Advertisement

ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ

06:00 AM Sep 23, 2018 | |

ದುಬಾೖ: ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ಭಾರತ, ಶುಕ್ರವಾರ ರಾತ್ರಿಯ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

Advertisement

ಘಾತಕ ಬೌಲಿಂಗ್‌ ಹಾಗೂ ನಾಯಕ ರೋಹಿತ್‌ ಶರ್ಮ ಅವರ ಆಕರ್ಷಕ ಬ್ಯಾಟಿಂಗ್‌ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಬಾಂಗ್ಲಾದೇಶ 49.1 ಓವರ್‌ಗಳಲ್ಲಿ 173 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿದರೆ, ಭಾರತ 36.2 ಓವರ್‌ಗಳಲ್ಲಿ 3 ವಿಕೆಟಿಗೆ 174 ರನ್‌ ಬಾರಿಸಿ ಗೆಲುವು ಸಾಧಿಸಿತು.

ಆಗ ಕಪ್ತಾನ ರೋಹಿತ್‌ ಶರ್ಮ 83 ರನ್‌ ಗಳಿಸಿ ಅಜೇಯರಾಗಿದ್ದರು (104 ಎಸೆತ, 5 ಬೌಂಡರಿ, 3 ಸಿಕ್ಸರ್‌). ಶಿಖರ್‌ ಧವನ್‌ 47 ಎಸೆತಗಳಿಂದ 40 ರನ್‌ ಹೊಡೆದರು (4 ಬೌಂಡರಿ, 1 ಸಿಕ್ಸರ್‌). ಇವರಿಬ್ಬರಿಂದ ಮೊದಲ ವಿಕೆಟಿಗೆ 14.2 ಓವರ್‌ಗಳಿಂದ 61 ರನ್‌ ಒಟ್ಟುಗೂಡಿತು.

ಅಂಬಾಟಿ ರಾಯುಡು ಕೇವಲ 13 ರನ್‌ ಮಾಡಿ ನಿರ್ಗಮಿಸಿದರೆ, ಧೋನಿ ಈ ಕೂಟದಲ್ಲಿ ಮೊದಲ ಸಲ ಖಾತೆ ತೆರೆದು 33 ರನ್‌ ಹೊಡೆದರು (37 ಎಸೆತ, 3 ಬೌಂಡರಿ). ಭಾರತದ ಗೆಲುವಿಗೆ ಇನ್ನೇನು ಕೇವಲ 4 ರನ್‌ ಬೇಕೆನ್ನುವಾಗ ಧೋನಿ ವಿಕೆಟ್‌ ಉರುಳಿತು.

ಇದಕ್ಕೂ ಮುನ್ನ ರವೀಂದ್ರ ಜಡೇಜ (29ಕ್ಕೆ 4), ಭುವನೇಶ್ವರ್‌ ಕುಮಾರ್‌ (32ಕ್ಕೆ 3) ಮತ್ತು ಜಸ್‌ಪ್ರೀತ್‌ ಬುಮ್ರಾ (37ಕ್ಕೆ 3) ಘಾತಕ ಬೌಲಿಂಗ್‌ ಸಂಘಟಿಸಿ ಬಾಂಗ್ಲಾವನ್ನು ಕಟ್ಟಿಹಾಕಿದ್ದರು.

