Advertisement

IFFI: ಗೋವಾದಲ್ಲಿ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನ.20ರಿಂದ ಆರಂಭ

05:25 PM Oct 05, 2024 | Team Udayavani |

ಪಣಜಿ: ಪ್ರಸಕ್ತ ವರ್ಷವೂ ಗೋವಾದಲ್ಲಿ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯಾಗುತ್ತಿದೆ. ಈ ಚಲನಚಿತ್ರ ಮಹೋತ್ಸವ ನವೆಂಬರ್‌ 20 ರಿಂದ 28 ರವರೆಗೆ ನಡೆಯಲಿದೆ. ಜಗತ್ತಿನೆಲ್ಲೆಡೆಯಿಂದ ಕಲಾ ಪ್ರೇಮಿಗಳು ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಗಳ ಆನ್ ಲೈನ್ ನೋಂದಣಿಯೂ ಆರಂಭಗೊಂಡಿದೆ.

Advertisement

ಅಂತಾರಾಷ್ಟ್ರೀಯ ಚಲನಚಿತ್ರ ಮಹೋತ್ಸವಕ್ಕೆ ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಂಡ ನಂತರ ಚಲನಚಿತ್ರ ಮಹೋತ್ಸವದಲ್ಲಿ ಸ್ಕ್ರೀನಿಂಗ್ ವೀಕ್ಷಿಸುವ ಅವಕಾಶ ಲಭಿಸಲಿದೆ. ಜಗತ್ತಿನಲ್ಲೇ ಅತಿದೊಡ್ಡ ಚಲನಚಿತ್ರ ಮಹೋತ್ಸವ ಇದಾಗಿದ್ದು, ಈ ಮಹೋತ್ಸವ ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯಲಿದೆ.

ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿವಿಧ ದೇಶಗಳ ಆಯ್ದ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ನ. 20ರಂದು ಸಂಜೆ ಅಂತಾರಾಷ್ಟ್ರೀಯ ಚಲನಚಿತ್ರ ಮಹೋತ್ಸವದ ಉದ್ಘಾಟನಾ ಸಮಾರಂಭ ಪಣಜಿ ಸಮೀಪದ ತಾಲಿಗಾಂವ ಶ್ಯಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next