Advertisement

ಅಲ್ಪಾವಧಿಯ ಯೋಜನೆಗಳೇ ನನ್ನ ಯಶಸ್ಸಿಗೆ ಕಾರಣ ಎಂದ ರೋಹಿತ್ ಶರ್ಮಾ

11:12 AM May 15, 2020 | keerthan |

ಮುಂಬೈ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಟೀಂ ಇಂಡಿಯಾದ ಪ್ರಮುಖ ಆಟಗಾರ. ನಿಗಧಿತ ಓವರ್ ಕ್ರಿಕೆಟ್ ನ ಉಪನಾಯಕನಾಗಿರುವ ರೋಹಿತ್ ಶರ್ಮಾ ಈಗ ಟೆಸ್ಟ್ ಕ್ರಿಕೆಟ್ ನಲ್ಲೂ ನೆಲೆಯೂರುತ್ತಿದ್ದಾರೆ.

Advertisement

ಕ್ರಿಕೆಟ್ ಜೀವನದ ಆರಂಭದಲ್ಲಿ ಮದ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ರೋಹಿತ್ 2013ರ ಚಾಂಪಿಯನ್ಸ್ ಟ್ರೋಫಿ ನಂತರ ಆರಂಭಿಕರಾದರು. ನಂತರ ರೋಹಿತ್ ಶರ್ಮಾ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿದೆ. ತನ್ನ ಯಶಸ್ಸನ ಬಗ್ಗೆ ರೋಹಿತ್ ಮಾತನಾಡಿದ್ದಾರೆ.

ನಾನು ಯಾವತ್ತೂ ದೀರ್ಘ ಕಾಲದ ಬಗ್ಗೆ ಯೋಚನೆ ಮಾಡುವುದಿಲ್ಲ. ಸಣ್ಣ ಸಣ್ಣ ಪ್ಲಾನ್ ಮಾಡುತ್ತೇನೆ.  ತನ್ನ ಆಟದ ವಿಧಾನದಿಂದ ಇಂದಿನ ಯಶಸ್ಸು ಸಾಧ್ಯವಾಗಿದೆ ಎಂದಿದ್ದಾರೆ.

ನಾನು ದೀರ್ಘಕಾಲದ ಯೋಜನೆ ಹಾಕಿಕೊಳ್ಳುವುದಿಲ್ಲ. ತರಬೇತಿ ಹಾಗೂ ಆಟದ ದೃಷ್ಟಿಯಿಂದ ಅಲ್ಪಾವಧಿ ಯೋಜನೆ ಮಾಡಿಕೊಳ್ಳುತ್ತೇನೆ. ದೀರ್ಘಕಾಲದ ಯೋಜನೆಗಳಲ್ಲಿ‌ ನನಗೆ ನಂಬಿಕೆ ಇಲ್ಲ.ಪ್ರತೀ ಟೂರ್ನಿಗೂ ಮುನ್ನ ಒಂದಷ್ಟು ಪ್ಲಾನ್ ಮಾಡಿ ಕಣಕ್ಕಿಳಿಯುತ್ತೇನೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next