Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಹೇಳಿದ ರಾಸ್ ಟೇಲರ್

07:40 PM Apr 04, 2022 | Team Udayavani |

ಹ್ಯಾಮಿಲ್ಟನ್ : ನ್ಯೂಜಿಲ್ಯಾಂಡ್ ಕ್ರಿಕೆಟ್ ದಿಗ್ಗಜ ರಾಸ್ ಟೇಲರ್ ಇಲ್ಲಿನ ಸೆಡನ್ ಪಾರ್ಕ್‌ನಲ್ಲಿ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ವಿದಾಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು.

Advertisement

ಭಾವನಾತ್ಮಕ ವಿದಾಯ ಹೇಳಿದ ಅವರು ” ನನ್ನ ತಾಯಿ,ತಂದೆ, ಹೆಂಡತಿ, ಕುಟುಂಬದ ಎಲ್ಲ ಸದಸ್ಯರಿಗೆ ಧನ್ಯವಾದ ಹೇಳಲು ದೊಡ್ಡ ಸ್ಥಳವಿಲ್ಲ. ಅವರು ಮಾಡಿದ ಎಲ್ಲಾ ತ್ಯಾಗಗಳಿಗೆ, ತರಬೇತುದಾರಿಗೆ ಧನ್ಯವಾದಗಳು.ಸುದೀರ್ಘ 16 ವರ್ಷಗಳ ಪ್ರೀತಿಗೆ ಮತ್ತು ಎಲ್ಲದಕ್ಕೂ  ಧನ್ಯವಾದಗಳು.  ನನ್ನ ಕೊನೆಯ ಪಂದ್ಯವನ್ನು ಆಡಲು ಉತ್ತಮ ಸ್ಥಳವನ್ನು ಕೇಳಲು ಸಾಧ್ಯವಾಗಲಿಲ್ಲ ಎಂದು ವಿದಾಯ ಹೇಳಿದ್ದಾರೆ.

ಅದ್ಬುತ ಆಟಗಾರರಾಗಿದ್ಧ ಟೇಲರ್ 236 ಏಕದಿನ ಪಂದ್ಯಗಳಲ್ಲಿ 8607 ರನ್‌ಗಳು, 112 ಟೆಸ್ಟ್‌ಗಳಲ್ಲಿ 7683 ರನ್‌ಗಳು ಮತ್ತು 102 ಟಿ 20 ಗಳಲ್ಲಿ 1909 ರನ್‌ಗಳೊಂದಿಗೆ ಯಶಸ್ವಿ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಹೊಂದಿದ್ದರು. ತಮ್ಮ ಸುದೀರ್ಘ ಪ್ರಯಾಣದಲ್ಲಿ ಬೆಂಬಲ ನೀಡಿದವರಿಗೆ ಧನ್ಯವಾದ ಹೇಳಿದ್ದಾರೆ.

ವಿದಾಯ ಪಂದ್ಯದಲ್ಲಿ ಟೇಲರ್ ಕೇವಲ 14 ರನ್ ಗಳಿಸಿ ಔಟಾದರು. ಹಾಗಾಗಿ ಇದು ಅತ್ಯಂತ ಸಂತೋಷದಾಯಕ ವಿದಾಯವಲ್ಲವಾಯಿತಾದರೂ ನ್ಯೂಜಿ ಲ್ಯಾಂಡ್ ನೆದರ್ಲ್ಯಾಂಡ್ಸ್ ವಿರುದ್ಧ 115 ರನ್‌ಗಳ ಭರ್ಜರಿ ಜಯವನ್ನು ದಾಖಲಿಸಿ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next