Advertisement
“ಗಾಂಧಿ ಶಿಲ್ಪ ಬಜಾರ್’ ಉದ್ಘಾಟನೆ ಸಮಾರಂಭದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿ, ಪ್ರಸ್ತುತ ನಿಗಮದಲ್ಲಿ 3 ಸಾವಿರದಷ್ಟು ಮಂದಿ ನೋಂದಣಿ ಮಾಡಿದ್ದಾರೆ. ಅವರಿಗೆ ತರಬೇತಿ ನೀಡುವುದಲ್ಲದೇ, ಅವರ ಉತ್ಪನ್ನಗಳಿಗೆ ಮೇಳಗಳು, ಕಾವೇರಿ ಶೋರೂಂ ಇತ್ಯಾದಿ ಮೂಲಕ ಮಾರುಕಟ್ಟೆ ಒದಗಿಸಲಾಗುತ್ತದೆ. ಇದು ಉಚಿತ. ಉತ್ಪನ್ನಗಳ ಮಾರಾಟದಿಂದ ಬಂದ ಹಣವೂ ಅವರಿಗೆ ನೀಡಲಾಗುತ್ತದೆ ಎಂದರು.
ಮಂಗಳೂರಿನಲ್ಲಿ ಕರಕುಶಲ ವಸ್ತುಗಳ ಮಾರಾಟಕ್ಕೆ ಜಾಗ ಹುಡು ಕುತ್ತಿದ್ದೇವೆ. ದಿಲ್ಲಿ, ಹೈದರಾಬಾದ್, ಕೊಲ್ಕತ್ತಾ, ಗುಜರಾತ್ ನಲ್ಲಿ ಕಾವೇರಿ ಮಳಿಗೆಗಳಿವೆ. ಚೆನ್ನೈನಲ್ಲಿ “ಕಾವೇರಿ’ ಶೋರೂಂ 2 ತಿಂಗಳಲ್ಲಿ ಆರಂಭವಾಗಲಿದೆ. ಇದು ಹೊರ ರಾಜ್ಯದಲ್ಲಿ ಐದನೇ ಮಳಿಗೆ. ರಾಜ್ಯ ದಲ್ಲೂ 13 ಕಡೆಗಳಲ್ಲಿ ಕರಕುಶಲ ಸಂಕೀರ್ಣಗಳಿವೆ ಎಂದರು. ಸಾಗರದಲ್ಲಿರುವ ನಿಗಮದ ಶಿಲ್ಪ ಗುರುಕುಲ ಕೋರ್ಸ್‌ಗಳನ್ನು ಈಗಿನ ಅಗತ್ಯಕ್ಕೆೆ ತಕ್ಕಂತೆ ಮೇಲ್ದರ್ಜೆಗೇರಿಸಿ, ಶಿಲ್ಪ ತರಬೇತಿಯ ಕೋರ್ಸ್‌ಗಳನ್ನು 10 ತಿಂಗಳಿಗೆ ಇಳಿಸಲಾಗುತ್ತದೆ. ಪ್ರಸ್ತುತ 40 ಮಂದಿ ವಿದ್ಯಾರ್ಥಿ ಗಳು ಮರ ಮತ್ತು ಶಿಲ್ಪ ಕೆತ್ತನೆಯ ತರಬೇತಿ ಪಡೆಯುತ್ತಿದ್ದಾರೆ ಎಂದರು.
Related Articles
Advertisement