ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್ ಯುಎಇ ನಲ್ಲಿ ಸೋಲಿನ ಸರಪಣಿ ತುಂಡರಿಸಿದೆ. ಭರ್ಜರಿ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ ಗೆಲುವಿನ ರೂವಾರಿಯಾದರು.
ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊಸ ದಾಖಲೆಯೊಂದು ಬರೆದರು. ಅದು ಐಪಿಎಲ್ ನಲ್ಲಿ ದ್ವಿಶತಕದ ಬಾರಿಸಿದರು. ಆದರೆ ರನ್ ಲೆಕ್ಕದಲ್ಲಿ ಅಲ್ಲ. ಸಿಕ್ಸರ್ ಗಳ ಲೆಕ್ಕದಲ್ಲಿ. ಹೌದು ಮುಂಬೈ ನಾಯಕ ರೋಹಿತ್ ಶರ್ಮಾ ಐಪಿಎಲ್ ನಲ್ಲಿ 200 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದರು.
ಇದನ್ನೂ ಓದಿ: ಸನ್‌ರೈಸರ್ನಿಂದ ಮಾರ್ಷ್ ಔಟ್ ; ಜಾಸನ್ ಹೋಲ್ಡರ್ ಸೇರ್ಪಡೆ
ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ದಾಖಲೆಯನ್ನು ರೋಹಿತ್ ಅಬುಧಾಬಿ ಅಂಗಳದಲ್ಲಿ ಮಾಡಿದರು. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. (212 ಸಿಕ್ಸ್)
ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಲ್ಲಿದೆ. ಗೇಲ್ 326 ಸಿಕ್ಸರ್ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ ಇದ್ದಾರೆ.