Advertisement

ಬಿಗ್ ಬಾಸ್ ರೂಪೇಶ್ ಶೆಟ್ಟಿ ನಟನೆಯ ‘ಮಂಕು ಭಾಯ್‌ ಫಾಕ್ಸಿ ರಾಣಿ’ ಹಾಡು ರಿಲೀಸ್

03:50 PM Nov 03, 2022 | Team Udayavani |

ಬಿಗ್‌ ಬಾಸ್‌ ಸೀಸನ್‌ 9ರ ಸ್ಪರ್ಧಿ, ನಟ ರೂಪೇಶ್‌ ಶೆಟ್ಟಿ ಅಭಿನಯದ “ಮಂಕು ಭಾಯ್‌ ಫಾಕ್ಸಿ ರಾಣಿ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಟೈಟಲ್‌ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುವ ಚಿತ್ರ ತಂಡ ಇದೀಗ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.

Advertisement

ಸದ್ಯ ಈ ಚಿತ್ರದ “ತಂಗಾಳಿಯೇ ತಲುಪಿಸು’ ಹಾಡು ಬಿಡುಗಡೆಯಾ ಗಿದ್ದು, ತಮಿಳಿನ ಖ್ಯಾತ ಗಾಯಕ ಹರಿಚರಣ್‌ ಹಾಡಿಗೆ ದನಿಯಾಗಿದ್ದಾರೆ. ಕೀರ್ತನ್‌ ಭಂಡಾರಿ ಸಾಹಿತ್ಯ, ವಿನ್ಯಾಸ್‌ ಮದ್ಯ ಸಂಗೀತ ಸಂಯೋಜನೆ ಇದೆ. ಈ ಹಿಂದೆ ಬಿಡುಗಡೆಯಾದ ಸೋನು ನಿಗಮ್‌ ಕಂಠಸಿರಿಯಲ್ಲಿ ಮೂಡಿಬಂದ “ಮಿಂಚಂತೆ ಮಿನುಗುತಿರೊ’ ಹಾಡು ಮೆಚ್ಚುಗೆಗೆ ಪಾತ್ರವಾಗಿತ್ತು.

ನಾಯಕ ರೂಪೇಶ್‌ ಶೆಟ್ಟಿ ಈಗಾಗಲೇ ಹಲವು ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಸಿಕೊಂಡಿದ್ದು, ಇವರಿಗೆ ನಾಯಕಿಯರಾಗಿ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್‌ ಅಭಿನಯಿಸಿದ್ದಾರೆ.

ಲವ್‌, ಸಸ್ಪೆನ್ಸ್ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಯುವ ಪ್ರತಿಭೆ ಗಗನ್‌ ಎಂ ಆಕ್ಷನ್‌ ಕಟ್‌ ಹೇಳಿದ್ದಾರೆ. ಕಿರುಚಿತ್ರ ಹಾಗೂ ಕೆಲ ತುಳು ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರಿಗಿದ್ದು, “ಮಂಕು ಭಾಯ್‌ ಫಾಕ್ಸಿ ರಾಣಿ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ. ನಿರ್ಮಾಪಕ ಜೋಶ್ವ ಜೈಶಾನ್‌ ಕ್ರಾಸ್ತ “ಜೋಶ್ವ ಮೀಡಿಯಾ ಪ್ರೈವೇಟ್‌’ ಲಿಮಿಟೆಡ್‌ ಬ್ಯಾನರ್‌ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ವಿನ್ಯಾಸ್‌ ಮದ್ಯ, ಶಮೀರ್‌ ಮುಡಿಪು ಸಂಗೀತ ನಿರ್ದೇಶನ, ಶಿನೋಯ್‌ ವಿ ಜೋಸೆಫ್ ಹಿನ್ನೆಲೆ ಸಂಗೀತ, ಸುಶಾಂತ್‌ ಶೆಟ್ಟಿ, ಪ್ರಜ್ವಲ್‌ ಸುವರ್ಣ ಸಂಕಲನ ಚಿತ್ರಕ್ಕಿದೆ. ಪ್ರಕಾಶ್‌ ತುಮಿನಾಡು, ಅರ್ಜುನ ಕಜೆ, ಪ್ರಶಾಂತ್‌ ಅಂಚನ್‌, ವಿವೇಕ್‌ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

Advertisement

ಸೆನ್ಸಾರ್‌ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್‌ ಪಡೆದುಕೊಂಡಿರುವ “ಮಂಕು ಭಾಯ್‌ ಫಾಕ್ಸಿ ರಾಣಿ’ ಚಿತ್ರ ಜನವರಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next