Advertisement

ಮೊದಲ ಬಾರಿ 300 ರನ್‌ ಗಡಿದಾಟದ ರೋಹಿತ್‌

07:35 AM May 22, 2018 | Team Udayavani |

ಮುಂಬೈ: ಮುಂಬೈ ಇಂಡಿಯನ್ಸ್‌ ಐಪಿಎಲ್‌ ತಂಡದ ನಾಯಕ ರೋಹಿತ್‌ ಶರ್ಮ ಒಂದು ಅಪರೂಪದ ದಾಖಲೆಯನ್ನು ತಪ್ಪಿಸಿಕೊಂಡಿದ್ದಾರೆ. ಈ ಹಿಂದಿನ ಎಲ್ಲ ಹತ್ತೂ ಆವೃತ್ತಿಗಳಲ್ಲಿ 300ಕ್ಕಿಂತ ಹೆಚ್ಚಿನ ರನ್‌ ಗಳಿಸಿದ್ದರು. ಇದೇ ಮೊದಲ ಬಾರಿಗೆ ಅವರ ಗಳಿಕೆ 286ಕ್ಕೆ ಸೀಮಿತಗೊಂಡಿದೆ. ನಡೆದ ಎಲ್ಲ ಐಪಿಎಲ್‌ಗ‌ಳಲ್ಲಿ 300 ರನ್‌ ಗಡಿದಾಟಿದ ಸಾಧನೆಯನ್ನು ತಪ್ಪಿಸಿಕೊಂಡಿದ್ದಾರೆ. ಆದರೆ ಸುರೇಶ್‌ ರೈನಾ ಈ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅವರು ಈ ಐಪಿಎಲ್‌ ಕೂಡ ಸೇರಿ ಹನ್ನೊಂದೂ ಕೂಟದಲ್ಲಿ 300 ರನ್‌ ಗಡಿದಾಟಿದ ಏಕೈಕ ಆಟಗಾರನಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next