Advertisement

ಸ್ಕೋರ್‌ಪಟ್ಟಿ
ಬಾಂಗ್ಲಾದೇಶ    49.1 ಓವರ್‌ಗಳಲ್ಲಿ 173
ಭಾರತ
ರೋಹಿತ್‌ ಶರ್ಮ    ಔಟಾಗದೆ    83
ಶಿಖರ್‌ ಧವನ್‌    ಎಲ್‌ಬಿಡಬ್ಲ್ಯು ಶಕಿಬ್‌    40
ಅಂಬಾಟಿ ರಾಯುಡು    ಸಿ ರಹೀಂ ಬಿ ರುಬೆಲ್‌    13
ಎಂ.ಎಸ್‌. ಧೋನಿ    ಸಿ ಮಿಥುನ್‌ ಬಿ ಮೊರ್ತಜ    33
ದಿನೇಶ್‌ ಕಾರ್ತಿಕ್‌    ಔಟಾಗದೆ    1
ಇತರ        4
ಒಟ್ಟು  (36.2 ಓವರ್‌ಗಳಲ್ಲಿ 3 ವಿಕೆಟಿಗೆ)        174
ವಿಕೆಟ್‌ ಪತನ: 1-61, 2-106, 3-170.
ಬೌಲಿಂಗ್‌:
ಮಶ್ರಫೆ ಮೊರ್ತಜ        5-0-30-1
ಮೆಹಿದಿ ಹಸನ್‌ ಮಿರಾಜ್‌        10-0-38-0
ಮುಸ್ತಫಿಜುರ್‌ ರೆಹಮಾನ್‌        7-0-40-0
ಶಕಿಬ್‌ ಅಲ್‌ ಹಸನ್‌        9.2-0-44-1
ರುಬೆಲ್‌ ಹೊಸೇನ್‌        5-0-21-1
ಪಂದ್ಯಶ್ರೇಷ್ಠ: ರವೀಂದ್ರ ಜಡೇಜ

