ನವದೆಹಲಿ: ಮಂಗಳವಾರ ದೆಹಲಿ-ಮುಂಬೈ-ಬರೋಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಪೆಟ್ರೋಲ್ ಟ್ಯಾಂಕರ್‌ಗೆ ರೋಲ್ಸ್ ರಾಯ್ಸ್ ಕಾರು ಅತಿವೇಗದ ಅಪಘಾತದಲ್ಲಿ ಗಾಯಗೊಂಡವರಲ್ಲಿ ಕುಬೇರ್ ಗ್ರೂಪ್‌ನ ನಿರ್ದೇಶಕ ವಿಕಾಸ್ ಮಾಲು ಅವರಿಗೆ ಹರಿಯಾಣದ ನುಹ್ ಪೊಲೀಸರು ನೋಟಿಸ್ ನೀಡಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣ ಮಾಲು ಅವರ ವಿಚಾರಣೆ ಆರಂಭವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕಾಸ್ ಮಾಲು ಅವರನ್ನು ಗುರುಗ್ರಾಮ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನ ಅತಿವೇಗದ ಚಾಲನೆ ಅವಘಡಕ್ಕೆ ಕಾರಣವಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ವಿಕಾಸ್ ಮಾಲು ಅವರ ವಿರುದ್ಧ ಸೆಕ್ಷನ್ 279, 337 (ಅಪಘಾತ ಮತ್ತು ನಿರ್ಲಕ್ಷ್ಯದಿಂದ ಚಾಲನೆ) ಮತ್ತು 304 (ಅಪರಾಧೀಯ ಪ್ರಕರಣ) ಅಡಿಯಲ್ಲಿ ದಾಖಲಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಆಗಸ್ಟ್ 22 ರಂದು ಸಂಭವಿಸಿದ ಈ ಅಪಘಾತದಲ್ಲಿ ಟ್ಯಾಂಕರ್‌ನಲ್ಲಿದ್ದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿದ್ದಾನೆ. ಮತ್ತು ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಸವಾರರು ಗಂಭೀರ ಗಾಯಗೊಂಡಿದ್ದಾರೆ.
ಎಕ್ಸ್‌ಪ್ರೆಸ್‌ವೇಯಲ್ಲಿ 14 ವಾಹನಗಳ ಬೆಂಗಾವಲು ಪಡೆ ಒಟ್ಟಿಗೆ ಪ್ರಯಾಣಿಸುತ್ತಿದ್ದ ಕುಬೇರ್ ಗ್ರೂಪ್‌ನ ನಿರ್ದೇಶಕ ವಿಕಾಸ್ ಮಾಲು ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಅಲ್ಲದೆ ಅಪಘಾತಕ್ಕೆ ಕಾರಿನ ಅತೀ ವೇಗದ ಚಾಲನೆಯೇ ಕಾರಣ ಎನ್ನಲಾಗಿದ್ದು, ಟೋಲ್ ಗೇಟ್ ದಾಟಿ ಮುಂದೆ ಪ್ರಯಾಣಿಸುತ್ತಿದ್ದಂತೆ ಕಾರಿನ ಅತೀಯಾದ ವೇಗದಿಂದ ಎದುರಿನಲ್ಲಿ ಟ್ಯಾಂಕರ್ ಚಾಲಕ ವಾಹನವನ್ನು ಯೂ ಟರ್ನ್ ತೆಗೆದುಕೊಂಡ ವೇಳೆ ನೇರವಾಗಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ನುಹ್ ಪೊಲೀಸ್ ಅಧೀಕ್ಷಕ ನರೇಂದ್ರ ಬಿಜರ್ನಿಯಾ ಹೇಳಿಕೆಯಂತೆ, ಮೇಲ್ನೋಟಕ್ಕೆ, ರೋಲ್ಸ್ ರಾಯ್ಸ್ ಚಾಲಕನದ್ದೇ ತಪ್ಪು ಎನ್ನಲಾಗಿದೆ. ಚಾಲಕನ ತಪ್ಪಿನಿಂದಾಗಿ ರೋಲ್ಸ್ ರಾಯ್ಸ್ ಕಾರು ಅಪಘಾತಕ್ಕೀಡಾಗಿದೆ. ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಸದ್ಯಕ್ಕೆ ಸಮಗ್ರ ತನಿಖೆ ನಡೆಯುತ್ತಿದೆ,’’ ಎಂದರು.
ಎಕ್ಸ್‌ಪ್ರೆಸ್‌ವೇಯಲ್ಲಿ ಅನುಮತಿಸಲಾದ ವೇಗದ ಮಿತಿ ಗಂಟೆಗೆ 120 ಕಿಮೀ ಆಗಿದ್ದರೆ, ಐಷಾರಾಮಿ ವಾಹನವು ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Tragic: ನಶೆಯಲ್ಲಿ ಈಜಲು ಹೋಗಿ ಇಬ್ಬರು ಸ್ನೇಹಿತರು ನೀರುಪಾಲು