Advertisement

ರಂಗೇರಿದ ಕಣ: ಕೈ, ಕಮಲ ಭರ್ಜರಿ ಪ್ರಚಾರ

09:38 PM Apr 02, 2019 | Team Udayavani |

ಕೆಜಿಎಫ್: ಸತತ 27 ವರ್ಷ, ಒಂದೇ ಅಭ್ಯರ್ಥಿ, ಪಕ್ಷ ಬೆಂಬಲಿಸಿರುವ ಜನತೆ ಈ ಬಾರಿಯೂ ತಮಗೆ ಆಶೀರ್ವಾದ ಮಾಡಬೇಕು ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಮನವಿ ಮಾಡಿದರು.

Advertisement

ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ರೈಲ್ವೆ ಬಗ್ಗೆ ಅನೇಕ ಅಭಿವೃದ್ಧಿ ಕಾಮಗಾರಿ ನಡೆದಿದೆ. ಬಿಜಿಎಂಎಲ್‌ ಮುಚ್ಚಿದ ನಂತರ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರ್ಮಿಕರ ಕುಟುಂಬಕ್ಕೆ ಮುಂದಿನ ದಿನಗಳು ಒಳ್ಳೆಯದಾಗಲಿದೆ. ಚುನಾವಣೆ ಮುಗಿದ ನಂತರ ಕಾರ್ಖಾನೆ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು.

ಸ್ವಾತಂತ್ರ್ಯ ಬಂದ ಮೇಲೆ ಯಾವುದೇ ಶಾಸಕರು ಮಾಡದ ಕೆಲಸವನ್ನು ರೂಪಕಲಾ ಮಾಡಿದ್ದಾರೆ. 50 ಸಾವಿರ ಮಹಿಳೆಯರಿಗೆ ಸಾಲ ನೀಡಲಾಗಿದೆ. ಕೆಜಿಎಫ್ ತಾಲೂಕು ಕಚೇರಿ ಪ್ರಾರಂಭಿಸಲಾಗಿದೆ. ಕಚೇರಿಗಳು ಕೂಡ ಶೀಘ್ರದಲ್ಲಿ ಬರಲಿದೆ. ಬಿಜಿಎಂಎಲ್‌ನ ವೈಭವದ ದಿನಗಳು ಪುನಃ ಮರಳಿ ಬರಲಿದೆ. ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುನಿಯಪ್ಪ ಹೇಳಿದರು.

224 ಕ್ಷೇತ್ರಗಳಲ್ಲಿ ಅತಿ ಹೆಚ್ಚು ರೈಲಿನ ಸೌಲಭ್ಯಗಳನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ಅತಿ ಹೆಚ್ಚು ಮತಗಳನ್ನು ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನೀಡಬೇಕು ಎಂದು ಹೇಳಿದರು. ಶಾಸಕಿ ಎಂ.ರೂಪಕಲಾ ಮಾತನಾಡಿ, 50 ವರ್ಷದಿಂದ ಕಾಂಗ್ರೆಸ್‌ಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರನ್ನು ಕೊಟ್ಟಿರಲಿಲ್ಲ. ಈಗ ನನಗೆ ಆಶೀರ್ವಾದ ಮಾಡಿದ್ದಾರೆ. ಈಗಾಗಲೇ ಅತಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಸಿದ್ದೇನೆ ಎಂದು ಹೇಳಿದರು.

ಕೆಜಿಎಫ್ನಲ್ಲಿ ಕೈಗಾರಿಕೆ ತರುತ್ತೇನೆ. ಈಗಾಗಲೇ ಸಚಿವ ಜಾರ್ಜ್‌ ಅಭಯ ನೀಡಿದ್ದಾರೆ. 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಆಗಲಿದೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನವೀಕರಣಗೊಳ್ಳುತ್ತಿದೆ. ಸ್ಲಂಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

Advertisement

ಪಾಸ್‌ಪೋರ್ಟ್‌ ಕಚೇರಿ ತೆರೆಯಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. ಇಂದಿರಾ ಕ್ಯಾಂಟೀನ್‌ ಅತಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ನಗರದಲ್ಲಿ ಹೊಸ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಬಿಜೆಪಿ ಶಾಸಕರು ಇದ್ದಾಗ ಯಾವುದೇ ಕಾಮಗಾರಿ ನಡೆಯಲಿಲ್ಲ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಕಾರ್ತಿಕ್‌ ಮಾತನಾಡಿ, ಮುನಿಯಪ್ಪ ಮಾಡಿದ ಕೆಲಸಗಳು ಅತಿ ಹೆಚ್ಚು ಪ್ರಚಾರವಾಗಲಿಲ್ಲ. ಅವರು ಮಾಡಿದ ಕೆಲಸಗಳನ್ನು ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಬೇಕು. ಜೆಡಿಎಸ್‌ ಕಾರ್ಯಕರ್ತರು ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್‌ ನಾಯಕರಾದ ಜಯಪಾಲ್‌, ಸಂಪತ್‌ಕುಮಾರ್‌, ಮೊದಲಮುತ್ತು, ದಾಸ್‌ ಚಿನ್ನಸವರಿ, ಪ್ರಕಾಶಂ, ಕೆ.ಚಂದ್ರಾರೆಡ್ಡಿ ಮಾತನಾಡಿದರು. ಜಯಂತಿ, ಮುನಿರತ್ನಂನಾಯ್ಡು, ಆನಂದಕೃಷ್ಣ, ನಿಜಾಂಪಾಷ, ದಾವಿದ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next