Advertisement

Ronny Movie: ಮಾಸ್‌ ಅವತಾರದಲ್ಲಿ ಕಿರಣ್‌ ರಾನಿ “ರಾನಿ’

10:09 AM Sep 04, 2024 | Team Udayavani |

ʼರಾನಿʼ ಸದ್ಯ ಸ್ಯಾಂಡಲ್‌ವುಡ್‌ನ‌ಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಕಿರುತೆರೆಯಲ್ಲಿ ತನ್ನದೇ ಆದ ಅಭಿಮಾನಿ ವರ್ಗವನ್ನು ಹೊಂದಿರುವ ಕಿರಣ್‌ ರಾಜ್‌ ನಾಯಕರಾಗಿ ನಟಿಸಿರುವ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾವಿದು. ಈ ಚಿತ್ರ ಸೆ.12ರಂದು ತೆರೆಕಾಣುತ್ತಿದೆ.

Advertisement

ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಭೂಗತ ಲೋಕದ ಹಗೆತನ, ಮಾಸ್‌ ಆಕ್ಷನ್‌, ರಗಡ್‌ ಡೈಲಾಗ್‌ಗಳು ಜತೆಗಿಷ್ಟು ಪ್ರೀತಿ, ಪ್ರೇಮದ ತಿರುವುಗಳು ಕಾಣಸಿಗಲಿವೆ. ಟ್ರೇಲರ್‌ನುದ್ದಕ್ಕೂ ತೂಕದ ಸಂಭಾಷಣೆ ಕೇಳಿಸುತ್ತದೆ. ಈಗಾಗಲೇ ಚಿತ್ರದ ಟ್ರೇಲರ್‌ ಹಾಗೂ ಇದರಲ್ಲಿನ ಸಂಭಾಷಣೆಗಳಿಗೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಬಂದಿವೆ. ಲವರ್‌ ಬಾಯ್‌ ರೂಪದಲ್ಲಿ ಛಾಪು ಮೂಡಿಸಿದ್ದ ನಟ ಕಿರಣ ರಾಜ್‌ “ರಾನಿ’ ಮೂಲಕ ಮಾಸ್‌ ಹೀರೋ ಆಗುತ್ತಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗುರುತೇಜ್‌ ಶೆಟ್ಟಿ, “ಚಿತ್ರದಲ್ಲಿ ಆ್ಯಕ್ಷನ್‌ಗೆ ಹೆಚ್ಚಿನ ಮಹತ್ವವಿದೆ. ಹಾಗಂತ ಇಡೀ ಸಿನಿಮಾ ಕೇವಲ ಆ್ಯಕ್ಷನ್‌ಗೆ ಸೀಮಿತವಾಗಿಲ್ಲ. ಚಿತ್ರದಲ್ಲಿ ಫ್ಯಾಮಿಲಿ ಎಮೋ ಶನ್‌ಗೆ ಜಾಗವಿದೆ. ಕಿರಣ್‌ ರಾಜ್‌ ಅವರ ಅಭಿ ಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಮುಖ್ಯವಾಗಿ ಇದು ಬಿಗ್‌ ಬಜೆಟ್‌ ಸಿನಿಮಾ. ಇದೊಂದು ಸಿಟಿ ಬ್ಯಾಕ್‌ ಡ್ರಾಪ್‌ನಲ್ಲಿ ನಡೆಯುವ ಕಾಮನ್‌ ಮ್ಯಾನ್‌ ಕಥೆ. ದೊಡ್ಡ ಸ್ಟಾರ್‌ ಹೀರೋ ಸಿನಿಮಾದ ಮೇಕಿಂಗ್‌ ಹೇಗಿರುತ್ತದೋ ಅದೇ ರೀತಿಯ ಮೇಕಿಂಗ್‌, ದೊಡ್ಡ ಕ್ಯಾನ್ವಾಸ್‌ ಇಲ್ಲಿದೆ. ಮುಖ್ಯವಾಗಿ ಇದೊಂದು ಥಿಯೇಟರ್‌ ಎಕ್ಸ್‌ಪಿರಿಯನ್ಸ್‌ ಕೊಡುವ ಸಿನಿಮಾ. ಏಕೆಂದರೆ ಇಲ್ಲಿನ ಸೌಂಡ್‌ ಡಿಸೈನ್‌, ಕಥೆ ಹೇಳಿದ ರೀತಿ, ಟ್ವಿಸ್ಟ್‌ಗಳು ಎಲ್ಲವೂ ಪ್ರೇಕ್ಷಕರಿಗೆ ಒಂದೊಳ್ಳೆಯ ಅನುಭವ ನೀಡುವುದು ಸುಳ್ಳಲ್ಲ ಎಂದರು.

ಸ್ಟಾರ್‌ ಕ್ರಿಯೇಷನ್‌ ಲಾಂಛನದಡಿ ಚಂದ್ರಕಾಂತ್‌ ಪೂಜಾರಿ, ಉಮೇಶ್‌ ಹೆಗ್ಡೆ ನಿರ್ಮಿಸಿರುವ ಚಿತ್ರವನ್ನು ಗುರುತೇಜ್‌ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ರವಿಶಂಕರ್‌, ಮೈಕೋ ನಾಗರಾಜ್‌, ಉಗ್ರಂ ರವಿ, ಉಗ್ರಂ ಮಂಜು, ಬಿ. ಸುರೇಶ, ಮಂಡ್ಯ ರಮೇಶ್‌, ಸಮೀಕ್ಷಾ, ಅಪೂರ್ವ, ರಾದ್ಯಾ ಚಿತ್ರದ ತಾರಾಗಣದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.