Advertisement

‘ರೂಮ್‌ ಬಾಯ್‌’ ಟೀಸರ್‌ ಬಂತು: ಹೊಸಬರ ಚಿತ್ರಕ್ಕೆ ಡಾಲಿ ಸಾಥ್

04:09 PM Jan 11, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿರುವ “ರೂಮ್‌ ಬಾಯ್‌’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಬಹುತೇಕ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ರೂಮ್‌ ಬಾಯ್‌’ ಚಿತ್ರದ ಮೊದಲ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ್‌, “ರೂಮ್‌ ಬಾಯ್‌’ ಚಿತ್ರದ ಮೊದಲ ಟೀಸರ್‌ ಬಿಡುಗಡೆಗೊಳಿಸಿ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Advertisement

ಚಿತ್ರರಂಗದಲ್ಲಿ ಸುಮಾರು ಒಂದು ದಶಕದ ಕಾಲ ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ರವಿ ನಾಗಡದಿನ್ನಿ ನಿರ್ದೇಶನದ ಮೊದಲ ಬಾರಿಗೆ “ರೂಮ್‌ ಬಾಯ್‌’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಈ ಹಿಂದೆ “ಅಪರೇಷನ್‌ ನಕ್ಷತ್ರ’, “ಲೈಫ್ ಸೂಪರ್‌’, “ಗ್ರಾಮ’ ಮೊದಲಾದ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಲಿಖೀಲ್‌ ಸೂರ್ಯ “ರೂಮ್‌ ಬಾಯ್‌’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಜೊತೆಗೆ “ಐ ಕಾನ್‌ ಪ್ರೊಡಕ್ಷನ್‌’ ಬ್ಯಾನರ್‌ನಡಿ ನಿರ್ಮಾಪಕನಾಗಿ ಸಿನಿಮಾಗೆ ಬಂಡವಾಳವನ್ನೂ ಹೂಡಿದ್ದಾರೆ.

ಲಿಖೀತ್‌ ಸೂರ್ಯಗೆ ಚಿತ್ರದಲ್ಲಿ ರಕ್ಷಾ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ಅಶ್ವಿ‌ನ್‌ ಹಾಸನ್‌, ಚೇತನ್‌ ದುರ್ಗಾ, ವರ್ಧನ್‌ ತೀರ್ಥಹಳ್ಳಿ, ಯಶ್‌ ಶೆಟ್ಟಿ, ರಾಘು ಶಿವಮೊಗ್ಗ, ವಜ್ರಂಗ ಶೆಟ್ಟಿ, ಪದ್ಮಿನಿ, ರಾಹುಲ್, ರೋಷನ್‌, ರಜನಿ, ವಿಕ್ಕಿ, ಯಶಾ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಕಹಿ ಘಟನೆ ಮೆಲುಕು ಹಾಕಿದ ಭಾವನಾ

Advertisement

ಅಂದಹಾಗೆ, ಸೈಕಾಲಜಿಕಲ್‌ ಸಸ್ಪೆನ್ಸ್‌ ಕಂ ಕ್ರೈಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ರೂಮ್‌ ಬಾಯ್‌’ ಚಿತ್ರಕ್ಕೆ ಧನಪಾಲ್‌ ನಾಯಕ್‌ ಛಾಯಾಗ್ರಹಣ, ರೋಣದ ಬಕ್ಕೇಶ್‌ ಸಂಗೀತವಿದೆ.  ಚಿತ್ರಕ್ಕೆ ವಿಜಯ್‌ ಭರಮಸಾಗರ ಕ್ರಿಯೇಟಿವ್‌ ಹೆಡ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಟೀಸರ್‌ ಬಿಡುಗಡೆ ಮೂಲಕ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಎಪ್ರಿಲ್‌-ಮೇನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next