Advertisement
ಹೌದು.. ಪ್ರತಿವರ್ಷ ವ್ಯಾಲೆಂಟೈನ್ಸ ಡೇಗೆ ಕಾದು ನೋಡುವ ಪ್ರೇಮಿಗಳು ತಮ್ಮ ಪ್ರೇಯಸಿಗಾಗಿ ಬಗೆಬಗೆಯ ಬಣ್ಣದ ಗುಲಾಬಿ ಹೂಗುಚ್ಚ ನೀಡಲು ಹಾತೊರೆ ಯುತ್ತಾರೆ. ಫೆ.14 ಪ್ರೇಮಿಗಳ ದಿನ ಬಂತೆಂದರೆ ಗುಲಾಬಿ ಹೂಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಪ್ರೇಮಿಗಳು ತಮ್ಮ ಮನಗೆದ್ದ ಪ್ರೇಯಸಿಗೆ ಗುಲಾಬಿ ಹೂವು ನೀಡುವ ಮೂಲಕ ನಿವೇದನೆ ಮಾಡಿಕೊಳ್ಳು ತ್ತಾರೆ. ಇದರಿಂದ ಈದಿನ ಮಾರುಕಟ್ಟೆಯಲ್ಲಿ ಸಾಮಾನ್ಯ ದರಕ್ಕಿಂತ ಹೆಚ್ಚಿನ ದರ ಮಾರಾಟವಾಗಿ ಭರ್ಜರಿ ಲಾಭ ಗಳಿಸುತ್ತಾರೆ.
Related Articles
Advertisement
ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 800 ಎಕರೆ ಗುಲಾಬಿ ತೋಟ : ತಾಲೂಕಿನ ಅಗಲಕೋಟೆ ಗ್ರಾಮದಲ್ಲಿ ಸುಮಾರು 50 ಎಕರೆ ಅಷ್ಟು ಗುಲಾಬಿ ಹೂ ಬೆಳೆಯುತ್ತಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಈ ತೋಟಗಳಲ್ಲಿ ಹೂವು ಬೆಳೆಸಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಬೆಳೆಯುತ್ತಿರುವ ಗುಲಾಬಿ ಮಂಗಳೂರು, ಬೆಂಗಳೂರು, ಕಾರ್ಕಾಳ, ಬಟ್ಕಾಳ, ಹೈದರಾಬಾದ್ ಇನ್ನಿತರೆ ಕಡೆಗಳಿಗೆ ಹೂವನ್ನು ಸರಬರಾಜು ಮಾಡಲಾಗುತ್ತದೆ. ಹೈದರಾಬಾದ್ ಮಾರುಕಟ್ಟೆಯಲ್ಲಿ 200ರೂ.ಗೆ ಗುಲಾಬಿ ಹೂ ಮಾರಾಟವಾಗುತ್ತಿದೆ. ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಪಾಲಿ ಹೌಸ್ ಮತ್ತು ಬಯಲು ಪ್ರದೇಶದಲ್ಲಿ ಹೂವು ಬೆಳೆಯುವುದು ಸೇರಿದಂತೆ ಒಟ್ಟು 800 ಎಕರೆ ಗುಲಾಬಿ ಹೂವು ಬೆಳೆಯುತ್ತಿದ್ದಾರೆ.
ಪ್ರತಿದಿನ ಮೂರು ಸಾವಿರ ಹೂವು ಮಾರಾಟ : ಕಳೆದ 8 ವರ್ಷಗಳಿಂದ ಗುಲಾಬಿ ತೋಟವನ್ನು ಮಾಡುತ್ತಾ ಬಂದಿದ್ದು, ಪ್ರತಿದಿನವೂ ಗುಲಾಬಿ ಹೂ ವವನ್ನು ಕಟ್ಟು ಮಾಡಿ ಇಲ್ಲಿಯೇ ವ್ಯಾಪರಸ್ಥರು ಖರೀದಿಸಿಕೊಂಡು ಹೋಗುತ್ತಾರೆ. 3 ಲಕ್ಷ ರೂ. ಹಣವನ್ನು ತೋಟಕ್ಕೆ ವೆಚ್ಚ ಮಾಡಿದ್ದೇವೆ. 4 ದಿನಕ್ಕೊಮ್ಮೆ ನೀರನ್ನು ಹಾಕುತ್ತೇವೆ. ಪ್ರತಿ 6 ತಿಂಗಳಿಗೆ ಗೊಬ್ಬರ ಹಾಕಬೇಕು. ಪ್ರತಿದಿನ 3 ಸಾವಿರ ಹೂವುಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಅಗಲಕೋಟೆಯ ರೈತ ದೇವರಾಜ್ ಹೇಳುತ್ತಾರೆ.
ಜಿಲ್ಲೆಯಲ್ಲಿ ವಿವಿಧ ತಳಿಗಳ ಗುಲಾಬಿ ಹೂವನ್ನು ರೈತರು ಬೆಳೆಯುತ್ತಿದ್ದಾರೆ. ರೋಸ್ ಬೆಳೆಯುವ ರೈತರಿಗೆ ಅರ್ಧ ಅಥವಾ ಒಂದು ಎಕರೆ ಇರಲಿ ಪಾಲಿಹೌಸ್‌ಗೆ ಸಹಾಯ ಧನ, ಬಯಲು ಪ್ರದೇಶದಲ್ಲಿ ಬೆಳೆಯುವ ರೈತರಿಗೆ ನೆರಗಾ ಯೋಜನೆಯಡ್ಲಿ ಪ್ರೋತ್ಸಾಹ ನೀಡಲಾಗುವುದು. ಜಿಲ್ಲೆಯಲ್ಲಿ ಡಚ್ ಜಾತಿಯ ರೋಸ್ ಬೆಳೆಯುತ್ತಿದ್ದಾರೆ. – ಗುಣವಂತ, ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ
ಪ್ರೇಮಿಗಳ ದಿನಾಚರಣೆ ಹಾಗೂ ಇನ್ನಿತರೆ ದಿನವಾಗಲಿ ಒಂದು ಗುಲಾಬಿ ಹೂಗಳ ಬಂಚ್‌ಗೆ ವ್ಯಾಪಾರಸ್ಥರು ಕೇವಲ 20 ರೂ. ನೀಡುತ್ತಾರೆ. ಶ್ರಮವಹಿಸಿ ಗುಲಾಬಿ ಹೂವನ್ನು ಬೆಳೆದರೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಯಾವುದಾದರೂ ಕೆಲಸಕ್ಕೆ ಹೋದರೆ ತಿಂಗಳಿಗೆ 15 ಸಾವಿರ ಸಂಬಳ ನೀಡುತ್ತಾರೆ. ತೋಟದಲ್ಲಿ ಹೂವು ಬೆಳೆದರೆ ತಿಂಗಳಿಗೆ 60 ಸಾವಿರ ಹಣ ಗಳಿಸಬಹುದು. – ದೇವರಾಜ್, ಗುಲಾಬಿ ಹೂವು ಬೆಳೆಗಾರ
-ಎಸ್.ಮಹೇಶ್