಹ್ಯಾಡ್ಲಿ ಮೆಡಲ್‌’ ಪಡೆದಿದ್ದಾರೆ. ಶುಕ್ರವಾರ ಅವರನ್ನು ನ್ಯೂಜಿಲ್ಯಾಂಡಿನ ವರ್ಷದ ಕ್ರಿಕೆಟಿಗ ಗೌರವಕ್ಕೆ ಆರಿಸಲಾಯಿತು. ಟಿಮ್‌ ಸೌಥಿ ವರ್ಷದ ಟೆಸ್ಟ್‌ ಆಟಗಾರ, ಕಿಮ್‌ ಕಾಟನ್‌ ವರ್ಷದ ಅಂಪಾಯರ್‌ ಗೌರವಕ್ಕೆ ಪಾತ್ರರಾದರು.

Advertisement

ಈ ಸಂದರ್ಭದಲ್ಲಿ ಮಾತಾಡಿದ ರಿಚರ್ಡ್‌ ಹ್ಯಾಡ್ಲಿ, “ನಾನು 2006ರಿಂದಲೂ ಟೇಲರ್‌ ಆಟವನ್ನು ಗಮನಿಸುತ್ತ ಬಂದಿದ್ದೇನೆ. ಆಗ ನಾನು ಆಯ್ಕೆ ಮಂಡಳಿಯಲ್ಲಿದ್ದೆ. ಕಳೆದ 14 ವರ್ಷಗಳ ನಿಮ್ಮ ಬ್ಯಾಟಿಂಗ್‌ ಬೆಳವಣಿಗೆ ನನಗೆ ಬಹಳ ಸಂತಸ ತಂದಿದೆ. ಪ್ರಶಸ್ತಿಗಾಗಿ ಅಭಿನಂದನೆಗಳು’ ಎಂದರು.

ಕಳೆದ ವರ್ಷ ಫ್ಲೆಮಿಂಗ್‌ ಅವರನ್ನು ಹಿಂದಿಕ್ಕಿ ನ್ಯೂಜಿಲ್ಯಾಂಡಿನ ಸರ್ವಾಧಿಕ ಟೆಸ್ಟ್‌ ರನ್‌ ದಾಖಲೆ ಬರೆದದ್ದು ಟೇಲರ್‌ ಅವರ ಹೆಗ್ಗಳಿಕೆಯಾಗಿದೆ. ಟೇಲರ್‌ ಏಕದಿನದಲ್ಲೂ ಕಿವೀಸ್‌ ಪರ ಅತ್ಯಧಿಕ ರನ್‌ ಬಾರಿಸಿದ್ದಾರೆ. ಹಾಗೆಯೇ ನ್ಯೂಜಿಲ್ಯಾಂಡ್‌ ಪರ 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಮೊದಲ ಆಟಗಾರನೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next