Advertisement

ತಂದೆಯಾದ ರೋಹಿತ್‌ ಸಿಡ್ನಿ ಟೆಸ್ಟ್‌ ಪಂದ್ಯಕ್ಕಿಲ್ಲ

12:30 AM Jan 01, 2019 | Team Udayavani |

ಮುಂಬಯಿ: ಭಾರತದ ಕ್ರಿಕೆಟಿಗ ರೋಹಿತ್‌ ಶರ್ಮ ವರ್ಷಾಂತ್ಯದಲ್ಲಿ ತಂದೆಯಾದ ಖುಷಿಯಲ್ಲಿದ್ದಾರೆ. ಅವರ ಪತ್ನಿ ರಿತಿಕಾ ಸೋಮವಾರ ಹೆಣ್ಣು ಮಗುವಿಗೆ ಜನ್ಮವಿತ್ತರು. ಸುದ್ದಿ ತಿಳಿದ ರೋಹಿತ್‌ ಶರ್ಮ ಮುಂಬಯಿಗೆ ವಿಮಾನವೇರಿದ್ದು, ಜ. 3ರಿಂದ ಆರಂಭವಾಗಲಿರುವ ನ್ಯೂ ಇಯರ್‌ ಟೆಸ್ಟ್‌ ಪಂದ್ಯಕ್ಕೆ ಲಭ್ಯರಿರುವುದಿಲ್ಲ.

Advertisement

ರೋಹಿತ್‌ ಶರ್ಮ ಅವರಿನ್ನು ಜ. 12ರಿಂದ ಆರಂಭವಾಗಲಿರುವ ಏಕದಿನ ಸರಣಿಯ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ರೋಹಿತ್‌ ಶರ್ಮ ಅಡಿಲೇಡ್‌ನ‌ಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡುವ ಬಳಗದಲ್ಲಿದ್ದರು (37 ಮತ್ತು ಒಂದು ರನ್‌). ಬಳಿಕ ಪರ್ತ್‌ ಟೆಸ್ಟ್‌ ಪಂದ್ಯದಿಂದ ಕೈಬಿಡಲಾಗಿತ್ತು. ಮೆಲ್ಬರ್ನ್ ಟೆಸ್ಟ್‌ನಲ್ಲಿ ಪುನಃ ತಂಡವನ್ನು ಪ್ರವೇಶಿಸಿ ಅಜೇಯ 63 ಹಾಗೂ 5 ರನ್‌ ಮಾಡಿದ್ದರು. ರೋಹಿತ್‌ ಆಡಿದ ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು.ರೋಹಿತ್‌ಗೆ ಬದಲಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಇಲ್ಲ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಈ ಸ್ಥಾನ ತುಂಬಬಹುದು.

Advertisement

Udayavani is now on Telegram. Click here to join our channel and stay updated with the latest news.

Next