ಎಕ್ಸ್‌ಟ್ರಾ ಇನ್ನಿಂಗ್ಸ್‌
ಭಾರತ-ಬಾಂಗ್ಲಾದೇಶ

* ರೋಹಿತ್‌ ಶರ್ಮ ಏಶ್ಯ ಕಪ್‌ನಲ್ಲಿ ಸತತ 2 ಅರ್ಧ ಶತಕ ಹೊಡೆದ 5ನೇ, ಭಾರತದ 2ನೇ ನಾಯಕನೆನಿಸಿದರು. ಇದಕ್ಕೂ ಮುನ್ನ ಮಹೇಂದ್ರ ಸಿಂಗ್‌ ಧೋನಿ 2008ರ ಕೂಟದಲ್ಲಿ ಪಾಕಿಸ್ಥಾನ ವಿರುದ್ಧ 76, ಶ್ರೀಲಂಕಾ ವಿರುದ್ಧ 67 ರನ್‌ ಹೊಡೆದಿದ್ದರು.
* ರವೀಂದ್ರ ಜಡೇಜ ಸತತ 2 ಏಶ್ಯ ಕಪ್‌ ಪಂದ್ಯಗಳಲ್ಲಿ 4 ವಿಕೆಟ್‌ ಹಾರಿಸಿದನ ಭಾರತದ ಮೊದಲ, ವಿಶ್ವದ 3ನೇ ಬೌಲರ್‌ ಎನಿಸಿದರು. ಜಡೇಜ ಕೊನೆಯ ಸಲ ಏಶ್ಯ ಕಪ್‌ ಪಂದ್ಯವಾಡಿದ್ದು 2014ರಲ್ಲಿ, ಅಫ್ಘಾನಿಸ್ಥಾನ ವಿರುದ್ಧ. ಆ ಪಂದ್ಯದಲ್ಲಿ 30 ರನ್ನಿಗೆ 4 ವಿಕೆಟ್‌ ಉರುಳಿಸಿದ್ದರು. ಉಳಿದಿಬ್ಬರು ಬೌಲರ್‌ಗಳೆಂದರೆ ಶ್ರೀಲಂಕಾದ ಅಜಂತ ಮೆಂಡಿಸ್‌ ಮತ್ತು ಲಸಿತ ಮಾಲಿಂಗ.
* ರವೀಂದ್ರ ಜಡೇಜ 29 ರನ್ನಿಗೆ 4 ವಿಕೆಟ್‌ ಕಿತ್ತರು. ಇದು ಏಶ್ಯ ಕಪ್‌ನಲ್ಲಿ ಎಡಗೈ ಸ್ಪಿನ್ನರ್‌ ಓರ್ವನ ಅತ್ಯುತ್ತಮ ಪ್ರದರ್ಶನ. ಈ ಸಂದರ್ಭದಲ್ಲಿ ಜಡೇಜ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿದರು. 2014ರಲ್ಲಿ ಅಫ್ಘಾನಿಸ್ಥಾನ ವಿರುದ್ಧ ಅವರು 30 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉರುಳಿಸಿದ್ದು ದಾಖಲೆಯಾಗಿತ್ತು.
* ರವೀಂದ್ರ ಜಡೇಜ 72.1 ಓವರ್‌ಗಳ ಬಳಿಕ “ಲಿಸ್ಟ್‌ ಎ’ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ ಉರುಳಿಸಿದರು. ಇದಕ್ಕೂ ಮುನ್ನ 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೊನೆಯ ವಿಕೆಟ್‌ ಉರುಳಿಸಿದ್ದರು. ಕಾಕತಾಳೀಯವೆಂದರೆ, ಈ ಎರಡೂ ವಿಕೆಟ್‌ ಶಕಿಬ್‌ ಅಲ್‌ ಹಸನ್‌ ಅವರದಾಗಿತ್ತು!
* ಶಿಖರ್‌ ಧವನ್‌ ಏಕದಿನ ಪಂದ್ಯವೊಂದರಲ್ಲಿ 4 ಕ್ಯಾಚ್‌ ಪಡೆದ ಭಾರತದ 7ನೇ ಕ್ಷೇತ್ರರಕ್ಷಕನೆನಿಸಿದರು. ವಿವಿಎಸ್‌ ಲಕ್ಷ್ಮಣ್‌ 2004ರಲ್ಲಿ ಕೊನೆಯ ಸಲ ಈ ಸಾಧನೆ ಮಾಡಿದ್ದರು. ಉಳಿದ ಭಾರತೀಯ ಸಾಧಕರೆಂದರೆ ಗಾವಸ್ಕರ್‌, ಅಜರುದ್ದೀನ್‌, ತೆಂಡುಲ್ಕರ್‌, ದ್ರಾವಿಡ್‌ ಮತ್ತು ಕೈಫ್.
* ರೋಹಿತ್‌ ಶರ್ಮ 2015ರ ಬಳಿಕ ಬಾಂಗ್ಲಾದೇಶ ವಿರುದ್ಧ 108.75 ಬ್ಯಾಟಿಂಗ್‌ ಸರಾಸರಿ ದಾಖಲಿಸಿದ್ದಾರೆ. ಈ ಅವಧಿಯ 6 ಇನ್ನಿಂಗ್ಸ್‌ಗಳಲ್ಲಿ ಅವರು 435 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಶತಕ, 2 ಅರ್ಧ ಶತಕಗಳಿವೆ.
* 2010ರ ಬಳಿಕ, ಏಶ್ಯದಲ್ಲಿ ಆಡಲಾದ ಪಂದ್ಯದಲ್ಲಿ ಭಾರತದ ಇಬ್ಬರು ಆರಂಭಿಕ ಪೇಸ್‌ ಬೌಲರ್‌ಗಳು ತಲಾ 3 ವಿಕೆಟ್‌ ಕಿತ್ತರು. ಅಂದು ನ್ಯೂಜಿಲ್ಯಾಂಡ್‌ ವಿರುದ್ಧದ ಡಂಬುಲ ಪಂದ್ಯದಲ್ಲಿ ಈ ಸಾಧನೆ ದಾಖಲಾಗಿತ್ತು. ಅಂದು ಆಶಿಷ್‌ ನೆಹ್ರಾ 4, ಪ್ರವೀಣ್‌ ಕುಮಾರ್‌ 3 ವಿಕೆಟ್‌ ಸಂಪಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next