ರೋಹಟಕ್: ಅತ್ಯಂತ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೋರ್ವರನ್ನು ಅಪಹರಿಸಿದ ಏಳು ಮಂದಿ ಕಾಮುಕರು ಆಕೆಯನ್ನು ಅತ್ಯಮಾನುಷವಾಗಿ ಅತ್ಯಾಚಾರಗೈದು ಬಳಿಕ ಹತ್ಯೆಗೈದ ಘಟನೆ ಹರಿಯಾಣದ ರೋಹಟಕ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯು ಕಳೆದ ಮೇ 9ರಂದು ನಡೆದಿದ್ದು, ಅಂದು ಮಹಿಳೆಯು ಎಂದಿನಂತೆ ತನ್ನ ಕೆಲಸಕ್ಕೆ ಹೋಗುವ ಮಾರ್ಗದಲ್ಲಿದ್ದಳು. ರೋಹಟಕ್ ನಗರದ ಐಎಂಟಿ ಪ್ರದೇಶದಲ್ಲಿನ ಖಾಲಿ ನಿವೇಶನವೊಂದರಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾದಾಗಲೇ ಆಕೆಯ ಮೇಲೆ ನಡೆದಿದ್ದ ಬರ್ಬರ ಕೃತ್ಯ ಬೆಳಕಿಗೆ ಬಂತು.
ಮರಣೋತ್ತರ ವರದಿಯ ಪ್ರಕಾರ ಮಹಿಳೆಯನ್ನು ಮೊದಲು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಯಿತು. ಬಳಿಕ ಅತ್ಯಂತ ಹರಿತವಾದ ಆಯುಧದಿಂದ ಆಕೆಯ ಗುಪ್ತಾಂಗಗನ್ನು ಛಿದ್ರ ಛಿದ್ರ ಗೊಳಿಸಲಾಯಿತು. ಆಕೆಯ ಗುರುತು ಹತ್ತದಂತೆ ಮಾಡಲು ಆಕೆಯ ಮುಖವನ್ನೇ ವಿರೂಪಗೊಳಿಸುವ ಯತ್ನವನ್ನು ಕೂಡ ಕಾಮುಕ ಹಂತಕರು ಮಾಡಿದರು.
ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಫೊರೆನ್ಸಿಕ್ ತಂಡ ಹೀಗೆ ಹೇಳಿದೆ : ಮಹಿಳೆಗೆ ದೈಹಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಗ್ಯಾಂಗ್ ರೇಪ್ ಬಳಿಕ ಆಕೆಯ ಗುಪ್ತಾಂಗಗಳನ್ನು ಛಿದ್ರ ಛಿದ್ರ ಮಾಡಲಾಗಿದೆ. ಆಕೆಯ ತಲೆಬರುಡೆಯನ್ನು ಒಡೆದು ಹಾಕಲಾಗಿದೆ. ಆಕೆಯ ಮುಖದ ಗುರುತು ಪತ್ತೆಯಾಗದಂತೆ ಮಾಡಲು ಆಕೆಯ ತಲೆ – ಮುಖದ ಭಾಗವನ್ನು ಜಜ್ಜಿ ಹಾಕಲಾಗಿದೆ.
Related Articles
ಇನ್ನೊಂದು ಮಾಧ್ಯಮ ವರದಿ ಪ್ರಕಾರ ಮಹಿಳೆಯ ಅಂಗಾಂಶಗಳಲ್ಲಿ ಉದ್ದೀಪನ ದ್ರವ್ಯದ ಅಂಶಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿವೆ.
ಪೊಲೀಸರು ಈ ಪ್ರಕರಣದ ಬಗ್ಗೆ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಈ ಕೆಳಗಿನ ಅಂಶಗಳು ಬಹಿರಂಗವಾಗಿವೆ : ಸಂತ್ರಸ್ತ ಮಹಿಳೆಗೆ ಒಂದು ಮದುವೆ ಪ್ರಸ್ತಾವ ಬಂದಿತ್ತು. ಅದನ್ನಾಕೆ ತಿರಸ್ಕರಿಸಿದ್ದಳು.
ಅದಾಗಿ ಒಂದು ವಾರದ ಬಳಿಕ ಆರೋಪಿಯು ತನ್ನ ಸ್ನೇಹಿತರೊಂದಿಗೆ ಮಹಿಳೆಯ ಮನೆಗೆ ಹೋಗಿದ್ದ. ಅಲ್ಲಿ ಮಹಿಳೆ ಮತ್ತು ಆರೋಪಿಯ ನಡುವೆ ಭಾರೀ ಮಾತಿನ ಚಕಮಕಿ ನಡೆದಿತ್ತು. ಇದರ ಪರಾಕಾಷ್ಠೆಯಲ್ಲಿ ಮಹಿಳೆಯು ಆರೋಪಿಗೆ ಕಪಾಳಮೋಕ್ಷ ಮಾಡಿದ್ದಳು.
ತನಗಾದ ಈ ಅವಮಾನಕ್ಕೆ ಪ್ರತೀಕಾರವಾಗಿ ಆರೋಪಿಯು ತನ್ನ ಸ್ನೇಹಿತರೊಡಗೂಡಿ ಮಹಿಳೆಯನ್ನು ಅಪಹರಿಸಿ, ಆಕೆಯ ಮೇಲೆ ಗ್ಯಾಂಗ್ ರೇಪ್ ಎಸಗಿ, ಆಕೆಯ ಗುಪ್ತಾಂಗಗಳನ್ನು ಛಿದ್ರಗೊಳಿಸಿ, ತಲೆಬರುಡೆ ಒಡೆದು ಹಾಕಿ ಆಕೆಯನ್ನು ಅಮಾನುಷವಾಗಿ ಹತ್ಯೆಗೈದಿದ್ದ.
ಮೃತ ಮಹಿಳೆಯ ತಾಯಿಯ ಹೇಳಿಕೆಯ ಪ್ರಕಾರ ಆರೋಪಿಯು ಕಳೆದ ಒಂದು ವರ್ಷದಿಂದ ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ.”ಆ ನೀಚರು ನನ್ನ ಮಗಳ ಮೇಲೆ ಎಸಗಿರುವ ಬರ್ಬರ ಕೃತ್ಯಗಳನ್ನು ನನ್ನಿಂದ ಊಹಿಸಲೂ ಸಾಧ್ಯವಿಲ್ಲ. ಎಲ್ಲ ಆರೋಪಿಗಳಿಗೆ ಮರಣ ದಂಡನೆಯ ಶಿಕ್ಷೆ ಆಗಬೇಕೆಂದೇ ನಾನು ಬಯಸುತ್ತೇನೆ’.