Advertisement

ಇಂಡೋ- ಕಿವೀಸ್ ಕದನ: ವಿನೂತನ ವಿಶ್ವದಾಖಲೆ ಬರೆದ ರಾಸ್ ಟೇಲರ್

10:03 AM Feb 22, 2020 | keerthan |

ವೆಲ್ಲಿಂಗ್ಟನ್: ಇಲ್ಲಿನ ಬೇಸಿನ್ ರಿಸರ್ವ್ ಅಂಗಳದಲ್ಲಿ ಆರಂಭವಾಗಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ವಿಶ್ವದಾಖಲೆಯೊಂದಕ್ಕೆ ಪಾತ್ರವಾಗಿದೆ. ನ್ಯೂಜಿಲ್ಯಾಂಡ್ ಅನುಭವಿ ಆಟಗಾರ ರಾಸ್ ಟೇಲರ್ ಅಪರೂಪದ ದಾಖಲೆಯೊಂದಕ್ಕೆ ಪಾತ್ರರಾಗದ್ದಾರೆ.

Advertisement

ವಿಶ್ವಕ್ರಿಕೆಟ್ ನಲ್ಲಿ ಮೂರು ಮಾದರಿ ಕ್ರಿಕೆಟ್ ನಲ್ಲಿ (ಟೆಸ್ಟ್, ಏಕದಿನ, ಟಿ20) ನೂರು ಪಂದ್ಯವಾಡಿದ ವಿಶ್ವದ ಮೊದಲ ಆಟಗಾರ ಎಂಬ ಗೌರವಕ್ಕೆ ರಾಸ್ ಟೇಲರ್ ಪಾತ್ರರಾಗಿದ್ದಾರೆ. ಇಂದಿನ ಪಂದ್ಯ ರಾಸ್ ಟೇಲರ್ ಜೀವನದ ನೂರನೇ ಟೆಸ್ಟ್ ಪಂದ್ಯ.

35 ವರ್ಷದ ಬಲಗೈ ಬ್ಯಾಟ್ಸಮನ್ ರಾಸ್ ಟೇಲರ್ ಕಳೆದ ತಿಂಗಳು ಭಾರತದ ವಿರುದ್ಧವೇ ನೂರನೇ ಟಿ20 ಪಂದ್ಯವಾಡಿದ್ದರು. ಏಕದಿನ ಕ್ರಿಕೆಟ್ ನಲ್ಲಿ ಕಿವೀಸ್ ಅನುಭವಿ 231 ಪಂದ್ಯಗಳನ್ನಾಡಿದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿಯೇ ಭಾರತದ ಮೇಲೆ ಕಿವೀಸ್ ಬೌಲರ್ ಗಳು ಸವಾರಿ ಮಾಡಿದರು. ಚಹಾ ವಿರಾಮದ ವೇಳೆ ಭಾರತ ಐದು ವಿಕೆಟ್ ನಷ್ಟದಲ್ಲಿ 122 ರನ್ ಗಳಿಸಿದೆ. ರಹಾನೆ 38 ರನ್ ಮತ್ತು ರಿಷಭ್ ಪಂತ್ 10 ರನ್ ಗಳಿಸಿ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next