Advertisement

“ತಾಯಿಗೆ ತಕ್ಕ ಮಗ’ಚಿತ್ರದ ರೋಮ್ಯಾಂಟಿಕ್ ಸಾಂಗ್ ರಿಲೀಸ್: Watch

02:26 PM Sep 16, 2018 | |

ಶಶಾಂಕ್‌ ನಿರ್ದೇಶನದ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ಫಸ್ಟ್ ಲುಕ್ ಮತ್ತು ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಹೃದಯಕೆ ಹೆದರಿಕೆ ಹೀಗೆ ನೋಡಿದರೆ’ ಎಂಬ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದೆ.

Advertisement

ಜ‌ಯಂತ್ ಕಾಯ್ಕಿಣಿ ಬರೆದಿರುವ ಪದಗಳಿಗೆ ಜ್ಯೂಡಾ ಸ್ಯಾಂಡಿ ಕ್ಯಾಚೀ ಟ್ಯೂನ್ಸ್ ಹಾಕಿದ್ದು, ಸರಿಗಮಪ ಖ್ಯಾತಿಯ ಸಂಜಿತ್ ಹೆಗ್ಡೆ ಹಾಗೂ ಸಂಗೀತ ರವೀಂದ್ರನಾಥ್ ಅವರು ಧ್ವನಿ ನೀಡಿದ್ದು ಕೇಳುಗರಲ್ಲಿ ಹೊಸ ಭಾವನೆಯನ್ನು ಮೂಡಿಸುತ್ತಿದೆ. ಅಜೇಯ್ ರಾವ್‍ರ 25 ಸಿನಿಮಾವಾಗಿ ತೆರೆಗೆ ಬರುತ್ತಿರುವ “ತಾಯಿಗೆ ತಕ್ಕ ಮಗ’ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಸಿನಿಪ್ರಿಯರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು.

ಚಿತ್ರ ಶಶಾಂಕ್ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಅಜೇಯ್‍ರಾವ್ ಹಾಗೂ ನಾಯಕಿ ಆಶಿಕಾ ರಂಗನಾಥ್ ನಡುವಿನ ರೊಮ್ಯಾಟಿಂಕ್ ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿರುವ ಈ ಹಾಡು ಕುತೂಹಲ ಮೂಡಿಸುತ್ತಿದೆ. ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ “ತಾಯಿಗೆ ತಕ್ಕ ಮಗ’ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ.

ಚಿತ್ರವು ಎರಡು ಟ್ರ್ಯಾಕ್‌ನಲ್ಲಿ ಸಾಗುವ ಕಥೆಯಾಗಿದ್ದು, ತಾಯಿ-ಮಗನ ಎಪಿಸೋಡ್‌ ಒಂದು ಕಡೆಯಾದರೆ, ಹೀರೋ ಲವ್‌ ಎಪಿಸೋಡ್‌ ಇನ್ನೊಂದು ಕಡೆ ಸಾಗುತ್ತದೆಯಂತೆ. “ಚಿತ್ರದಲ್ಲಿ ತಾಯಿ-ಮಗನ ಒಂದು ಕಥೆಯಾದರೆ, ಅವರನ್ನು ವಿರೋಧಿಸುವ ತಂದೆ-ಮಗನ ಮತ್ತೊಂದು ಕಥೆ ಇದೆ. ಇವರ ನಡುವೆ ಪೇಚಿಗೆ ಸಿಲುಕುವ ಅಪ್ಪ-ಮಗಳು ಇನ್ನೊಂದು ಕಡೆ’ಯಲ್ಲಿ ಕಥೆ ಸಾಗುತ್ತದೆ. 

ಚಿತ್ರದಲ್ಲಿ ಅಜೇಯ್‌ ರಾವ್‌ ಎದುರಿಗೆ ನಾಯಕಿಯಾಗಿ ಆಶಿಕಾ ನಟಿಸಿದ್ದು, ಸುಮಲತಾ ಅಂಬರೀಶ್‌ ತಾಯಿಯಾಗಿ ನಟಿಸಿದ್ದಾರೆ. ಅಲ್ಲದೇ ಚಿತ್ರಕ್ಕೆ ಕಿಚ್ಚ ಸುದೀಪ ಧ್ವನಿ ನೀಡಿದ್ದು, ಈ ಮೂಲಕ ಅಜೇಯ್‌ ರಾವ್‌ ಸಿನಿಮಾಕ್ಕೆ ಸುದೀಪ್‌ ಸಾಥ್‌ ನೀಡಿದ್ದಾರೆ. ಚಿತ್ರದ ರೋಮ್ಯಾಂಟಿಕ್ ಸಾಂಗ್ ವೀಕ್ಷಿಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next