Advertisement

Wushu: ಫೈನಲ್‌ನಲ್ಲಿ ವು ಕ್ಸಿಯೊವೈ ವಿರುದ್ಧ ಸೋಲು; ರೋಶಿಬಿನಾ ದೇವಿಗೆ ಬೆಳ್ಳಿ

11:07 PM Sep 28, 2023 | Team Udayavani |

ಹ್ಯಾಂಗ್‌ಝೂ: ಭಾರತದ ನೋರಮ್‌ ರೋಶಿಬಿನಾ ಅವರು ವನಿತೆಯರ 60 ಕೆ.ಜಿ. ವುಶು ಸಾಂಡ ಸ್ಪರ್ಧೆಯ ಫೈನಲ್‌ನಲ್ಲಿ ಸ್ಥಳೀಯ ಹೆವಿವೇಟ್‌ ವು ಕ್ಸಿಯೊವೈ ಅವರ ವಿರುದ್ಧ 0-2 ಅಂತರದಿಂದ ಸೋಲನ್ನು ಕಂಡು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡರು.

Advertisement

ಹಾಲಿ ಚಾಂಪಿಯನ್‌ ಆಗಿರುವ ಕ್ಸಿಯೊವೈ ಸ್ಪರ್ಧೆಯ ವೇಳೆ ಬಲಿಷ್ಠ ಎದುರಾಳಿಯಾಗಿ ಕಂಡು ಬಂದರು. ಭರ್ಜರಿ ಆರಂಭ ಪಡೆದ ಅವರು ಎರಡು ಸುತ್ತುಗಳ ಬಳಿಕ ತೀರ್ಪುಗಾರರು ಕ್ಸಿಯೊವೈ ವಿಜಯಿ ಎಂದು ಘೋಷಿಸಿದರು.

ಮೊದಲ ಸುತ್ತಿನಲ್ಲಿ ಕ್ಸಿಯೊವೈ ಆಕ್ರಮಣಕಾರಿಯಾಗಿ ಆಡಿ ರೋಶಿಬಿನಾ ಅವರನ್ನು ನೆಲಕ್ಕುರುಳಿ ಸಲು ಯಶಸ್ವಿಯಾದರು. ದ್ವಿತೀಯ ಸುತ್ತಿನಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದರೂ ರೋಶಿಬಿನಾ ಅವ ರಿಂದ ಮೇಲುಗೈ ಸಾಧಿಸಲು ಆಗಲಿಲ್ಲ. ರೋಶಿಬಿನಾ 2018ರ ಗೇಮ್ಸ್‌ ನಲ್ಲಿ ಕಂಚಿನ ಪದಕ ಪಡೆದಿದ್ದರು.

ಮಣಿಪುರದ ಸಂತ್ರಸ್ತರಿಗೆ ಅರ್ಪಣೆ
ಚುರಾಚಂದಪುರ್‌ನ ಬಿಸು°ಪುರ್‌ ಜಿಲ್ಲೆಯ ಕ್ವಾಶಿಪಾಯ್‌ ಗ್ರಾಮದ ಮೈತೇಯಿ ಸಮುದಾಯದ ರೋಶಿಬಿನಾ ಅವರು ಈ ಪದಕವನ್ನು ನಮ್ಮನ್ನು ರಕ್ಷಿಸುತ್ತಿರುವ ಮತ್ತು ಮಣಿಪುರದಲ್ಲಿ ಸಂತ್ರಸ್ತರಾಗಿರುವ ಜನರಿಗೆ ಅರ್ಪಿಸಲು ಬಯಸಿದ್ದಾರೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ಮುಂದುವರಿದಿದೆ. ನನ್ನ ಗ್ರಾಮಕ್ಕೆ ಹೋಗಲು ಸಾಧ್ಯ ವಾಗುತ್ತಿಲ್ಲ ಎಂದವರು ದುಃಖದಿಂದ ಹೇಳಿದರು.
ಮುಂದೆ ಏನಾಗಬಹುದು ಎಂಬುದು ಗೊತ್ತಿಲ್ಲ. ಹಿಂಸಾಚಾರ ಯಾವಾಗ ಕೊನೆಗೊಳ್ಳುತ್ತದೆ ಮತ್ತು ಜೀವನ ಸಹಜ ಸ್ಥಿತಿಗೆ ಯಾವಾಗ ಮರಳುತ್ತದೆ ಎಂಬುದು ತಿಳಿದಿಲ್ಲ ಎಂದ ಅವರು ಪದಕ ಗೆಲ್ಲುವ ಮೊದಲು ಹೆತ್ತವರೊಂದಿಗೆ ಮಾತ ನಾಡಿದ್ದೆ. ಅವರು ಫೈನಲ್‌ ಸ್ಪರ್ಧೆಯ ಬಗ್ಗೆ ಗಮನ ನೀಡು ತವರಿನ ಪರಿ ಸ್ಥಿತಿಯ ಬಗ್ಗೆ ಚಿಂತಿಸಬೇಡ ಎಂದು ಹೇಳಿದ್ದರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next